ಡಿಕೆ ಶಿವಕುಮಾರ್ ವರ್ತನೆ ಖಂಡಿಸಿ ಪ್ರತಿಭಟನೆ

| Published : Sep 08 2025, 01:00 AM IST

ಡಿಕೆ ಶಿವಕುಮಾರ್ ವರ್ತನೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ ದುಂಡಾವರ್ತನೆ ಪ್ರದರ್ಶಿಸಿರುವುದನ್ನ ಖಂಡಿಸಿ ಭಾನುವಾರ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಲಾಯಿತು.

ಕೊಳ್ಳೇಗಾಲ: ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ ದುಂಡಾವರ್ತನೆ ಪ್ರದರ್ಶಿಸಿರುವುದನ್ನ ಖಂಡಿಸಿ ಭಾನುವಾರ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಲಾಯಿತು.

ತಾಲೂಕಿನ ಸತ್ತೇಗಾಲ ಹೆದ್ದಾರಿ ಸರ್ಕಲ್ ನಲ್ಲಿ ಜಮಾಯಿಸಿದ್ದ ರೈತ ಮುಖಂಡರುಗಳು ಡಿ.ಕೆ.ಶಿವಕುಮಾರ್ ವಿರುದ್ಧ

ಧಿಕ್ಕಾರ ಕೂಗಿ, ರೈತರ ಕ್ಷಮೆಯಾಚನೆಗೆ ಆಗ್ರಹಿಸಿ ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿದರು.

ರೈತ ಈನಾಡಿನ ಅನ್ನದಾತ, ಅವರ ಬಗ್ಗೆ ಲಘುವಾಗಿ ಮಾತನಾಡುವುದು, ಗೂಂಡಾ ವರ್ತನೆ ತೋರುವುದು ಸರಿಯಲ್ಲ, ಇದು ಖಂಡನೀಯ ಎಂದು ತರಾಟೆ ತೆಗೆದುಕೊಂಡರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಾದಮ್ಮ, ತಾಲೂಕು ಉಪಾಧ್ಯಕ್ಷರು ಚಾರ್ಲಿ, ಸತ್ತೇಗಾಲ ಗ್ರಾಮ ಘಟಕ ಅಧ್ಯಕ್ಷರು ಮಹದೇವ, ಚಿಕ್ಕಲ್ಲೂರು ಗ್ರಾಮಘಟಕ ಕಾರ್ಯದರ್ಶಿ ಕುಮಾರ್, ಇಕಡಹಳ್ೞಿ ಮಹದೇವಪ್ಪ, ಶಿವಕುಮಾರ್, ದಿವ್ಯ ಕುಮಾರ್, ರುಕ್ಕಿಬಾಯಿ, ಯುವ ಘಟಕ ಸಂಚಾಲಕ ಗುಣ, ಜೋಸೆಫ್, ಸೇಸುರಾಜ್, ಶಿವಲಿಂಗ, ಕೃಷ್ಣಪ್ಪ, ನಾಗಣ್ಣ, ನಂಜನಾಯಕ, ರಾಮೇಗೌಡ, ಪುಟ್ಟೇಗೌಡ ಇನ್ನಿತರಿದ್ದರು.