ಒಳ ಮೀಸಲಾತಿ ಸಂಪೂರ್ಣವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಒಳಮೀಸಲಾತಿಗೆ ಒಳಪಡುವ ವಿವಿಧ ಸಂಘಟನೆಗಳು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬ್ಯಾಡಗಿ: ಒಳ ಮೀಸಲಾತಿ ಸಂಪೂರ್ಣವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಒಳಮೀಸಲಾತಿಗೆ ಒಳಪಡುವ ವಿವಿಧ ಸಂಘಟನೆಗಳು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಮಿನಿ ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬೀರೇಶ್ವರ ದೇವಸ್ಥಾನದ ರಸ್ತೆ ಮೂಲಕ ಹಳೆ ಪುರಸಭೆ ವರೆಗೆ ಸಾಗಿತು. ಈ ವೇಳೆ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ದುರ್ಗೇಶ ಗೋಣೆಮ್ಮನವರ, ಒಳ ಮೀಸಲಾತಿಗಾಗಿ ರಾಜ್ಯಾದ್ಯಂತ ಹಲವು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವ ಸರ್ಕಾರವೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಇದನ್ನು ಮಾದಿಗ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.
ರವಿ ಹುಣಸಿಮರದ ಮಾತನಾಡಿ, ಒಳ ಮೀಸಲಾತಿ ತಪ್ಪಿಸುವ ಉದ್ದೇಶದಿಂದ ತರಾತುರಿಯಲ್ಲಿ ಹೊರಡಿಸಿರುವ ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಅಲ್ಲದೆ ನೇಮಕಾತಿಗಳಲ್ಲಿ ಒಳ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ದಲಿತರ ಜನಸಂಖ್ಯೆ ಸುಮಾರು ಶೇ. 18 ಇರುವ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದ್ದಾರೆ ಎಂದರು.ಸುರೇಶ ಆಸಾದಿ ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡಬೇಕು. ಸಮಾಜ ಕಲ್ಯಾ ಣ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸದೆ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವ ಸಚಿವರನ್ನು ಕೂಡಲೇ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೋಮಣ್ಣ ಮಾಳಗಿ, ಬಸವರಾಜ ತಡಸದ, ಶೇಖರಪ್ಪ ದಾನಣ್ಣನವರ, ನಾಗರಾಜ ದೊಡ್ಮನಿ, ಅರುಣ ಕೋಡಿ ಹಳ್ಳಿ, ಶಂಕರ್ ಕೂಸಗೂರ, ಹನುಮಂತಪ್ಪ ಕಾಟೇನಹಳ್ಳಿ, ಸುರೇಶ ಆಸಾದಿ, ಸುಭಾಷ ಮಾಳಗಿ, ನಾಗರಾಜ ಹಾವನೂರ, ಮಾರುತಿ ಹಂಜಿಗಿ, ಮಂಜುನಾಥ ಗದಗಕರ, ಮಹಾದೇವ ಹುಬ್ಬಳ್ಳಿ ಮಂಜುನಾಥ ಹಂಜಗಿ, ಎಂ.ಎಂ. ಹುಬ್ಬಳ್ಳಿ, ಎಂ.ಎನ್. ನಾಯಕ್, ಚಂದ್ರಶೇಖರ ಗದಗಕರ, ಅಪ್ಪು ಬಾಗಲಕೋಟೆ, ಬುದ್ಧಿವಂತ ಹಂಜಿಗಿ, ಸುಪುತ್ರಪ್ಪ ಬೆಟಿಗೇರಿ, ಈಶ್ವರ ಗದಗಕರ, ಚಮನಪ್ಪ ಅರಕೇರಿ, ವಿನಾಯಕ ಹುಬ್ಬಳ್ಳಿ, ಮಂಜುನಾಥ ಗದಗಕರ. ದುಗೇಶ ಅರಕೇರಿ ಸೇರಿದಂತೆಬ ಹಲವರು ಭಾಗವಹಿಸಿದ್ದರು.