ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Nov 07 2024, 11:46 PM IST

ಸಾರಾಂಶ

ಗ್ರಾಮದ ಬಸ್ ನಿಲ್ದಾಣದಿಂದ ಇಳಕಲ್ ಪಟ್ಟಣಕ್ಕೆ ಸರಿಯಾಗಿ ಬಸ್ ಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್‌ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಗ್ರಾಮದ ಬಸ್ ನಿಲ್ದಾಣದಿಂದ ಇಳಕಲ್ ಪಟ್ಟಣಕ್ಕೆ ಸರಿಯಾಗಿ ಬಸ್ ಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್‌ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ಕಾಲೇಜಿಗೆ ತೆರಳಲು ಸರಿಯಾಗಿ ಬಸ್‌ಗಳ ವ್ಯವಸ್ಥೆ ಇಲ್ಲ. ಇದರಿಂದಾಗಿ ತರಗತಿಗಳಿಗೆ ಸರಿಯಾಗಿ ತೆರಳಲು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡುವಂತೆ ಇಳಕಲ್ ಹಾಗೂ ಗಜೇಂದ್ರಗಡ ಡಿಪೋ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಾವು ಹೊಸದಾಗಿ ಬಸ್ ಬಿಡಿ ಎನ್ನುತ್ತಿಲ್ಲ. ಇಲ್ಲಿನ ಬಸ್ ನಿಲ್ದಾಣದ ಸಮಯಕ್ಕೆ ಸರಿಯಾಗಿ ಇಳಕಲ್ ಪಟ್ಟಣಕ್ಕೆ ತೆರಳಲು ಬೆಳಗ್ಗೆ 7ಕ್ಕೆ, 7.15ಕ್ಕೆ, 7.15ಕ್ಕೆ ,7.15ಕ್ಕೆ, 9.30ಕ್ಕೆ, 8.45ಕ್ಕೆ, 9ಕ್ಕೆ, 9.30ಕ್ಕೆ ವಾಹನಗಳು ಬರಬೇಕು. ಆದರೆ, ಈ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದಾಗಿ ಕಾಲೇಜಿಗೆ ಹೋಗಲು ತುಂಬಾ ತೊಂದರೆ ಆಗುತ್ತಿದ್ದು, ಸಮಯದ ಅನುಸಾರವಾಗಿ ಬಸ್‌ಗಳನ್ನು ಬಿಡುವಂತೆ ಆಗ್ರಹಿಸಿದರು.ಈ ವೇಳೆ ವಿದ್ಯಾರ್ಥಿಗಳಾದ ಆನಂದ, ಪ್ರವೀಣ ಕುಮಾರ, ಮಲ್ಲಿಕಾರ್ಜುನ, ತಿಪ್ಪಣ್ಣ, ಸಂಗಮೇಶ, ಬಸವರಾಜ, ನಾಗರಾಜ, ಪಲ್ಲವಿ, ಪವಿತ್ರ, ವಿಶ್ವನಾಥ, ವಿಜಯ, ವಿರೇಶ, ರಮೇಶ, ರಮ್ಯಾ, ಸಂಗಮ್ಮ, ಮಂಜುಳಾ, ಪಾರ್ವತಿ, ಪ್ರತಿಭಾ, ಪ್ರಶಾಂತ, ಭೀಮವ್ವ, ಸ್ವಪ್ನ, ಸೌಮ್ಯಾ ಇತರರಿದ್ದರು.

ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಮನವಿ ಸ್ವೀಕರಿಸಿ ವಿದ್ಯಾರ್ಥಿಗಳ ಮನವೊಲಿಸಿದರು.

ಪರದಾಟ:

ಇದೇ ಸಂದರ್ಭದಲ್ಲಿ ಒಂದುವರೆ ಗಂಟೆಗಳ ಕಾಲ ವಿದ್ಯಾರ್ಥಿಗಳು ಯಾವುದೇ ಬಸ್‌ಗಳನ್ನು ಬಸ್ ನಿಲ್ದಾಣದಿಂದ ಹೊರಗಡೆ ಬಿಡಲಿಲ್ಲ. 7 ರಿಂದ 8 ಬಸ್‌ಗಳು ನಿಲ್ದಾಣದಲ್ಲಿ ನಿಂತುಕೊಂಡಿದ್ದವು. ಇದರಿಂದ ಬೇರೆ ಬೇರೆ ಊರಿಗೆ ಅನ್ಯ ಕಾರ್ಯದ ನಿಮಿತ್ತ ಹೊರಟಿದ್ದ ಜನರು ಪರದಾಡಿದರು.