ಅಂಜಲಿ ಹತ್ಯೆ ಖಂಡಿಸಿ ಗಂಗಾಮತಸ್ಥ ಸಂಘದಿಂದ ಪ್ರತಿಭಟನೆ

| Published : May 18 2024, 12:35 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಯುವತಿ ಹತ್ಯೆ ಖಂಡಿಸಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬ್ಯಾಡಗಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಯುವತಿ ಹತ್ಯೆ ಖಂಡಿಸಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಹಳೆ ಪೊಲೀಸ್ ಠಾಣೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಕೋಳ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜನಾಥ ಭೋವಿ, ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ನಿರಂತರವಾಗಿ ಯುವತಿಯರನ್ನೆ ಟಾರ್ಗೆಟ್ ಮಾಡಿ ಹತ್ಯೆಗಳು ನಡೆಯುತ್ತಿವೆ. ಯಾರಿಗೂ ಕಾನೂನಿನ ಭಯವಿಲ್ಲದಂತಾಗಿದ್ದು, ಕೂಡಲೇ ಸರಕಾರ ವಿಶೇಷ ಕಾನೂನು ಜಾರಿಗೆ ತಂದು ಇಂತಹ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಆಗ್ರಹಿಸಿದರು.

ಎನ್‌ಕೌಂಟರ್ ಮಾಡಿ: ಶಿವಯೋಗಿ ಶಿರೂರ ಮಾತನಾಡಿ, ಕಳೆದ ಒಂದು ತಿಂಗಳಲ್ಲಿ ನಡೆದ ಮೂರು ಯುವತಿಯರ ಹತ್ಯೆಗಳು ರಾಜ್ಯವನ್ನೆ ಬೆಚ್ಚಿ ಬೀಳಿಸಿವೆ, ನೇಹಾ ಹಿರೇಮಠ ಹತ್ಯೆ ಜನರ ಮನಸ್ಸಿಂದ ಮಾಸುವ ಮುನ್ನವೆ ಮತ್ತೊಬ್ಬ ಯುವತಿಯ ತಲೆ ಕಡಿದು ಹತ್ಯೆ ಮಾಡಿದ ಘಟನೆ ನಡೆದಿದೆ. ಇದೀಗ ಮತ್ತೆ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯನ್ನ ಹತ್ಯೆ ಮಾಡಿದ್ದು ರಾಜ್ಯದಲ್ಲಿ ಕಾನೂನು ಸುವ್ವವಸ್ಥೆ ಸಂಪೂರ್ಣ ಹಾಳಾಗಿದ್ದು, ಸರಕಾರ ಇಂತಹ ಅಪರಾಧಿಗಳನ್ನ ಜೈಲಿಗೆ ಹಾಕುವ ಬದಲು ಎನಕೌಂಟರ್ ಮಾಡುವಂತೆ ಆಗ್ರಹಿಸಿದರು. ಜೀತೇಂದ್ರ ಸುಣಗಾರ ಮಾತನಾಡಿ, ಅಂಜಲಿ ಅಂಬಿಗೇರ ಯುವತಿ ಮನೆಗೆ ನುಗ್ಗಿ ಎಲ್ಲರ ಮುಂದೆಯೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು ನೋಡಿದರೆ ರಾಜ್ಯ ಆಗಂತುಕರ ಬೀಡಾಗುತ್ತಿದೆ, ರಾಜ್ಯದಲ್ಲಿ ಕಳೆದ ಕೆಲ ತಿಂಗಳಲ್ಲಿ ಕೊಲೆ ಹಾಗೂ ಅಪರಾಧ ಕೃತ್ಯಗಳು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇಂತಹ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ನಿಂಗಪ್ಪ ಹೆಗ್ಗಣ್ಣನವರ, ಹೊನ್ನಪ್ಪ ಸಣ್ಣಬಾರ್ಕಿ ಸೇರಿದಂತೆ ಸುರೇಶಪ್ಪ ಚಿಕ್ಕಬಾಸೂರ, ಶೇಖಪ್ಪ ಮೋಟೆ ಬೆನ್ನೂರ, ವಿರೇಶ ತರೇದಹಳ್ಳಿ, ನಿಂಗಪ್ಪ ಮಾಸಣಗಿ, ಮಾಲತೇಶ ದೇವಗಿರಿ, ಚಂದ್ರಪ್ಪ ದೊಡ್ಡಮನಿ, ಮಂಜಣ್ಣ ಸುಣಗಾರ ಸೇರಿದಂತೆ ಹಲವು ಭಾಗವಹಿಸಿದ್ದರು.