ಊಗಿನಹಳ್ಳಿ ಕೊಪ್ಪಲು, ಉದ್ದಿನಮಲ್ಲನ ಹೊಸೂರು, ಗಾಣದಹಳ್ಳಿ, ಮಂಡಲೀಕನಹಳ್ಳಿ, ಮಾದಾಪುರ, ಐಕನಹಳ್ಳಿ, ತುಳಸಿ, ಗೂಡೇಹೊಸಹಳ್ಳಿ, ಕಡಹೆಮ್ಮಿಗೆ ಮತ್ತಿತರ ಹಳ್ಳಿಗಳ ಸಂಪರ್ಕ ಕೇಂದ್ರವಾಗಿದೆ. ಈ ಗ್ರಾಮಗಳಿಂದ ನಿತ್ಯಕಾಲ್ನಡಿಗೆಯಲ್ಲಿ ಹೋಬಳಿ ಕೇಂದ್ರವಾದ ಕಿಕ್ಕೇರಿಗೆ ತೆರಳಿ ದೂರದ ಊರುಗಳಿಗೆ ತೆರಳಬೇಕಿದೆ.

ಕಿಕ್ಕೇರಿ:

ಹಳ್ಳಿಗಾಡಿನ ಜನತೆ ಹೋಬಳಿ ಕೇಂದ್ರಕ್ಕೆ ಓಡಾಡಲು ಬಸ್ ಸೌಲಭ್ಯವಿಲ್ಲದೆ ನಿತ್ಯ ಪರದಾಡುವಂತಾಗಿದೆ. ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಕಳಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿಯ ಮಾದಾಪುರಗೇಟ್ ಬಳಿ ಈ ವ್ಯಾಪ್ತಿಯ ಸುತ್ತಮುತ್ತಲ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಬಸ್ ನಿಲುಗಡೆಗಾಗಿ ಸಾರಿಗೆ ಬಸ್ ನಿಲುಗಡೆ ಮಾಡಿ ತಮ್ಮ ಬೇಡಿಕೆ ಪೂರೈಕೆಗೆ ಒತ್ತಾಯಿಸಿದರು.

ಬಸ್ ನಿಲುಗಡೆಗೆ ಆದೇಶವಿದ್ದರೂ ಬಸ್ ನಿಲ್ಲಿಸುತ್ತಿಲ್ಲ. ಪರಿಣಾಮ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು, ಕೂಲಿಕಾರ್ಮಿಕರಿಗೆ, ವಯೋವೃದ್ಧರಿಗೆ, ರೋಗಿಗಳಿಗೆ ಬಹಳ ತೊಂದರೆಯಾಗುತ್ತಿದೆಎಂದುಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಊಗಿನಹಳ್ಳಿ, ಊಗಿನಹಳ್ಳಿ ಕೊಪ್ಪಲು, ಉದ್ದಿನಮಲ್ಲನ ಹೊಸೂರು, ಗಾಣದಹಳ್ಳಿ, ಮಂಡಲೀಕನಹಳ್ಳಿ, ಮಾದಾಪುರ, ಐಕನಹಳ್ಳಿ, ತುಳಸಿ, ಗೂಡೇಹೊಸಹಳ್ಳಿ, ಕಡಹೆಮ್ಮಿಗೆ ಮತ್ತಿತರ ಹಳ್ಳಿಗಳ ಸಂಪರ್ಕ ಕೇಂದ್ರವಾಗಿದೆ. ಈ ಗ್ರಾಮಗಳಿಂದ ನಿತ್ಯಕಾಲ್ನಡಿಗೆಯಲ್ಲಿ ಹೋಬಳಿ ಕೇಂದ್ರವಾದ ಕಿಕ್ಕೇರಿಗೆ ತೆರಳಿ ದೂರದ ಊರುಗಳಿಗೆ ತೆರಳಬೇಕಿದೆ ಎಂದು ಕಿಡಿಕಾರಿದರು.

ಮಳೆ, ಗಾಳಿ, ಬಿಸಿಲಿನಲ್ಲಿ ಓಡಾಡಲು ದೊಡ್ಡ ಸಮಸ್ಯೆಯಾಗಿದೆ. ಸಾಕಷ್ಟು ಬಾರಿ ರಸ್ತೆ ತಡೆಯೊಂದಿಗೆ ಪ್ರತಿಭಟನೆ ನಡೆಸಿದೆ. ಬಸ್ ಕಂಡಕ್ಟರ್ ಮಾದಾಪುರ ಗೇಟ್‌ಗೆ ಟಿಕೆಟ್ ಬರುತ್ತಿಲ್ಲ ಎನ್ನುವ ಸಬೂಬು ನೀಡುತ್ತಾರೆ. ಆದರೆ, ಚಿಕ್ಕಮಗಳೂರು, ಅರಸೀಕೆರೆ ಡಿಪೋದವರು ಟಿಕೆಟ್‌ ಕೊಡುತ್ತಾರೆ. ಇದು ಹೇಗೆ ಸಾಧ್ಯ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ನೀಡುವವರಿಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಕೆ.ಆರ್.ಪೇಟೆ ಸಂಚಾರಿ ನಿಯಂತ್ರಣಾಧಿಕಾರಿ ಕೃಷ್ಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಮನವೊಲಿಸಿದರು. ಎಲ್ಲ ವಾಹನಗಳು ನಿಲುಗಡೆ ಮಾಡುವಂತೆ, ಟಿಕೆಟ್ ನೀಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಾದಾಪುರ ಎಂ.ಕೆ.ರಾಮಕೃಷ್ಣೇಗೌಡ, ತುಳಸಿ ನಾಗೇಗೌಡ, ರಾಜೇಗೌಡ, ಮಂಡಲೀಕನಹಳ್ಳಿ ವೆಂಕಟೇಶ್, ಸಣ್ಣೇಗೌಡ, ಧನಂಜಯ, ಪ್ರದೀಪ್, ಎಲ್‌ಐಸಿ ಪುಟ್ಟರಾಜು,ಧರಣೇಶ್, ಕಿರಣ್, ವರುಣ್, ವಿದ್ಯಾರ್ಥಿಗಳು ಇದ್ದರು.