ರಸ್ತೆ ಗುಂಡಿಬಿದ್ದಿರುವ ಸ್ಥಳದಲ್ಲಿ ಮರದ ನೆರಳು ಇರುವುದರಿಂದ ಗುಂಡಿ ವಾಹನ ಸವಾರರಿಗೆ ಕಾಣುವುದಿಲ್ಲ. ಇದರಿಂದ ವೇಗವಾಗಿ ಬರುವ ಸವಾರರು ತಕ್ಷಣ ಗುಂಡಿನೋಡಿ ಬ್ರೇಕ್ ಹಾಕಿದಾಗ ಹಿಂದೆ ಬರುವ ವಾಹನ ಸವಾರರು ಡಿಕ್ಕಿ ಮುಂದಿನ ವಾಹನಕ್ಕೆ ಡಿಕ್ಕಿ ಮಾಡಿ ಅಪಘಾತಗಳು ಸಂಭವಿಸುತ್ತಿವೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಂಡ್ಯ- ಪಾಂಡವಪುರ ಮುಖ್ಯರಸ್ತೆಯ ಚಿಕ್ಕಮರಳಿ ಗೇಟ್ ಸಮೀಪ ಗುಂಡಿಬಿದ್ದು ರಸ್ತೆ ಅಧ್ವಾನಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಖಂಡಿಸಿ ಸ್ಥಳೀಯರೇ ಮುಂದೆ ನೀರು ನಿಂತು ಗುಂಡಿಗೆ ಮೀನು ಮರಿಗಳನ್ನು ಬಿಟ್ಟು ವಿನೂತನ ರೀತಿ ಪ್ರತಿಭಟನೆ ನಡೆಸಿದರು.ತಾಲೂಕಿನ ಚಿಕ್ಕಮರಳಿ ಗೇಟ್ ಬಳಿ ಮಂಡ್ಯ-ಪಾಂಡವಪುರ ಮುಖ್ಯರಸ್ತೆಯಲ್ಲಿ ಗುಂಡಿಬಿದ್ದು ಮಳೆಬಿದ್ದರೆ ರಸ್ತೆ ಗುಂಡಿ ತುಂಬೆಲ್ಲ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮೀನು ಮರಿಗಳನ್ನು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಗುಂಡಿಬಿದ್ದಿರುವ ಸ್ಥಳದಲ್ಲಿ ಮರದ ನೆರಳು ಇರುವುದರಿಂದ ಗುಂಡಿ ವಾಹನ ಸವಾರರಿಗೆ ಕಾಣುವುದಿಲ್ಲ. ಇದರಿಂದ ವೇಗವಾಗಿ ಬರುವ ಸವಾರರು ತಕ್ಷಣ ಗುಂಡಿನೋಡಿ ಬ್ರೇಕ್ ಹಾಕಿದಾಗ ಹಿಂದೆ ಬರುವ ವಾಹನ ಸವಾರರು ಡಿಕ್ಕಿ ಮುಂದಿನ ವಾಹನಕ್ಕೆ ಡಿಕ್ಕಿ ಮಾಡಿ ಅಪಘಾತಗಳು ಸಂಭವಿಸುತ್ತಿವೆ ಎಂದು ಕಿಡಿಕಾರಿದರು.ಬೈಕ್ ಸವಾರರು ಗುಂಡಿ ಕಾಣದೆ ಕೆಳಗೆ ಬಿದ್ದು ಗಾಯಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಇದೇ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಮಂಡ್ಯದಿಂದ ಪಾಂಡವಪುರಕ್ಕೆ ಸಂಚರಿಸುತ್ತಾರೆ. ಗುಂಡಿ ರಸ್ತೆಯನ್ನು ಕಂಡು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಚಿಕ್ಕಮರಳಿ ಗೇಟ್ ಬಳಿ ಹಲವು ವರ್ಷಗಳಿಂದಲೂ ಗುಂಡಿಬಿದಿದ್ದರೂ ಅಧಿಕಾರಿಗಳು ಇದನ್ನು ಸರಿಪಡಿಸದೇ ಚೆನ್ನಾಗಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ರಸ್ತೆಯ ಗುಂಡಿಯಲ್ಲಿ ಮಳೆ ನೀರು ನಿಂತು ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಮೀನು ಮರಿಗಳನ್ನು ಗುಂಡಿಗೆ ಬಿಟ್ಟು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.ಕೂಡಲೇ ರಸ್ತೆಯಲ್ಲಿ ಬಿದ್ದುರುವ ಗುಂಡಿಯನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದರೆ ರಸ್ತೆತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿನಯ್, ಯಶ್ವಂತ್, ಆನಂದ ಹಲವರು ಭಾಗವಹಿಸಿದ್ದರು.