ನಾಗಮೋಹನ್‌ದಾಸ್‌ ವರದಿ ಪರಿಷ್ಕರಿಸುವಂತೆ ಪ್ರತಿಭಟನೆ

| Published : Aug 14 2025, 01:00 AM IST

ಸಾರಾಂಶ

ಜಾತಿಗಳ ದತ್ತಾಂಶವು ಹೊಲಯ ಬಲಗೈ ಜಾತಿಗೆ ಸೇರಿದ್ದು, ಇದನ್ನು ಒಟ್ಟುಗೂಡಿಸಿ ದತ್ತಾಂಶವಾಗಿ ಪರಿಗಣಿಸಿ ಘನ ಸರ್ಕಾರವು ಒಳ ಮೀಸಲಾತಿ ವರದಿಯನ್ನು ಜಾರಿ ಮಾಡಬೇಕಾಗಿ ಹೊಲಯ ಮತ್ತು ಇತರೆ ಜಾತಿಗಳ ಒಕ್ಕೂಟದಿಂದ ಮನವಿ ಸಲ್ಲಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಹಾಸನ

ಜಸ್ಟೀಸ್ ನಾಗಮೋಹನ್‌ದಾಸ್‌ರವರು ನೀಡಿರುವ ಒಳ ಮೀಸಲಾತಿ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ಜಾರಿ ಮಾಡುವ ಮೊದಲು ಸರ್ಕಾರವು ಪುನರ್ ಪರಿಶೀಲನೆ ಮಾಡಲು ಉಪ ಸಮಿತಿಯನ್ನು ರಚನೆ ಮಾಡಿ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ ನಂತರ ಒಳ ಮೀಸಲಾತಿ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಬಲಗೈ ಸಂಬಂಧಿತ ಜಾತಿಗಳ ಒಕ್ಕೂಟದಿಂದ ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಬಿ.ಎಂ. ರಸ್ತೆ ಮೇಲೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮಶೇಖರ್ ಮಾತನಾಡಿ, ಜಾತಿಗಳ ದತ್ತಾಂಶವು ಹೊಲಯ ಬಲಗೈ ಜಾತಿಗೆ ಸೇರಿದ್ದು, ಇದನ್ನು ಒಟ್ಟುಗೂಡಿಸಿ ದತ್ತಾಂಶವಾಗಿ ಪರಿಗಣಿಸಿ ಘನ ಸರ್ಕಾರವು ಒಳ ಮೀಸಲಾತಿ ವರದಿಯನ್ನು ಜಾರಿ ಮಾಡಬೇಕಾಗಿ ಹೊಲಯ ಮತ್ತು ಇತರೆ ಜಾತಿಗಳ ಒಕ್ಕೂಟದಿಂದ ಮನವಿ ಸಲ್ಲಿಸುತ್ತಿದ್ದೇವೆ. ಒಂದು ವೇಳೆ ಸರ್ಕಾರವು ತಮ್ಮ ಮನವಿಯನ್ನು ಪುರಸ್ಕರಿಸದಿದ್ದಲ್ಲಿ ಇಡೀ ರಾಜ್ಯಾದಂತ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದರು. ಹೊಲಯ, ಬಲಗೈ ಹಾಗೂ ಇತರೆ ಒಟ್ಟು ೧೮ ಉಪ ಜಾತಿಗಳ ದತ್ತಾಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಪಾದಕ ಹಾಗೂ ದಲಿತ ಮುಖಂಡ ನಾಗರಾಜ್ ಹೆತ್ತೂರ್, ದಲಿತ ಹಿರಿಯ ಮುಖಂಡ ಎಚ್.ಕೆ. ನಾಗೇಶ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ವಕೀಲರಾದ ಬಿ.ಸಿ. ರಾಜೇಶ್, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಎಚ್.ಎಸ್. ಕುಮಾರ್ ಗೌರವ್, ಎಚ್.ಆರ್. ಕುಮಾರಯ್ಯ, ದಸಂಸ ರಾಜಶೇಖರ್, ಅಹಿಂದ ಮುಖಂಡ ಜಗದೀಶ್ ಚೌಡಳ್ಳಿ, ದಸಂಸ ಮುಖಂಡ ಎಚ್.ಎಸ್. ಅಣ್ಣಯ್ಯ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ದ್ಯಾವಪ್ಪ ಮಲ್ಲಿಗೆವಾಳ್ ಇತರರು ಉಪಸ್ಥಿತರಿದ್ದರು.