ಇಂದು ಹೆಸ್ಕಾಂ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ

| Published : Sep 04 2024, 01:45 AM IST

ಸಾರಾಂಶ

ದೇಶದ ಬೆನ್ನೆಲಬು ರೈತರು ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು, ಸರ್ಕಾರ ಇಂದು ರೈತರ ಪಂಪಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಹೊರಟು ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಈ ಕುರಿತು ಸೆ.4 ರಂದು ವಿಜಯಪುರ ಹೆಸ್ಕಾಂ ಕೇಂದ್ರ ಕಚೇರಿ ಮುಂದೆ ರೈತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್‌.ಬಿ.ಕೆಂಬೋಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಕಷ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಬಾರದೇ ಕಾರ್ಪೊರೇಟರ್‌ ಕಂಪನಿಗಳ ಪರ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಕೃಷಿ ವಲಯಕ್ಕೆ ಕಿಂಚಿತ್ತೂ ಲಾಭವಾಗಬಾರದೆಂದು ನಡೆಸುತ್ತಿರುವ ಸರ್ಕಾರದ ಈ ಪ್ರಯತ್ನವಾಗಿದೆ. 77 ವರ್ಷದಿಂದಲೂ ಈ ಕೆಸಲ ಈ ನಾಡಿನ ರೈತರ ಮೇಲೆ ನೆಡೆದು ಬಂದಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳ ಮಧ್ಯ ರೈತನು ಕೃಷಿಯಿಂದ ಆರ್ಥಿಕ ಲಾಭ ಪಡೆದುಕೊಳ್ಳದೇ ದುಡಿದು, ದುಡಿದು ತೊಂದರೆ ಅನುಭವಿಸುತ್ತಿದ್ದರೂ ಇದ್ಯಾವುದು ಸರ್ಕಾರಗಳ ಗಮನಕ್ಕೆ ಬರುತ್ತಿಲ್ಲ ಎಂದು ದೂರಿದರು.ಡಾ.ಸ್ವಾಮೀನಾಥ್ ವರದಿಯಂತೆ ರೈತನಿಗೆ ಕನಿಷ್ಠ ಬೆಲೆ ನಿಗದಿ ಮಾಡಿ ಎಂದು ಭಾರತ ಸರ್ಕಾರಕ್ಕೆ ವರದಿ ನೀಡಿ 23 ವರ್ಷಗಳು ಕಳೆದಿವೆ. 2000ನೇ ಇಸ್ವಿಯಲ್ಲಿ ಕಾಂಗ್ರೆಸ್ ಸರ್ಕಾರದ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿ ಇದ್ದಾಗ ಕೆಇಬಿ ಯನ್ನು ಖಾಸಗೀಕರಣಕ್ಕೆ ವರ್ಗಾಯಿಸಿತ್ತು. ಆಗ 2001ರಲ್ಲಿ ರಾಜ್ಯ ವ್ಯಾಪಿ ರೈತರಿಂದ ಪ್ರತಿಭಟನೆ ಮಾಡಿದ ಪರಿಣಾಮ ಖಾಸಗಿ ವ್ಯಕ್ತಿ ಕೈ ಸೇರಬೇಕಾದ ವಿದ್ಯುತ್ ಕಂಪನಿ 5 ಭಾಗವಾಗಿ ಸರ್ಕಾರದಲ್ಲೇ ಉಳಿದಿದೆ. ಮತ್ತೆ ಈಗ ಕೃಷಿ ಪಂಪಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಿ ಆನ್‌ಲೈನ್‌ ಮೂಲಕ ವ್ಯವಹಾರ ನಡೆಸುವ ಸಂಚು ನಡೆದಿದೆ. ಸರ್ಕಾರ ಹೆಸ್ಕಾಂ ಕಂಪನಿಯನ್ನು ಖಾಸಗೀಕರಣ ಮಾಡುವುದು, ರೈತರ ಪಂಪಸೆಟ್‌ಗಳಿಗೆ ಮಿಟರ್‌ ಅಳವಡಿಸುವ ಕಾರ್ಯ ನಿಲ್ಲಿಸಬೇಕು. ಇಲ್ಲವಾದರೇ ಮುಂಬರುವ ದಿನದಲ್ಲಿ ರೈತ ಸಂಘಟನೆಯಿಂದ ಉಗ್ರ ಹೊರಾಟ ಮಾಡಬೇಕಾಗುತ್ತದೆ. ಹೋರಾಟದಲ್ಲಿ ಸಂಭವಿಸುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಗೊಷ್ಠಿಯಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಹಣಮಂತ ಗುಡ್ಲ, ಜಟ್ಟೆಪ್ಪ ಪೂಜಾರಿ, ಭೀರಪ್ಪ ಪೂಜಾರಿ, ರಫೀಕ್ ಚೌಧರಿ ಇತರರು ಇದ್ದರು.