ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ಖಂಡಿಸಿ ಪ್ರತಿಭಟನೆ

| Published : Aug 13 2025, 02:31 AM IST

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ ರೂಪಿಸಿ ಜನರ ಧಾರ್ಮಿಕ ನಂಬಿಕೆಗೆ ಭಂಗ ತರುವ ದುರುದ್ದೇಷಪೂರಿತ ಕೃತ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಲ್ಲ ಸಾಮೂಹಿಕ ಸಮುದಾಯಗಳ ಮುಖಂಡರಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಸೂಕ್ತಕ್ರಮಕ್ಕೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ ರೂಪಿಸಿ ಜನರ ಧಾರ್ಮಿಕ ನಂಬಿಕೆಗೆ ಭಂಗ ತರುವ ದುರುದ್ದೇಷಪೂರಿತ ಕೃತ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎಲ್ಲ ಸಾಮೂಹಿಕ ಸಮುದಾಯಗಳ ಮುಖಂಡರಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಸೂಕ್ತಕ್ರಮಕ್ಕೆ ಆಗ್ರಹಿಸಿದರು.

ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಅರವಿಂದರಾವ ದೇಶಪಾಂಡೆ ಮಾತನಾಡಿ, ನಾಡಿನ ಜನರ ಶ್ರದ್ಧಾ, ನಂಬಿಕೆಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಗಳನ್ನು ಬಳಸಿಕೊಂಡು ಕೆಲ ಅಧರ್ಮಿಯರು ಕುತಂತ್ರ ನಡೆಸಿ ಕೇವಲ ಧಾರ್ಮಿಕ ಕಾರ್ಯ ಅಷ್ಟೆ ಅಲ್ಲದೇ ಆರ್ಥಿಕ, ಸಾಮಾಜಿಕ, ವೈದ್ಯಕಿಯ, ಶಿಕ್ಷಣ, ಕೃಷಿ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಅತ್ಯಂತ ಶಿಸ್ತುಬದ್ಧ ಕಾರ್ಯ ನಿರ್ವಹಿಸುತ್ತಿರುವ ಶ್ರೀಕ್ಷೇತ್ರದ ಹೆಸರು ಹಾಳು ಮಾಡುವವರನ್ನು ಮಟ್ಟ ಹಾಕಿ. ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವು ಅತ್ಯಂತ ಪ್ರಸಿದ್ಧವಾದ ಪುಣ್ಯಕ್ಷೇತ್ರ. ಅದರ ಹೆಸರನ್ನು ಕೆಡಿಸಲು ಕೆಲವು ವ್ಯಕ್ತಿಗಳು ನಿರಾಧಾರ ಆರೋಪಗಳನ್ನು ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಅತ್ಯಂತ ಹೇಯ ಕೃತ್ಯ. ಅಂತಹ ಅಪರಾಧ ಮನೋಭಾವ ಇರುವ ವ್ಯಕ್ತಿಗಳನ್ನು ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಭಾರತೀಯ ಜೈನ ಸಂಘಟನಾ ರಾಜ್ಯ ಸಂಚಾಲಕ, ನಿವೃತ್ತ ಇಂಜನೀಯರ್‌ ಅರುಣ ಯಲಗುದ್ರಿ ಮಾತನಾಡಿ, ಯಾವುದೇ ಜಾತಿ, ಮತಗಳು ಎನಿಸದೇ ನಮ್ಮ ನಾಡಿನಲ್ಲಿ ಧರ್ಮಸ್ಥಳ ಕ್ಷೇತ್ರದ ಮೂಲ ಆರೋಗ್ಯ, ಸರ್ಕಾರಿ ಶಾಲೆಗಳ ರಕ್ಷಣೆ, ದೇವಸ್ಥಾನಗಳ ಜೀರ್ನೋದ್ದಾರ, ಸ್ಮಶಾನಗಳ ಅಭಿವೃದ್ಧಿ, ಹೈನುಗಾರಿಗೆ ಹೀಗೆ ಧಾರ್ಮಿಕ ಕಾರ್ಯಗಳ ಜೊತೆ ಜೊತೆಯಲ್ಲಿ ಇಂತಹ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದ ಹೇಡಿಗಳು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಕಿಡಿಕಾರಿದರು.ಸಾಮಾಜಿಕ ಕಾರ್ಯಕರ್ತೆ ಗೀತಾ ಮಡ್ಡಿ ಮಾತನಾಡಿ, ರಾಜ್ಯದಲ್ಲಿ ನಮ್ಮಂತಹ ಲಕ್ಷಾಂತರ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಿದೆ. ಧರ್ಮಸ್ಥಳ ಸಂಘದ ಸಹಾಯ, ಸಹಕಾರದಿಂದ ನಾವು ಆರ್ಥಿಕವಾಗಿ ಸುಧಾರಿಸಿಕೊಂಡು ಆರೋಗ್ಯಯುತ ಜೀವನ ಪಾಠ ಕಲಿಸಿದೆ. ಇಂತಹ ಪುಣ್ಯ ಕ್ಷೇತ್ರಕ್ಕೆ ಧಕ್ಕೆ ತರುವವರನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಉನ್ನತಮಟ್ಟದ ತನಿಖೆ ನಡೆಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಮುಖಂಡರಾದ ಸದಾಶಿವ ಬುಟಳೆ, ಉಮೇಶರಾವ ಬೊಂಟಡಕರ, ಅಮರ ದುರ್ಗಣ್ಣವರ, ಸಂಜು ತಳವಲಕರ, ಸಂಜೀವ ನಾಡಗೌಡ ಹಾಗೂ ವಕೀಲರ ಬಳಗದ ವತಿಯಿಂದ ವಕೀಲರಾದ ನಿಂಗಪ್ಪ ಕೊಕಲೆ, ಸಿದ್ದಾರ್ಥ ಸಿಂಗೆ ಮಾತನಾಡಿದರು. ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಅಸ್ಕಿ, ಜೀನಗೌಡ ಪಾಟೀಲ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಾಂತಿನಾಥ ನಂದೇಶ್ವರ, ಅಭಿನಂದನ ಪಡನಾಡ, ವಕೀಲ ಚಂದು ಸಂಕ್ರಟ್ಟಿ, ಅಭಯ ಕೊಪ್ಪ, ಪುಟ್ಟು ಹಿರೇಮಠ, ವಿನೋದ ಶೆಟ್ಟಿ, ಅಶೋಕ ದಾನಗೌಡರ, ಶರಥ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಕಾಶ ಕೋಳಿ, ಶೇಖರ ಕನಕರೆಡ್ಡಿ, ದಿನೇಶ ಶೆಟ್ಟಿ, ಡಾ.ಸಿ.ಎ.ಸಂಕ್ರಟ್ಟಿ, ಸಂದೀಪ್ ಶೆಟ್ಟಿ, ಅನಂತ ಪಡನಾಡ ಸೇರಿದಂತೆ ಎಲ್ಲ ಸಮಾಜದ ಮಹಿಳೆಯರು, ಮುಖಂಡರು ಉಪಸ್ಥಿತರಿದ್ದರು. ಡಿ.ಡಿ.ಮೆಕನಮರಡಿ ನಿರೂಪಿಸಿದರು.ಧರ್ಮಸ್ಥಳ ಕ್ಷೇತ್ರದ ವಿರುದ್ಧ ಮತ್ತು ಡಾ.ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರುವ ಉದ್ದೇಶದಿಂದ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಯಾರೇ ತಪ್ಪು ಮಾಡಿದರೂ ಸಹ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕು.

-ಅರುಣ ಯಲಗುದ್ರಿ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರು.