ಪಾಲಿಕೆ 31ನೇ ವಾರ್ಡ್‌ನ ಎಸ್‌ಒಜಿ ಕಾಲನಿ ಎ ಬ್ಲಾಕ್‌ನ 40 ಅಡಿ ರಸ್ತೆಗೆ ಮೀಸಲಿಟ್ಟಿದ್ದ ಖಾಲಿ ಜಾಗದಲ್ಲಿ ನಿರಾಶ್ರಿತರ ವಾಸಕ್ಕೆ ಅವಕಾಶ ನೀಡಿದ ತಹಸೀಲ್ದಾರ್, ಪಾಲಿಕೆ ಆಯುಕ್ತರ ಕ್ರಮ ಖಂಡಿಸಿ, ಜ.5ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಒಜಿ ಕಾಲನಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.
- ತಹಸೀಲ್ದಾರ್ ಅನುಚಿತವಾಗಿ ವರ್ತಿಸಿ ಬೆದರಿಕೆ: ಟೀಕೆ
- - -ದಾವಣಗೆರೆ: ಪಾಲಿಕೆ 31ನೇ ವಾರ್ಡ್‌ನ ಎಸ್‌ಒಜಿ ಕಾಲನಿ ಎ ಬ್ಲಾಕ್‌ನ 40 ಅಡಿ ರಸ್ತೆಗೆ ಮೀಸಲಿಟ್ಟಿದ್ದ ಖಾಲಿ ಜಾಗದಲ್ಲಿ ನಿರಾಶ್ರಿತರ ವಾಸಕ್ಕೆ ಅವಕಾಶ ನೀಡಿದ ತಹಸೀಲ್ದಾರ್, ಪಾಲಿಕೆ ಆಯುಕ್ತರ ಕ್ರಮ ಖಂಡಿಸಿ, ಜ.5ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಒಜಿ ಕಾಲನಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಒಜಿ ಕಾಲನಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿ ಬೆಳಗ್ಗೆ 11.30ಕ್ಕೆ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನಾ ಮೆರವಣಿಗೆ ಹೊರಟು, ಉಪ ವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಲಿದ್ದಾರೆ ಎಂದರು.ಕೆ.ಶಿವರಾಂ ಜಿಲ್ಲಾಧಿಕಾರಿ ಆಗಿದ್ದ ವೇಳೆ ಎಸ್‌ಒಜಿ ಕಾಲನಿಯಲ್ಲಿ 40 ಅಡಿ ರಸ್ತೆಗೆ ಖಾಲಿ ಜಾಗ ಮೀಸಲಿಟ್ಟಿದ್ದರು. ಆದರೆ, ಜ.2ರಂದು ತಹಸೀಲ್ದಾರ್ ಎಂ.ಬಿ.ಅಶ್ವತ್ಥ್, ಪಾಲಿಕೆ ಆಯುಕ್ತೆ ರೇಣುಕಾ ಪೊಲೀಸರ ಭದ್ರತೆಯಲ್ಲಿ ತರಾತುರಿಯಲ್ಲಿ ಸ್ಥಳಕ್ಕೆ ಬಂದು, ನಿರಾಶ್ರಿತರಿಗೆ ವಸತಿ ಕಲ್ಪಿಸಲೆಂದು 40 ಅಡಿ ರಸ್ತೆಗೆ ಮೀಸಲಿಟ್ಟಿದ್ದ ಜಾಗ ನೀಡಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದ 75 ವರ್ಷ ಮೀರಿದ ನನಗೆ ತಹಸೀಲ್ದಾರ್ ಏಕವಚನದಲ್ಲಿ, ಅನುಚಿತವಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಿಡಿಕಾರಿದರು.
ಪಾಲಿಕೆಯಿಂದ ಎಸ್.ಎ. ರವೀಂದ್ರನಾಥ ಬಡಾವಣೆಯಲ್ಲೇ ಮೀಸಲಿಟ್ಟ 50 ಎಕರೆ ಜಾಗದಲ್ಲೇ ಮನೆ ಕಟ್ಟಿಸಿಕೊಡಲಿ. ಅಥವಾ ಸರ್ಕಾರವೇ 5 ಎಕರೆ ಜಾಗ ಖರೀದಿಸಿ ಕೊಡಲಿ. ಜಿಲ್ಲಾ ಸಚಿವರು, ಡಿಸಿ ಬಳಿ ಚರ್ಚಿಸಿ, ಈ ಜಾಗ ನೀಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದು, ಯಾವುದೇ ಆದೇಶ ಪತ್ರ ತೋರಿಸಿಲ್ಲ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು ಮಾತನಾಡಿದರು. ಸಮಿತಿ ಮುಖಂಡರಾದ ಎಲ್.ಜಯಪ್ಪ, ಮಂಜುನಾಥ, ಸತೀಶಕುಮಾರ, ಎನ್.ಮಹಾಂತೇಶ, ಮಹಾಂತೇಶ ನಾಯ್ಕ ಇತರರು ಇದ್ದರು.
- - --4ಕೆಡಿವಿಜಿ8: