ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಶ್ಮೀರದ ಪಹಲ್ಗಾಮ್‌ದಲ್ಲಿ ಹಿಂದೂಗಳ ನರಮೇಧ ಮಾಡಿದ ಉಗ್ರರ ದಾಳಿ ಖಂಡಿಸಿ ಬಿಜೆಪಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ತಮ್ಮ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು.
ಈ ವೇಳೆ ಮಾತನಾಡಿದ ಪಿ.ಎಚ್.ಪೂಜಾರ, ದೇಶದ ಮೇಲೆ ನಡೆದ ಗದಾಪ್ರಹಾರ ಇದಾಗಿದೆ. ಹೇಡಿತನದ ಕೃತ್ಯ, ಧೈರ್ಯವಿದ್ದರೆ ಎದುರುಗಡೆ ನಿಂತು ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಹಿಂದಿನಿಂದ ದಾಳಿ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ದಾಳಿ ಮಾಡುವವರ ವಿರುದ್ಧ ತಕ್ಕ ಶಾಸ್ತಿ ಮಾಡಬೇಕಿದೆ. ಪ್ರಧಾನಿ ಮೋದಿ ಅವರೇ ನೀವು ಮುಂದೆ ಸಾಗಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದರು.ಈ ವೇಳೆ ಸಂಗನಗೌಡ ಗೌಡರ, ಡಾ.ಶೇಖರ ಮಾನೆ, ವಿರುಪಾಕ್ಷ ಅಮೃತಕರ, ಎಲ್ಲಪ್ಪ ಅಂಬಿಗೇರ್, ಸಂಜು ಡಿಗ್ಗಿ, ಮಲ್ಲಿಕಾರ್ಜುನ ಸುರಪುರ, ಅಪ್ಪಣ ಪೂಜಾರ, ಶೈಲು ಅಂಗಡಿ, ರಾಜು ಗೌಳಿ,ರಾಘವೇಂದ್ರ ನಾಗೂರ, ಕಳಕಪ್ಪ ಬಾದವಾಡಗಿ, ಗೋಪಾಲ ಕಟ್ಟಿಮನಿ, ಮುತ್ತುರಾಜ ಅರಗಿನಶೇಟ್ಟಿ, ಗುರಲಿಂಗಪ್ಪ ಅಂಬಿಗೇರ, ಹಣಮಂತ ಅಂಬಿಗೇರ, ಈರಪ್ಪ ತಂಬಾಕದ, ಹನುಮಂತ ಕೊಣ್ಣೂರ, ರಾಜು ಲಮಾಣಿ ಆಲೂರ, ಗಂಗುಬಾಯಿ ರಜಪೂತ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಈರಣ್ಣ ಗವಿಮಠ, ಗಣೇಶ ದುಧಾನಿ, ಡಾ.ಸುಧೀರ ಜಾಧವ, ಸಿಂಧೂರ ಕಟ್ಟಿಮನಿ, ಬಸವರಾಜ ದಾಳಿ, ಸುರೇಶ ದಾಳಿ, ಹಣಮಂತ ದೋಡಮನಿ, ಸುರೇಶ ದೊಡ್ಡಮನಿ, ವಿಶ್ವನಾಥ ಕೋಟಿ, ಬಸವರಾಜ ಭಜಂತ್ರಿ, ಶಿವಾನಂದ ಕೋಟಿ, ಆನಂದ, ರಾಘವೇಂದ್ರ ಚೌಹಾನ, ಗುರುಬಸಯ್ಯ ಪೂಜಾರಿ, ರಾಜು ನಾಯಕ, ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.