ಸಾರಾಂಶ
ಕಡೂರು, ವೈದ್ಯೆ ಮೇಲಿನ ರೇಪ್ ಮತ್ತು ಹತ್ಯೆ ಖಂಡಿಸಿ ಕಡೂರು ತಾಲೂಕು ವೈದ್ಯಕೀಯ ಸಂಘದಿಂದ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ, ಕಡೂರು
ವೈದ್ಯೆ ಮೇಲಿನ ರೇಪ್ ಮತ್ತು ಹತ್ಯೆ ಖಂಡಿಸಿ ಕಡೂರು ತಾಲೂಕು ವೈದ್ಯಕೀಯ ಸಂಘದಿಂದ ಪ್ರತಿಭಟನೆ ನಡೆಯಿತು.ಕೊಲ್ಕತ್ತಾದ ಆರ್ ಜೆ ಮೆಡಿಕಲ್ ಕಾಲೇಜಿನ ವೈದ್ಯೆಯನ್ನು ರೇಪ್ ಮಾಡಿ ಹತ್ಯೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲಿಸಿ ಕಡೂರು ತಾಲೂಕಿನ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ವಾಸುದೇವಮೂರ್ತಿ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ, ಪ್ರತಿಭಟಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಿಂದ ಕೆಎಲ್‌ವಿ ವೃತ್ತದ ಮೂಲಕ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಜೈನ್ ಟೆಂಪಲ್ ರಸ್ತೆಯಿಂದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮನವಿ ಅರ್ಪಿಸಿದರು. ಇದೇ ಸಂದರ್ಭದಲ್ಲಿ ವೈದ್ಯರಾದ ಡಾ. ಚಂದ್ರಶೇಖರ್, ಡಾ. ಶರತ್ ಆರ್ ಯಜಮಾನ್, ಡಾ. ಬಸವಂತಪ್ಪ,ಡಾ,ದಿನೇಶ್, ಡಾ.ಪೂರ್ಣಿಮಾ, ಡಾ.ಕೆಂಚೇಗೌಡ, ಡಾ.ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.-- ಬಾಕ್ಸ್ --
ಪ್ರತಿಭಟನೆಯಿಂದ ಕಡೂರು ತಾಲೂಕಿನ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ ಖಾಸಗಿ ಆಸ್ಪತ್ರೆಗಳು ಶನಿವಾರ ಬೆಳಗಿನ 6 ಗಂಟೆಯಿಂದ ಬಂದ್ ಆಗಿತ್ತು. ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಗ್ರಾಮೀಣ ಭಾಗಗಳಿಂದ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ತೊಂದರೆ ಉಂಟಾಯಿತು. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚು ಕಂಡುಬಂದರು.