ಸಾರಾಂಶ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ಅಂಗಡಿ, ದೇವಸ್ಥಾನದ ಮೇಲೆ ದಾಳಿ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡಿಸಿ ಮೈಸೂರಿನ ಹೆಬ್ಬಾಳು ಬಡಾವಣೆ ನಿವಾಸಿಗಳು ಸೋಮವಾರ ಸಂಜೆ ಬಸವೇಶ್ವರ ವೃತ್ತದಲ್ಲಿ ಭಿತ್ತಿ ಪತ್ರ ಪ್ರದರ್ಶಿಸಿ, ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದರು.ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ಅಂಗಡಿ, ದೇವಸ್ಥಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿ ನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಹಿಂದೂಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ಹಿಂಸಾಚಾರ ಖಂಡನಿಯ. ಮೂಲಭೂತವಾದಿ ಸಂಘಟನೆಯೊಂದು ಮಾಡಿರುವ ಅದ್ವಾನಕ್ಕೆ ಇಡೀ ಹಿಂದೂ ಸಮುದಾಯ ನರಳುವಂತಾಗಿದೆ. ಈ ಬಗ್ಗೆ ಭಾರತದ ಪ್ರಧಾನಿ ಮೋದಿಯವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಬಾಂಗ್ಲಾದೇಶದ ಸ್ಥಳೀಯ ಆಡಳಿತದೊಂದಿಗೆ ರಾಜತಾಂತ್ರಿಕ ವ್ಯವಸ್ಥೆ ಮುಖೇನ ಹಿಂದೂಗಳ ರಕ್ಷಣೆ ಮಾಡದಿದ್ದಲ್ಲಿ ಭಾರತ ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನ ದಂಗೆ ಏಳುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದರು.ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ್, ಮುಖಂಡರಾದ ಕುಮಾರಗೌಡ, ಸತೀಶ್, ರಾಮಕೃಷ್ಣ, ಅರುಣ, ಯೋಗೇಶ್, ಬೋರೇಗೌಡ, ದೇವೇಗೌಡ, ಚಲುವಯ್ಯ, ರವಿ ಮೊದಲಾದವರು ಇದ್ದರು.