ಸಾರಾಂಶ
ವಾಟ್ಸಪ್ ಸ್ಟೇಟಸ್ನಲ್ಲಿ ಪಾಕ್ ರಾಷ್ಟ್ರಧ್ವಜ ಹಾರಾಡುವ ರಿಲ್ಸ್ ಇಟ್ಟುಕೊಂಡು ಪಾಕ್ ಪ್ರೇಮ ಮರೆದ ಗ್ರಾಮದ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮದಲ್ಲಿ ಸಕಲ ಹಿಂದೂ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಲಾದಗಿ: ವಾಟ್ಸಪ್ ಸ್ಟೇಟಸ್ನಲ್ಲಿ ಪಾಕ್ ರಾಷ್ಟ್ರಧ್ವಜ ಹಾರಾಡುವ ರಿಲ್ಸ್ ಇಟ್ಟುಕೊಂಡು ಪಾಕ್ ಪ್ರೇಮ ಮರೆದ ಗ್ರಾಮದ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮದಲ್ಲಿ ಸಕಲ ಹಿಂದೂ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ರ‍್ಯಾಲಿ ನಡೆಸಿ ಯುವಕನ ಗಡಿಪಾರು ಮಾಡಲು ಉಪತಹಸೀಲ್ದಾರ್ ಆರ್.ಆರ್.ಕುಲಕರ್ಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ರಂಗಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ರ‍್ಯಾಲಿ ಅಂಬೇಡ್ಕರ್ ಸರ್ಕಲ್, ಹೆಣ್ಣು ಮಕ್ಕಳ ಶಾಲೆ, ಗಡ್ಡಿಓಣಿ, ಕೆರೂರು ಓಣಿ, ಹೂಸೂರು ಚೌಕ, ಬಸನದೇವರ ಗುಡಿ, ಕೋಬ್ರಿಕ್ರಾಸ್, ಪಂಚಾಯತ ಕಾರ್ಯಾಲಯ, ಕಾಯಿಪಲ್ಲೆ ಮಾರ್ಕೆಟ್, ಸವ್ವಾ ಕಟ್ಟಿ, ಮರಾಠಾ ಓಣಿ, ಟೆಲಿಪೋನ್ ಆಫೀಸ್, ಪಾರ್ಥಿ ಸಮಾಜ ಕಾಲೋನಿ, ಬಸವೇಶ್ವರ ವೃತ್ತ ಮಾರ್ಗವಾಗಿ ನಾಡ ಕಚೇರಿ ತಲುಪಿತು. ರ‍್ಯಾಲಿ ಮಾರ್ಗದುದ್ದಕ್ಕೂ ವಿವಿಧ ಘೋಷಣೆಗಳನ್ನೂ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ ಶಂಕರಗೌಡ ಪಾಟೀಲ ಮಾತನಾಡಿ, ಎಲ್ಲಿಯವರೆಗ ಹಿಂದುಗಳು ಜಾತಿ ಹೇಳಿ ಬದುಕುತ್ತಿರುತ್ತಾರೋ ಅಲ್ಲಿಯವರಗೆ ನಾವೆಲ್ಲಾ ಒಂದಾಗಿ ಬದುಕಲು ಸಾಧ್ಯವಿಲ್ಲ. ಅದರ ಪರಿಣಾಮ ದೇಶದ್ರೋಹಿಗಳು ಹುಟ್ಟಿಕೊಂಡಿದ್ದಾರೆ.ಪೊಲೀಸ್ ಇಲಾಖೆ ಈ ಘಟನೆಯ ಹಿಂದಿರುವ ಕೈವಾಡಗಳನ್ನು ಸಹಿತ ಪತ್ತೆ ಹಚ್ಚಬೇಕು. ನಮ್ಮ ಮುಂದಿನ ಪೀಳಿಗೆ ಬದುಕಬೇಕಾದರೆ ಹಿಂದುಗಳು ಜಾಗೃತ ಸಂಘಟಿತರಾಗಬೇಕಾಗಿದೆ ಎಂದರು. ಪ್ರತಿಭಟನೆಗೆ ಬಾಗಲಕೋಟೆ ಡಿವೈಎಸ್ಪಿ ಪಂಪನಗೌಡ, ಪಿಎಸೈ ಚಂದ್ರಶೇಖರ ಹೇರಕಲ್ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.ಮುಖಂಡ ಬಶೆಟ್ಟಿ ಅಂಗಡಿ, ಶ್ರೀಧರ ವಾಘ್, ಯಲ್ಲಪ್ಪ ಹೊಸಕೋಟಿ, ರಾಜು ಪೂಜಾರಿ, ಯಂಕನಗೌಡ ಗೌಡರ, ಮಂಜುನಾಥ ಬಿಲಕೇರಿ, ಮಂಜು ವಾರದ, ಯಮನಪ್ಪ ಬೂದಿಹಾಳ, ನಿಂಗಪ್ಪ ಅಗಸರ, ಶಿವಾಜಿ ಚೌಹಾನ್ ಇನ್ನಿತರರು ಇದ್ದರು.