ಸಾರಾಂಶ
- ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಡಿಪೋ ಮ್ಯಾನೇಜರ್‌ಗೆ ಮನವಿ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದಿಂದ ದಾವಣಗೆರೆಗೆ ತೆರಳುವ ಕೆಎಸ್‍ಆರ್‌ಟಿಸಿ ಬಸ್‍ಗಳು ಹರಿಹರದ ಬಿಎಸ್‍ಎನ್‍ಎಲ್ ಕಚೇರಿ ಬಳಿ ನಿಲುಗಡೆ ಹಾಗೂ ನಗರದ ನಾಲ್ಕೂ ದಿಕ್ಕಿನಿಂದ ತೆರಳುವ ಹಾಗೂ ಆಗಮಿಸುವ ಬಸ್‍ಗಳನ್ನು ವಿವಿಧೆಡೆ ನಿಲುಗಡೆ ಮಾಡಲು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ, ಹರಿಹರ ಕೆಎಸ್‍ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ನಗರ ಹಾಗೂ ತಾಲೂಕಿನಿಂದ ವಿದ್ಯಾರ್ಥಿಗಳು, ನೌಕರರು, ಹಿರಿಯ ನಾಗರೀಕರು, ಅನಾರೋಗ್ಯ ಪೀಡಿತರು, ಅಂಗವಿಕಲರು, ಕೂಲಿ ಕಾರ್ಮಿಕರು ಸೇರಿದಂತೆ ಸಹಸ್ರಾರು ಜನ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ದಿನನಿತ್ಯ ಸಂಚರಿಸುತ್ತಾರೆ. ಅವರೆಲ್ಲ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣಕ್ಕೇ ಬಂದು ಬಸ್‌ನಲ್ಲಿ ಪ್ರಯಾಣಿಸಬೇಕಾದ ಸಮಸ್ಯೆ ಇದೆ. ದಾವಣಗೆರೆಗೆ ತೆರಳುವ ಪ್ರಯಾಣಿಕರನ್ನು ಬಿಎಸ್‍ಎನ್‍ಎಲ್ ಹಾಗೂ ಪೆಟ್ರೋಲ್ ಬಂಕ್ ಮುಂಭಾಗ, ಶಿವಮೊಗ್ಗಕ್ಕೆ ತೆರಳುವ ಪ್ರಯಾಣಿಕರನ್ನು ಮಹಜೇನಹಳ್ಳಿ ಗ್ರಾಮದೇವತಾ ದೇವಸ್ಥಾನ ಮುಂಭಾಗ, ಸರ್ಕಾರಿ ಆಸ್ಪತ್ರೆ ರಸ್ತೆಯ ಬಳಿ ಹಾಗೂ ವಿಶ್ವಬಂಧು ಬ್ಯಾಂಕ್ ಬಳಿ ರಾಣೆಬೆನ್ನೂರು, ಹಾವೇರಿಗೆ ತೆರಳುವ ಪ್ರಯಾಣಿಕರನ್ನು ಪೊಲೀಸ್ ಠಾಣೆ ಹಾಗೂ ಪ್ರವಾಸಿ ಮಂದಿರ ಬಳಿ ಹರಪನಹಳ್ಳಿಗೆ ತೆರಳುವ ಪ್ರಯಾಣಿಕರನ್ನು ಹಳೇ ಕೋರ್ಟ್ ಮುಂಭಾಗ ಕಿರ್ಲೋಸ್ಕರ್ ಮೇನ್ ಗೇಟ್ ಬಳಿ ಹತ್ತಿಸಿಕೊಳ್ಳಬೇಕು. ಅದೇ ಮಾರ್ಗದಿಂದ ಬರುವ ಪ್ರಯಾಣಿಕರನ್ನು ಸಹ ಅಲ್ಲಿ ಇಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪ್ರವೀಣ್‍ಕುಮಾರ್ ಜಿ.ಬಿ., ರಾಹುಲ್ ಮೆಹರ್ವಾಡೆ, ಇ.ಚರಣ್, ಆರ್. ಗೌತಮ್, ಕೆ.ಎಸ್. ಗಣೇಶ್, ಜಿ.ಯು. ಸಿದ್ದೇಶ್, ಎಂ.ಚಿನ್ಮಯಿ, ಪ್ರವೀಣ್, ಅಮನ್ ಹಾಗೂ ಇತರರು ಉಪಸ್ಥಿತರಿದ್ದರು.- - -
-19ಎಚ್‍ಆರ್‍ಆರ್02: