ಇಂದು ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

| Published : Dec 12 2024, 12:31 AM IST

ಸಾರಾಂಶ

ಪಂಚಮಸಾಲಿ ಸಮಾಜ ಹಾಗೂ ನಗರ ಘಟಕದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ತಡೆ ಚಳವಳಿಯನ್ನು ನಡೆಸಲು ನಿರ್ಧರಿಸಲಾಯಿತು.

ತಾಳಿಕೋಟೆ: ೨ಎ ಮೀಸಲಾತಿ ಒದಗಿಸಬೇಕೆಂದು ಸಮಾಜದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ಕಾಂಗ್ರೆಸ್ ಸರ್ಕಾರವು ಪೊಲೀಸರಿಂದ ಲಾಠಿ ಚಾರ್ಜ್‌ ಮಾಡಿಸಿ ಶಾಂತಿಯುತ ಹೋರಾಟಕ್ಕೆ ಭಂಗ ತಂದಿರುವುದನ್ನು ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜ ಹಾಗೂ ನಗರ ಘಟಕದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ತಡೆ ಚಳವಳಿಯನ್ನು ನಡೆಸಲು ನಿರ್ಧರಿಸಲಾಯಿತು.

ಬೆಳಗ್ಗೆ ೧೦ಕ್ಕೆ ಶ್ರೀ ವಿಠ್ಠಲ ಮಂದಿರದಲ್ಲಿ ತಾಲೂಕಿನ ಎಲ್ಲ ಪಂಚಮಸಾಲಿ ಸಮಾಜದವರು ಪಾಲ್ಗೊಳ್ಳುವುದರೊಂದಿಗೆ ಪ್ರತಿಭಟನೆ ಆರಂಭಿಸಿ ಶಿವಾಜಿ ಮಹಾರಾಜರ ವೃತ್ತದ ಮೂಲಕ, ಮಹಾರಾಣಾಪ್ರತಾಪ ಸರ್ಕಲ್, ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಮೂಲಕ ಶ್ರೀ ಬಸವೇಶ್ವರ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಸಭೆಯಲ್ಲಿ ಸಮಾಜದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ, ಕಾಶಿನಾಥ ಮುರಾಳ, ಆರ್.ವೈ.ಜಾಲವಾದಿ, ಡಿ.ವಿ.ಪಾಟೀಲ, ಪ್ರಕಾಶ ಸಾಸಾಬಾಳ, ಬಸ್ಸು ಕಶೆಟ್ಟಿ, ಕುಮಾರಗೌಡ ಪಾಟೀಲ, ಪ್ರಭು ಬಿಳೇಭಾವಿ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ನಾಗಪ್ಪ ಚಿನಗುಡಿ, ಈಶ್ವರಪ್ಪ ಬಿಳೇಭಾವಿ, ಚನಬಸು ದೇಸಾಯಿ, ನಿಂಗು ಕುಂಟೋಜಿ, ಸಂಗನಗೌಡ ಪಾಟೀಲ, ಸಿದ್ದಲಿಂಗ ಸರೂರ, ಬಸನಗೌಡ ಪಾಟೀಲ, ಮುತ್ತುಗೌಡ ಪಾಟೀಲ, ಎಂ.ಎಂ.ಪಾಟೀಲ, ವಿಶ್ವನಾಥ ಪಾಟೀಲ, ಮಯೂರ ಪಾಟೀಲ, ವಿರೇಶ ಬಾಗೇವಾಡಿ, ರಾಮನಗೌಡ ಬಾಗೇವಾಡಿ, ಅಪ್ಪು ಆನೇಸೂರ, ವಿಶ್ವನಾಥ ಬಿದರಕುಂದಿ, ಕಲ್ಲನಗೌಡ ಪಾಟೀಲ, ಮುತ್ತು ಕಶೆಟ್ಟಿ, ಡಾ.ಶ್ರೀಶೈಲ ಹುಕ್ಕೇರಿ, ಗುರುಸಂಗ ಕಶೆಟ್ಟಿ, ಕಾಶಿನಾಥ ಪರಂಪೂರ, ಮೊದಲಾದವರು ಇದ್ದರು.