ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದಿಂದ ಮಾ. ೨೦ರ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸುವುದಾಗಿ ಕೆ.ಆರ್.ಎಸ್ ಪಕ್ಷದ ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ವಿಪಕ್ಷಗಳಾದ ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ರೈತರ ಬೇಡಿಕೆಗಳು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ ಎಂದರು.ಈಗಲೂ ರೈತನಿಗೆ 2ನೇ ದರ್ಜೆ
ದೇಶದ ಪ್ರಜಾಸತತ್ಮಾಕ ಬುನಾದಿಯ ಸಂಘಟನೆ ರಚಿಸಬೇಕಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟಗಳ ಮೂಲಕ ಸ್ವಾತಂತ್ರ್ಯ ತಂದರಾದರೂ ಇನ್ನು ೨ನೇ ದರ್ಜೆಯಲ್ಲಿ ನಮ್ಮ ರೈತರು ಇರುವುದು ಶೋಚನೀಯ ಸಂಗತಿ ಎಂದರು.ಜಿಲ್ಲೆಯ ರೈತರು ಶ್ರಮಜೀವಿಗಳು ಮಳೆ ಇಲ್ಲದಿದ್ದರೂ ಕೊಳವೆ ಬಾವಿಗಳ ಮೂಲಕ ನೀರು ತೆಗೆದು ತರಕಾರಿಗಳನ್ನು ಬೆಳೆದು ನೆರೆ ರಾಜ್ಯಗಳಿಗೂ ಕಳುಹಿಸಿ ಕೊಡುವಷ್ಟು ಸಮರ್ಥರಾಗಿರುವುದು ಶ್ಲಾಘನೀಯ, ಪ್ರಸ್ತುತ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಪಡೆಯುವ ಮೂಲಕ ಅಂರ್ತಜಲ ಅಭಿವೃದ್ದಿಗೊಂಡು ನೀರಿನ ಸಮಸ್ಯೆ ಸುಧಾರಣೆ ಕಂಡಿದೆ ಎಂದರು.ಸಾಲ ವಸೂಲಾತಿ ಕಿರುರುಳ
ಆದರೆ ರೈತರ ಆರ್ಥಿಕ ಪರಿಸ್ಥಿತಿಗಳು ಶೋಚನೀಯ ಸ್ಥಿತಿಯಲ್ಲಿದ್ದು ತಳಮಟ್ಟದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ರೋಗರುಜಿನುಗಳಿಗೆ ಬಲಿಯಾಗುತ್ತಿದ್ದಾರೆ. ಪ್ರತಿದಿನ ೩ ಮಂದಿ ರೈತರು ದೇಶದಲ್ಲಿ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಮಹಿಳಾ ಸ್ವಸಹಾಯಗಳ ಸಂಘಗಳ ಸಾಲವನ್ನು ವಸೂಲಾತಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ ಸಂಗತಿಯಾಗಿದೆ ಎಂದರು. ಭದ್ರತೆ ಇಲ್ಲದೆ ಸಾಲನೀಡಿರೈತರು ಮೈಕ್ರೋ ಫೈನಾನ್ಸ್‌ಗಳ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡ ಬೇಕಾಗಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸುವುದು ಅಗತ್ಯ, ಸಾಲ ವಸೂಲಾತಿ ಮುಂದೂಡಬೇಕು, ಬೆಳೆ ವಿಮೆ ಬೆಲೆ ಭದ್ರತೆಗಳನ್ನು ವೈಜ್ಞಾನಿಕವಾಗಿ ಖಾತರಿಗೊಳಿಸಬೇಕು, ಪ್ರತಿ ಕುಟುಂಬಕ್ಕೆ ಭದ್ರತೆ ಇಲ್ಲದೆ ೧ ಲಕ್ಷ ರೂ.ವರೆಗೆ ಸಾಲ ನೀಡಬೇಕು, ರಿಸರ್ವ್‌ಬ್ಯಾಂಕ್ ಆದಾಯದ ಶೇ.೨೦ ಭಾಗ ರೈತರ ಕೃಷಿ ಸಾಲಕ್ಕೆ ಮೀಸಲಿಡಬೇಕು, ರೈತರ ಸಾಲದ ಮೊತ್ತ ದ್ವಿಗುಣಗೊಳಿಸ ಬೇಕು ಎಂದರು.ರೈತ ಘಟಕದ ಉಪಾಧ್ಯಕ್ಷ ಡಾ. ವಿ. ವೆಂಕಟರಾಮಯ್ಯ,ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ.ಗೋಮರ್ಸಿ ಜಿಲ್ಲಾ ಉಸ್ತುವಾರಿ ಮಹೇಶ್.ಬಿ.ವಿ, ಮುಖಂಡರಾದ ಡ್ಯಾನಿಯಲ್, ವೆಂಕಟರವಣರೆಡ್ಡಿ ಇದ್ದರು.