ಸಾರ್ವಜನಿಕ ರಸ್ತೆ ಒತ್ತುವರಿ ತೆರಿವಿಗಾಗಿ ಪ್ರತಿಭಟನೆ

| Published : Mar 26 2025, 01:33 AM IST

ಸಾರ್ವಜನಿಕ ರಸ್ತೆ ಒತ್ತುವರಿ ತೆರಿವಿಗಾಗಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗಾಣದಾಳು ಗ್ರಾಮದ ಪಿಎಸ್.ಸುಜಾತ ಪುಟ್ಟಸ್ವಾಮಿ ಅವರು ಸಾರ್ವಜನಿಕ ಬೀದಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಿಸಬೇಕು. ಇದಕ್ಕೆ ಸಹಕಾರ ನೀಡಿರುವ ತಾಪಂ ಇಒರನ್ನು ಕೂಡಲೇ ಅಮಾನತ್ತು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕ ಬೀದಿ ರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಗಾಣದಾಳು ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಪಂ ಕಚೇರಿ ಬಳಿ ಧರಣಿ ಕುಳಿತ ರೈತ ಮುಖಂಡ ಜಿ.ಎಸ್.ಜಯರಾಮು ಮಾತನಾಡಿ, ಗ್ರಾಮದ ಪಿಎಸ್.ಸುಜಾತ ಪುಟ್ಟಸ್ವಾಮಿ ಅವರು ಸಾರ್ವಜನಿಕ ಬೀದಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಿಸಬೇಕು. ಇದಕ್ಕೆ ಸಹಕಾರ ನೀಡಿರುವ ತಾಪಂ ಇಒರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ಅಧಿಕಾರಿಗಳ ಪಿತೂರಿಯಿಂದ ಸಾರ್ವನಿಕರ ಬೀದಿ ಒತ್ತುವರಿಯಾಗಿದೆ. ಅಧಿಕಾರಿಗಳು ದೂರು ನೀಡಿದ್ದರೂ ನಮ್ಮದೆ ತಪ್ಪು ಎನ್ನುತ್ತಾರೆ. ನ್ಯಾಯಕೇಳಿದವರ ಮೇಲೆಯೇ ದಬ್ಬಾಳಿಕೆ ಮಾಡುವ ಇಂತಹ ಅಧಿಕಾರಿಗಳು ಜನಸೇವಕರು ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದರು.

ಸುಮಾರು 6 ರಿಂದ 7 ಅಡಿಗಳಷ್ಟು ಜಾಗವನ್ನು ಸ್ವಂತ ಜಾನವಾರುಗಳನ್ನು ಕಟ್ಟಿಹಾಕಲು ಬಳಸಿಕೊಳ್ಳುತ್ತಿರುವುದನ್ನು ತೆರವು ಗೊಳಿಸಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಾಧ್ಯವಾಗುತ್ತಿಲ್ಲ. ಲಂಚಪಡೆದು ಅಕ್ರಮಗಾರರಿಗೇ ಸಹಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಯರಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜು, ಚನ್ನಕೇಶವ, ಶಿವಮ್ಮ, ಪುಟ್ಟಸ್ವಾಮಿ, ರತ್ನ,ಆನಂದ್, ನಾಗರಾಜು, ರುದ್ರೇಶ್ ಇದ್ದರು.

ಮಾ.27,28 ರಂದು ಮಹಿಳೆಯರಿಗೆ ಕ್ರೀಡಾಕೂಟ ಆಯೋಜನೆ

ಮದ್ದೂರು:

ತಾಪಂನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಸ್ಪರ್ಧೆಗಳಲ್ಲಿ ಪ್ರಥಮ‌ ಸ್ಥಾನ ಪಡೆದ ಸ್ಪರ್ಧಾಳುಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಮಾರ್ಚ್ 27ರಂದು ತಾಲೂಕು ಕ್ರೀಡಾಂಗಣದಲ್ಲಿ ಕ್ರಿಕೆಟ್, ಥ್ರೋಬಾಲ್, ಕಬಡ್ಡಿ, ಶಾಟ್ ಪುಟ್, ಡಿಸ್ಕಸ್ ಥ್ರೋ, 100 ಮೀ ಓಟದ ಸ್ಪರ್ಧೆಗಳು ಜರುಗಲಿವೆ. ಈ ಸ್ಪರ್ಧೆಗಳ ಮಾಹಿತಿಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ ಮೊ.9964029537, ನಂದೀಶ್, 7019462386 ಸಂಪರ್ಕಿಸಬಹುದು. ಕೃಷಿ ಇಲಾಖೆ ಆವರಣದಲ್ಲಿ ರಾಗಿ ಬೀಸುವ ಸ್ಪರ್ಧೆ ನಡೆಯಲಿದೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ ಮೊ. 9449029862 ಸಂಪರ್ಕಿಸಬಹುದು. ಮಾ.28 ರಂದು ತಾಲೂಕು ಕ್ರೀಡಾಂಗಣದಲ್ಲಿ ರಂಗೋಲಿ ಹಾಗೂ ತರಕಾರಿ ಕೆತ್ತನೆ ಸ್ಪರ್ಧೆ ನಡೆಯಲಿದೆ. ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ ಮೊ. 9611515776 ಸಂಪರ್ಕಿಸಬಹುದು. ಚರ್ಚಾ ಸ್ಪರ್ಧೆ, ಆಶು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಮೊ. 9945886188, ಪ್ರಕಾಶ್ ಮೊ.9901667261 ಸಂಪರ್ಕಿಸುವಂತೆ ತಾಪಂ ಇಒ ರಾಮಲಿಂಗಯ್ಯ ತಿಳಿಸಿದ್ದಾರೆ.