ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಸ್ವಂತ ಮನೆ ಹಾಗೂ ನಿವೇಶನವಿಲ್ಲದ ಜನರಿಗೆ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ವೇದಿಕೆ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಲಂ ನಿವಾಸಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು. ಸ್ವಂತ ಮನೆ ನಿವೇಶನವಿಲ್ಲದೇ ಬೀದಿ ಬದಿ ಬಾಡಿಗೆ ಮನೆಗಳಲ್ಲಿ ವಾಸಿಸುವ 14 ವಿಶೇಷ ವರ್ಗದಲ್ಲಿ ಬರುವ ಮನೆಗೆಲಸ, ತರಕಾರಿ ಬೀದಿ ಬದಿ ವ್ಯಾಪಾರ, ವಿಧವೆ, ವಿಕಲಚೇತನರು, ಅಲೆಮಾರಿ ಇನ್ನಿತರ ವರ್ಗದ ನಿವೇಶನ ರಹಿತರಿಗೆ ಸರ್ವೇ ನಂ.1403, 1355, 1408, 1257, 29, 30, 772, 928, 802, 809 ರಲ್ಲಿ ನಿವೇಶನಕ್ಕಾಗಿ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಜನಾರ್ದನರೆಡ್ಡಿ ಹಳ್ಳಿಬೆಂಚಿ, ಕಾರ್ಯದರ್ಶಿ ನೂರ್‌ಜಾನ್, ಪದಾಧಿಕಾರಿಗಳಾದ ರಾಜಶೇಖರ, ಬಸವರಾಜ,ಮಹೇಶ, ಮಾಧವರೆಡ್ಡಿ, ನಾಗರಾಜ, ಜೆ.ರಾಜು, ಆಂಜನೇಯ್ಯ ಪೋತಗಲ್, ಶರಣಬಸವ, ಸಿ.ಆರ್.ಜಂಬಣ್ಣ, ನಿತೀನ್, ಚಂದ್ರಶೇಖರ, ಪ್ರವೀಣ್, ಮಾರುತಿ ಸೇರಿ ಅನೇಕರಿದ್ದರು.---------------------15ಕೆಪಿಆರ್‌ಸಿಆರ್ 01: ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.