ಸಾರಾಂಶ
ವಲ್ಲಭಬಾಯಿ ನಗರ ಹಾಗೂ ರಾಜಗೋಪಾಲ ನಗರದಲ್ಲಿ ಕಳೆದ 200 ವರ್ಷಗಳಿಂದ ಎಸ್ಸಿ-ಎಸ್ಟಿ ಜನಾಂಗದವರು ವಾಸವಾಗಿದ್ದರು. ಆದರೆ, 16 ವರ್ಷದ ಹಿಂದೆ ಇಲ್ಲಿನ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದ್ದು, ಅವರಿಗೆ ಸೂರು ಕಲ್ಪಿಸಲು ಆಗ್ರಹಿಸಲಾಯಿತು.
- ಮಾದಿಗ ದಂಡೋರ ಸಮಿತಿಯಿಂದ ಸಾಮೂಹಿಕ ಬೃಹತ್ ತಮಟೆ ಚಳವಳಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಇಲ್ಲಿನ ರಾಜಗೋಪಾಲನಗರ ಹಾಗೂ ವಲ್ಲಭಬಾಯಿ ನಗರದಲ್ಲಿ ವಾಸವಾಗಿದ್ದ ಎಸ್ಸಿ ಎಸ್ಟಿ ಜನರನ್ನು ಕಳೆದ ಹಲವು ವರ್ಷಗಳ ಹಿಂದೆಯೇ ಒಕ್ಕಲೆಬ್ಬಿಸಲಾಗಿದೆ. ಆದರೆ ಯಾವುದೇ ಬಗೆಯ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಆದಕಾರಣ ಕೂಡ ಬೀದಿಪಾಲಾಗಿರುವ ಇಲ್ಲಿನ ಕುಟುಂಬಗಳಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ ಸಮಿತಿಯಿಂದ ಸಾಮೂಹಿಕ ಬೃಹತ್ ತಮಟೆ ಚಳವಳಿ ನಡೆಸಲಾಯಿತು.ಇಲ್ಲಿನ ಅಂಬೇಡ್ಕರ್ ಸರ್ಕಲ್‌ನಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿತು. ಬಳಿಕ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ವಲ್ಲಭಬಾಯಿ ನಗರ ಹಾಗೂ ರಾಜಗೋಪಾಲ ನಗರದಲ್ಲಿ ಕಳೆದ 200 ವರ್ಷಗಳಿಂದ ಎಸ್ಸಿ-ಎಸ್ಟಿ ಜನಾಂಗದವರು ವಾಸವಾಗಿದ್ದರು. ಆದರೆ, 16 ವರ್ಷದ ಹಿಂದೆ ಇಲ್ಲಿನ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಈ ಕುಟುಂಬಗಳೆಲ್ಲ ಇದೀಗ ಬೀದಿಪಾಲಾಗಿವೆ. ಆದಕಾರಣ ಇವರೆಲ್ಲರಿಗೂ ಸೂರು ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಗಂಗಾಧರ ಪೆರೂರು, ಅಧ್ಯಕ್ಷ ವೆಂಕಟೇಶ ಅನಂತಪುರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.