ಕನ್ನಡಪ್ರಭ ವಾರ್ತೆ ಸಿಂದಗಿ ಎಂಎಸ್‌ಪಿ ಪ್ರಕಾರ ಪ್ರತಿ ಟನ್‌ ಕಬ್ಬಿಗೆ ₹5500 ಬೆಲೆ ನಿಗದಿಪಡಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ರಸ್ತೆ ತಡೆ ಚಳುವಳಿ ನಡೆಸಿದರು. ನಂತರ ಸಿಂದಗಿ ತಲಾಟೆ ನಿಖಿಲ್‌ ಖಾನಾಪುರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಎಂಎಸ್‌ಪಿ ಪ್ರಕಾರ ಪ್ರತಿ ಟನ್‌ ಕಬ್ಬಿಗೆ ₹5500 ಬೆಲೆ ನಿಗದಿಪಡಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ರಸ್ತೆ ತಡೆ ಚಳುವಳಿ ನಡೆಸಿದರು. ನಂತರ ಸಿಂದಗಿ ತಲಾಟೆ ನಿಖಿಲ್‌ ಖಾನಾಪುರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಈ ಕೂಡಲೇ ಕೇಂದ್ರ ಸರ್ಕಾರವು ರೈತರ ನೋವಿಗೆ ಸ್ಪಂದಿಸಬೇಕು. ಅಲ್ಲದೆ, ಪ್ರತಿ ಟನ್‌ ಕಬ್ಬಿಗೆ ₹5500 ನಿಗದಿ ಮಾಡಬೇಕು. ಕಬ್ಬಿನ ಬೆಳೆಯ ಜತೆಗೆ ತೊಗರಿ ಮತ್ತು ಹತ್ತಿ ಪ್ರತಿ ಕ್ವಿಂಟಲ್‌ಗೆ ₹15000 ನಿಗದಿಯಾಗಬೇಕು. ಹೀಗಾಗಿ ಕೇಂದ್ರವು ಕೂಡಲೇ ಏಳು ದಿನಗಳ ಒಳಗಾಗಿ ಈ ಬೇಡಿಕೆಗಳನ್ನು ಈಡೇರಿಸಬೇಕು. ಇಳ್ಲವಾದಲ್ಲಿ ಗೋಲಗೇರಿ ಸಂಪೂರ್ಣವಾಗಿ ಬಂದ್ ಮಾಡಿ ರೈತರ ಹೋರಾಟಕ್ಕೆ ಹೆಚ್ಚಿನ ಸ್ವರೂಪ ತಾಳಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹೋರಾಟದ ನೇತೃತ್ವವನ್ನು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರೀಶೈಲ ಜಾಲವಾದಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಶಿವು ಹತ್ತಿ, ರೈತ ಹೋರಾಟಗಾರ ಹಣಮಂತ್ರಾಯ ಚಿಂಚೋಳಿ, ಬಸವರಾಜ ಹದಗಲ, ದೇವಣ್ಣಗೌಡ ಹದಗಲ, ನೀಲಕಂಠ ಚಲವಾದಿ, ಮಡಿವಾಳ ನಾಯ್ಕೋಡಿ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಮಾರಲಬಾವಿ, ಅಂಬರೀಶ ಮಾರಲಬಾವಿ, ಗೌಡಣ್ಣ ಬಿರಾದಾರ ಮತ್ತು ಮುರುಗೇಶ ನಾಯ್ಕೋಡಿ, ಬಾಬು ಜಾಲವಾದಿ, ಶರಣಗೌಡ ಪಾಟೀಲ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.----------