ಸಾರಾಂಶ
- ರಾಜ್ಯ ದಿನಗೂಲಿ, ಗುತ್ತಿಗೆ ಪೌರಸೇವಾ ನೌಕರರ ಸಂಘ ಪ್ರತಿಭಟನೆ
-----ಕನ್ನಡಪ್ರಭ ವಾರ್ತೆ ರಾಯಚೂರು
ಹೊಸದಾಗಿ ಘೋಷಣೆಯಾಗಿರುವ ರಾಯಚೂರು ಮಹಾನಗರ ಪಾಲಿಕರಯಲ್ಲಿ ನೇರ ವೇತನ ಪೌರ ಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಜಿಲ್ಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಟಿಪ್ಪು ಸುಲ್ತಾನಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು ಘೊಷಣೆ ಕೂಗಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು. ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡದೇ ತಾರತಮ್ಯ ಮಾಡಲಾಗುತ್ತದೆ. ಕಳೆದ ಒಂದ ವರ್ಷದಿಂದಲೂ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸರ್ಕಾರ ಮಂಜೂರು ಮಾಡಿದ ಹೆಚ್ಚುವರಿ 75 ನೇರ ವೇತನ ಪೌರಕಾರ್ಮಿಕರ ಹುದ್ದೆಗಳಲ್ಲಿ ಮರಣ ಹೊಂದಿದ, ಕೆಲಸದಿಂದ ವಜಾಗೊಂಡ ಹಾಗೂ ಯಾವ ಪರಿಹಾರ ಇಲ್ಲದೇ ನಿವೃತ್ತಗೊಂಡ ಪೌರಕಾರ್ಮಿಕರ 20 ಕುಟುಂಬಗಳಿಗೆ ನೇರ ವೇತನ ಹುದ್ದೆಗಳನ್ನು ನೇಮ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಬಳಗಾನೂರು ಪಪಂಯ ಪೌರಕಾರ್ಮಿಕರಿಗೆ ಬಾಕಿ ಉಳಿದ ನಾಲ್ಕು ತಿಂಗಳ ವೇತನ ಕೂಡಲೇ ಪಾವತಿಸಬೇಕು, ಪೌರಕಾರ್ಮಿಕ ಹುದ್ದೆಯಲ್ಲಿ ನೇಮಕಗೊಂಡ ಕಾಯಂ, ನೇರವೇತನ ಪೌರಕಾರ್ಮಿಕರ ಆ ಹುದ್ದೆಗಳಲ್ಲಿಯೇ ಕಾರ್ಯನಿರ್ವಹಿಸುವಂತೆ ಕಠಿಣ ಕ್ರಮ ತೆಗೆದುಕೊಂಡು ಕೆಲಸ ಮಾಡುವ ಪೌರಕಾರ್ಮಿಕರಿಗೆ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು.
2023ರ ಏಪ್ರಿಲ್‌ನಿಂದ ಮಾರ್ಚ್ 2024ರವರೆಗೆ ಬಾಕಿ ಸಂಕಷ್ಟ ಭತ್ಯೆಯನ್ನು ಕೂಡಲೇ ಪಾವತಿಸಬೇಕು, ಪೌರ ಕಾರ್ಮಿಕರಿಗೆ ಇತರೇ ಸೌಲಭ್ಯಗಳನ್ನು ಕೂಡಲೇ ಕಲ್ಪಿಸುವುದು ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲ್, ಜಿಲ್ಲಾಧ್ಯಕ್ಷ ಉರುಕುಂದಪ್ಪ, ಪದಾಧಿಕಾರಿಗಳಾದ ಆರ್.ಹನುಮಂತು, ಶ್ರೀನಿವಾಸ ಕೊಪ್ಪರ, ಆಂಜನೇಯ ಉಟ್ಕೂರು, ಹೇಮರಾಜ ಅಸ್ಕಿಹಾಳ, ಜೈ.ಭೀಮ, ಹನುಮಂತ ಇದ್ದರು.
----------------ಫೋಟೊ: ರಾಯಚೂರಿನಲ್ಲಿ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
02ಕೆಪಿಆರ್‌ಸಿಆರ್ 04: