ಸಾರಾಂಶ
ಡ್ರಗ್ ಮಾಫಿಯ, ಪರಭಾಷಾ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯ ಸ್ವಾಯತ್ತತೆ ಕೆಟ್ಟ ಚಿಂತನೆಯನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಡ್ರಗ್ ಮಾಫಿಯ, ಪರಭಾಷಾ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯ ಸ್ವಾಯತ್ತತೆ ಕೆಟ್ಟ ಚಿಂತನೆಯನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗಾರಾಜ್ ಮಾತನಾಡಿ, ನನಗೆ ಜಾತಿ ಬಗ್ಗೆ ನಂಬಿಕೆ ಇಲ್ಲ. ನಮ್ಮದು ಕನ್ನಡ ಜಾತಿ. ನಮ್ಮ ರಾಜ್ಯ ಉದಯವಾಗಿರುವುದು ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ. ಆದರೆ, ಇತ್ತೀಚೆಗೆ ಜಾತಿವಾರು ರಾಜ್ಯವಾಗುತ್ತಿದೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಜಾತಿಗಣತಿ ಬಗ್ಗೆ ರಾಜ್ಯದಲ್ಲಿ ಪರ ವಿರೋಧ ಮಾತು ಕೇಳಿ ಬರುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ನಾಲಿಗೆ ಹರಿ ಬಿಡುತ್ತಿದ್ದಾರೆ. ಅವರ ತಂದೆ ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಮಾಧ್ಯಮದವರೇ ಸೃಷ್ಟಿಸಿದ್ದರು. ಜಾತಿಗಣತಿ ಬಗ್ಗೆ ಮಾತಾಡುವಾಗ ಎಚ್ಚರ ಇರಬೇಕು. ಬಿಜೆಪಿ ಅಧ್ಯಕ್ಷ ಜಾತಿಗಣತಿ ವರದಿಯನ್ನು ತೆಗೆದು ಬುಟ್ಟಿಗೆ ಹಾಕಿ ಎನ್ನುತ್ತಿದ್ದಾರೆ. ಜತೆಗೆ ಅವರು ವರದಿಯನ್ನು ಓದಿಯೇ ಇಲ್ಲ. ಆ ಪುಣ್ಯಾತ್ಮ ಕನಿಷ್ಠ 1 ಪುಟಾನೂ ಓದಿಲ್ಲ. ಜಾತಿ ಗಣತಿ ವರದಿಯನ್ನು ಓದಬೇಕು. ಅದರಲ್ಲಿ ಅನ್ಯಾಯ ಕಂಡುಬಂದರೆ ಪ್ರಾಮಾಣಿಕವಾಗಿ ಸರಿಪಡಿಸುವ ಚಿಂತನೆ ಮಾಡಬೇಕು ಎಂದರು.ಪ್ರತಿಭಟನೆಯಲ್ಲಿ ಮುಖಂಡರಾದ ಎಂ. ಜಗದೀಶ್, ಸಿ.ಎಸ್ ಜಯಕುಮಾರ್, ಗಂಗಾಧರ್ ವಿ, ಎನ್, ಕೆ. ಜಯರಾಮು, ಭಾಗ್ಯಸುಧಾ, ಕೆಂಪರಾಜು, ಕುಮಾರ್, ಪಾರ್ಥಸಾರಥಿ, ನಾರಾಯಣಸ್ವಾಮಿ, ಪ್ರಸನ್ನ, ಪಿ. ಸುರೇಶ್ ಮತ್ತಿತರರು ಭಾಗವಹಿಸಿದ್ದರು.