ಶಂಕರೇಗೌಡರಪಾಳ್ಯ ನಿವಾಸಿಗಳ ಪ್ರತಿಭಟನೆ

| Published : Aug 15 2025, 01:00 AM IST

ಸಾರಾಂಶ

ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಂಕರೇಗೌಡರಪಾಳ್ಯ ನಿವಾಸಿಗಳು ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಂಕರೇಗೌಡರಪಾಳ್ಯ ನಿವಾಸಿಗಳು ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸುಮಾರು ನೂರಕ್ಕೂ ಅಧಿಕ ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿರುವ ರಸ್ತೆಯನ್ನು ಬಲಾಡ್ಯರ ಬೆಂಬಲದಿಂದ ಮುಚ್ಚಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ರಸ್ತೆ ಬಿಡಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳೀಯ ನಿವಾಸಿ ಸಿದ್ದರಾಜು ಮಾತನಾಡಿ, ಈ ಮೊದಲು ನಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆಯಿತ್ತು. ಇದೀಗ ಈ ರಸ್ತೆ ಮುಚ್ಚಿದ್ದಾರೆ, 25 ಎಕರೆ ಜಮೀನು ಕಬಳಿಸುವ ಹುನ್ನಾರದಿಂದ, ಸುಮಾರು 10 ಕುಟುಂಬಗಳು ನೆಲೆಸಿರುವ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದಂತಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಮಗೆ ರಸ್ತೆ ಬಿಡಿಸಿಕೊಡಬೇಕೆಂದು ಮನವಿ ಮಾಡಿದರು. ಹಿರಿಯ ಮುಖಂಡ ರಾಮಚಂದ್ರಯ್ಯ, ಹನುಮಂತರಾಜು, ಸಿದ್ದಗಂಗಯ್ಯ, ಶಿವಣ್ಣ, ಮಲ್ಲಿಕಾರ್ಜುನಯ್ಯ, ಮಂಜುನಾಥ್, ರೇಣುಕಮ್ಮ, ಜಗದೀಶ್, ರಾಜಣ್ಣ, ಸಂಪತ್, ಶಿವಕುಮಾರ್, ಶಾರದಮ್ಮ, ರತ್ನಮ್ಮ, ಸಾಕಮ್ಮ, ಮಂಜುಳ, ಶಿವಶಂಕರಯ್ಯ ಇತರರಿದ್ದರು.