ಸಾರಾಂಶ
ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಕಸ್ತೂರಿ ಬಾ ಬಾಲಿಕಾ ವಸತಿ ಶಾಲೆ ಮುಂದುವರೆಸುವಂತೆ ಅಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕಾಳಗಿ
ತಾಲೂಕಿನ ರಟಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕಸ್ತೂರಿ ಬಾ ಬಾಲಿಕಾ ವಸತಿ ನಿಲಯದಲ್ಲಿ ಕನಿಷ್ಠ 50-60 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದರು ಅಧಿಕಾರಿಗಳು ಸುಳ್ಳು ದಾಖಲಾತಿ ಸಲ್ಲಿಸಿ ವಸತಿ ನಿಲಯ ತೆಗೆಯುವಂತೆ ಪತ್ರ ಬರೆದು, ಹತ್ತನೇ ತರಗತಿ ಪರೀಕ್ಷಾ ಕೇಂದ್ರ ರದ್ದು ಮಾಡಿರುವ ನೊಡಲ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿದರು.ತಾಲೂಕಿನ ರಟಕಲ್ ಗ್ರಾಮದಲ್ಲಿ ಚಿಂಚೋಳಿ - ಮಹಾಗಾಂವ್ ರಾಜ್ಯ ಬಂದ್ ಮಾಡಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು, ರಟಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಕಸ್ತೂರಿ ಬಾ ಬಾಲಿಕಾ ವಸತಿ ನಿಲಯವು ಗ್ರಾಮೀಣ ಪ್ರದೇಶದ ರೈತರ, ಕಾರ್ಮಿಕರ, ಬಡವರ ದುಡಿಯುವ ವರ್ಗದ ಜನರ ಮಕ್ಕಳ ಶಿಕ್ಷಣದ ಅನೂಕುಲಕ್ಕಾಗಿ 2011ರಲ್ಲಿ ಸರ್ಕಾರ ವಸತಿ ನಿಲಯ ಮಂಜೂರು ಮಾಡಿದೆ. ಈ ವಸತಿ ನಿಲಯದಲ್ಲಿ ರಟಕಲ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ತಾಂಡಗಳಿಂದ ಸರಾಸರಿ 50 ರಿಂದ 60 ಮಕ್ಕಳ ದಾಖಲಾತಿ ಹೊಂದುತ್ತಾರೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ.
ಆದರೆ, ನೊಡಲ್ ಅಧಿಕಾರಿಗಳು ವಸತಿ ನಿಲಯದಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಸಾಕಷ್ಟು ಇದ್ದರು ಮುಂಚಿತವಾಗಿಯೇ ಯಾವುದೇ ಮಕ್ಕಳ ಸಂಖ್ಯೆ ಇಲ್ಲ ಎಂದು ಪತ್ರ ಬರೆದಿದ್ದಾರೆ. ಇದರ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದೆ ಏಕ ಪಕ್ಷಿಯವಾಗಿ ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಈ ವಸತಿ ನಿಲಯ ತೆಗೆಯಲು ನೋಡೆಲ್ ಅಧಿಕಾರಿಗಳು ಪತ್ರ ಬರೆದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಸಂಬಂದಪಟ್ಟ ಮೇಲಾಧಿಕಾರಿಗಳು ಗಮನಹರಿಸಿ ನೊಡೆಲ್ ಅಧಿಕಾರಿಗಳು ಬರೆದ ಪತ್ರವನ್ನು ಮಾನ್ಯ ಮಾಡದೆ ಅದನ್ನು ತಿರಸ್ಕರಿಸಿ ಯಥಾಸ್ಥಿತಿಯಲ್ಲಿ ಕಸ್ತೂರಿ ಬಾ ವಸತಿ ಶಾಲೆ ಹಾಗೂ ಹತ್ತನೇ ತರಗತಿ ಪರೀಕ್ಷಾ ಕೇಂದ್ರವನ್ನು ಮುಂದುವರೆಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ಗೌರಿಶಂಕರ ಕಿಣ್ಣಿ, ಕರ್ನಾಟಕ ರೈತ ಸೇನೆ ಹಾಗೂ ರೈತ ಸಂಘದ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಇದ್ದರು.