ನರಿಬೋಳ ಚಾಮನೂರಿನ ಸೇತುವೆಗೆ ಅಕ್ಟೋಬರ್ ಮೊದಲ ವಾರದೊಳಗೆ ಟೆಂಡರ್ ಕರೆಯದಿದ್ದರೆ ಲೋಕೋಪಯೋಗಿ ಇಲಾಖೆ ಭವನ ಎದುರುಗಡೆ ಅನಿರ್ದಿಷ್ಠಾವದಿ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ನರಿಬೋಳ ಚಾಮನೂರಿನ ಸೇತುವೆಗೆ ಅಕ್ಟೋಬರ್ ಮೊದಲ ವಾರದೊಳಗೆ ಟೆಂಡರ್ ಕರೆಯದಿದ್ದರೆ ಲೋಕೋಪಯೋಗಿ ಇಲಾಖೆ ಭವನ ಎದುರುಗಡೆ ಅನಿರ್ದಿಷ್ಠಾವದಿ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ತಿಳಿಸಿದರು.2017ರಲ್ಲಿ ಪ್ರಾರಂಭವಾಗಿ ಅಗ್ರಿಮೆಂಟ್ ಪ್ರಕಾರ ಒಂದುವರೆ ವರ್ಷದೊಳಗೆ ಮುಗಿಸಬೇಕಿದ್ದ ನರಿಬೋಳ ಚಾಮನೂರಿನ ಸೇತುವೆಯು ಹಲವಾರು ವರ್ಷಗಳಾಗುತ್ತಾ ಬಂದಿದ್ದರು ಕಾಮಗಾರಿಯು ಪೂರ್ಣಗೊಂಡಿಲ್ಲ.ಇದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರ ಕ್ಷೇತ್ರಕ್ಕೆ ಸಂಬಂದಿಸಿದ್ದಾಗಿದ್ದು, ಇಲ್ಲೇ ಹೀಗಾದರೆ ಮುಂದೆ ಗತಿ ಹಗೆದು ಪಾಟೀಲ್‌ ಪ್ರಶ್ನಿಸಿದರು.

ಚಾಮನೂರು ರೈತರೆಲ್ಲರು ಸೇತುವೆಗ ಬೇಕಾದಂತಹ ಜಮೀನೆಲ್ಲಾ ನೇರ ಮಾರಾಟ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿ ಒಂದು ವರ್ಷವಾಗಿದೆ .ಆದರೆ ಎನ್‌ಎಚ್ ಅಧಿಕಾರಿಗಳು ಜಮೀನು 4161 ಮಾಡಿ ಹಸ್ತಾಂತರ ಮಾಡಬೇಕು ಎಂದು ಪತ್ರ ಬರೆದಿರುವುದು ನಾಚಿಕೆ ಗೇಡಿನ ವಿಷಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸೇತುವೆ ಕೆಲಸ ಪ್ರಾರಂಭವಾಗಿ ಹಲವಾರು ವರ್ಷಗಳಾಗುತ್ತಾ ಬಂದಿದ್ದರೂ 4161 ಮಾಡದೆ ನಿರ್ಲಕ್ಷ ತೋರಿದ ಅಧಿಕಾರಿಗಳ ಅಮಾನತು ಮಾಡಿ ಕೂಡಲೆ ಟೆಂಡರ್ ಕರೆಯಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಒತ್ತಾಯಿಸಿದರು. ಈ ಸಂದರ್ಭ ಲಕ್ಷ್ಮೀಕಾಂತ ಸ್ವಾದಿ, ಮಹೇಶ ಕೆಂಬಾವಿ, ಮಂಜುನಾಥ ಉಪಸ್ಥಿತರಿದ್ದರು.