ಸಾರಾಂಶ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲನೋರ್ವ ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ದಾಳಿ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಜೈ ಭೀಮ ಸಂಘಟನೆ ಈಚೆಗೆ ಪ್ರತಿಭಟನೆ ನಡೆಸಿದವು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲನೋರ್ವ ಶೂ ಎಸೆದು ಹಲ್ಲೆ ನಡೆಸಲು ಯತ್ನಿಸಿದ ದಾಳಿ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಜೈ ಭೀಮ ಸಂಘಟನೆ ಈಚೆಗೆ ಪ್ರತಿಭಟನೆ ನಡೆಸಿದವು.ನವನಗರದ ಜಿಲ್ಲಾಡಳಿತ ಭವನ ಎದುರು ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಗೌರವಯುತವಾಗಿ ಸ್ವೀಕರಿಸಬೇಕು ಅದುವೇ ಪ್ರಜಾಪ್ರಭುತ್ವ. ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಗೌರವಿಸಬೇಕಾದ ವಕೀಲರೊಬ್ಬರು ಅನುಚಿತ ವರ್ತನೆ ಮಾಡಿರುವುದನ್ನು ಯಾರೊಬ್ಬರು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವಕೀಲರೊಬ್ಬರು ಅನುಚಿತವಾಗಿ ವರ್ತಿಸಿದ ವೇಳೆಯೂ ಮುಖ್ಯ ನ್ಯಾಯಮೂರ್ತಿಗಳು ತೋರಿದ ಸಂಯಮ, ಶಾಂತತೆ, ನ್ಯಾಯದ ಮೌಲ್ಯಗಳು ತೋರಿದ ಗೌರವ ಎಲ್ಲರಿಗೂ ಮಾದರಿಯಾಗಿದೆ. ಅನುಚಿತವಾಗಿ ವರ್ತನೆ ಮಾಡಿದಂತ ವಕೀಲರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಹಣಮಂತ ಚಿಮ್ಮಲಗಿ, ಶಂಕ್ರಪ್ಪ ದೊಡಮನಿ, ಮಾರುತಿ ಮರೆಗುದ್ದಿ, ಮಾರುತಿ ಬಾವಿಕಟ್ಟಿ, ಲಕ್ಷ್ಮಣ ದೊಡಮನಿ, ನಾಗಪ್ಪ ದೊಡಮನಿ, ರಮೇಶ ಪೂಜಾರಿ, ಮೌನೇಶ ಜೈಮುನಿ, ಪರಶುರಾಮ ಮಾಂಗ ಸೇರಿ ಸಂಘಟನೆ ಮುಖಂಡರು, ಕಾರ್ಯಕರ್ತರು ಇದ್ದರು.