ಇಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

| Published : Dec 12 2024, 12:30 AM IST

ಸಾರಾಂಶ

ಗೂಂಡಾ ವರ್ತನೆ ವಿರೋಧಿಸಿ ಡಿ.12ರಂದು ಮಹಾಲಿಂಗಪುರದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಂಚಮಸಾಲಿ ಸಮಾಜದ ಮುಖಂಡರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಂಚಮಸಾಲಿ ಸಮಾಜದ ಪ್ರತಿಭಟನಾಕಾರರ ಮೇಲೆ ಮನಸೋ ಇಚ್ಛೆ ಲಾಠಿ ಬೀಸುವ ಮೂಲಕ ದಬ್ಬಾಳಿಕೆ ಮೆರೆದ ಸರ್ಕಾರದ ಕ್ರಮ ಖಂಡನೀಯವಾದುದು. ಈ ಗೂಂಡಾ ವರ್ತನೆ ವಿರೋಧಿಸಿ ಡಿ.12ರಂದು ಮಹಾಲಿಂಗಪುರದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಂಚಮಸಾಲಿ ಸಮಾಜದ ಮುಖಂಡರು ತಿಳಿಸಿದ್ದಾರೆ.

ಪಟ್ಟಣದ ಅಸರ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ನ್ಯಾಯಕ್ಕಾಗಿ ಆಗ್ರಹಿಸಿ ಸಿಎಂಗೆ ಭೇಟಿಯಾಗಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ತಡೆದು ನಿರ್ದಾಕ್ಷಿಣ್ಯವಾಗಿ ಥಳಿಸಿದ್ದಲ್ಲದೇ ಪೂಜ್ಯ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಮುಂಖಡರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಈರಣ್ಣ ಕಡಾಡಿ, ಎಚ್.ಎಸ್.ಶಿವಶಂಕರರನ್ನು ಬಂಧಿಸಿ ಸಮಾಜಕ್ಕೆ ಅಮಾನವೀಯ ದೌರ್ಜನ್ಯ ಎಸಗಿದ್ದಾರೆ. ಈ ವರ್ತನೆ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.