ಶಿಗ್ಗಾಂವಿ: ರಸಗೊಬ್ಬರ ಖರೀದಿಗೆ ರೈತರಿಗೆ ಎಫ್‌ಐಡಿ ಕಡ್ಡಾಯ ಮಾಡಿರುವುದನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು, ಕಬ್ಬು ಬೆಳೆಗಾರರ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಶನಿವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ರಸಗೊಬ್ಬರ ಕಡ್ಡಾಯಗೊಳಿಸಿರುವುದರಿಂದ ಖರೀದಿಗೆ ರೈತರಿಗೆ ಮುಂದಿನ ದಿನಗಳಲ್ಲಿ ತುಂಬಾ ತೊಂದರೆಯಾಗಲಿದೆ. ರೈತರು ಎಕರೆಗೆ ಮೂರ್ನಾಲ್ಕು ಚೀಲ ರಸಗೊಬ್ಬರ ಬಳಸುವುದು ಸಾಮಾನ್ಯವಾಗಿದೆ. ಆದರೆ, ಸರ್ಕಾರ ಎಫ್‌ಐಡಿ ಕಡ್ಡಾಯ ಜಾರಿಗೊಳಿಸುವ ಮೂಲಕ ಪ್ರತಿ ರೈತರಿಗೆ ಒಂದು ಚೀಲ ಗೊಬ್ಬರ ವಿತರಣೆ ಮಾಡುವ ಹುನ್ನಾರ ನಡೆಸಿದೆ. ತಕ್ಷಣವೇ ಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ರದ್ದು ಮಾಡಬೇಕು ಎಂದರು.ರೈತ ಸಂಘದ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಚೀಲಗೊಬ್ಬರ ವಿತರಣೆ ಮಾಡುವ ಹುನ್ನಾರ ನಡೆಸಿದೆ. ತಕ್ಷಣವೇ ಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ರದ್ದು ಮಾಡಬೇಕು ಎಂದರು.ರೈತ ಸಂಘದ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಬೆಳೆಗೆ ಅಗತ್ಯವಿರುವಷ್ಟು ರಸಗೊಬ್ಬರ ದೊರೆಯದಿದ್ದಲ್ಲಿ ಬೆಳೆಗಳ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಎಫ್‌ಐಡಿ ಕಡ್ಡಾಯ ನಿಯಮ ಸರ್ಕಾರ ಕೂಡಲೇ ಕೈಬಿಡಬೇಕು. ತಾಲೂಕಿನ ಗೊಬ್ಬರ ವ್ಯಾಪಾರಸ್ಥರು ರೈತರಿಗೆ ಲಿಂಕ್ ಮೂಲಕ ಗೊಬ್ಬರ ಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು. ರೈತನಿಗೆ ಅವಶ್ಯವಿರುವ ಗೊಬ್ಬರವನ್ನು ಸರ್ಕಾರಗಳು ಸಮರ್ಪಕವಾಗಿ ಪೂರೈಸಬೇಕು ಎಂದು ಒತ್ತಾಯಿಸಿದರು.ಪಟ್ಟಣದ ಪೋಸ್ಟ್ ಆಫೀಸ್‌ನಿಂದ ರೈತ ಮುಖಂಡರು ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಕೃಷಿ ಇಲಾಖೆ ಉಪ ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಸಂತೋಷಗೌಡ ಪಾಟೀಲ, ಬಸಲಿಂಗಪ್ಪ ನರಗುಂದ, ಮಂಜುನಾಥ ಕಂಕನವಾಡ , ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಹನುಮಂತಗೌಡ ಏಗನಗೌಡ, ಶಂಭು ನಂದಿ, ಬಸನಗೌಡ್ರ ಏಗನಗೌಡ್ರ, ಬಸವರಾಜ ಗಂಜಿಗಟ್ಟಿ, ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಫ್‌ಐಡಿ ಕಡ್ಡಾಯ ರದ್ದುಗೊಳಿಸಲು ಆಗ್ರಹಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ
ಶಿಗ್ಗಾಂವಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಕೃಷಿ ಇಲಾಖೆ ಉಪ ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ ಅವರಿಗೆ ವಿವಿಧ ರೈತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ಭುವನೇಶ್ವರ ಶಿಡ್ಲಾಪುರ, ಸಂತೋಷಗೌಡ ಪಾಟೀಲ, ಬಸಲಿಂಗಪ್ಪ ನರಗುಂದ ಇತರರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.