ಸಾರಾಂಶ
ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ನಗರದಲ್ಲಿ ಮಂಗಳವಾರ ದಿ. ಎ.ಜೆ. ಮುಧೋಳ ಅಭಿಮಾನಿಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಎಐಟಿಯುಸಿ) ಹಾಗೂ ರಾಷ್ಟ್ರೀಯ ಆಹಿಂದ ಸಂಘಟನೆ, ರಾಷ್ಟ್ರೀಯ ಮಹಿಳಾ ಸಂಘಟನೆಗಳ ವತಿಯಿಂದ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆ ವೇಳೆ ವಕ್ಫ್ ತಿದ್ದುಪಡಿ ಕಾಯ್ಕೆ ವಿರೋಧಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ವಕ್ಫ್ ಮಸೂದೆಯನ್ನು ರದ್ದುಪಡಿಸಬೇಕು. ಈ ಮಸೂದೆ ಮೂಲಕ ಉದ್ದೇಶ ಪೂರ್ವಕವಾಗಿ ಅಲ್ಪಸಂಖ್ಯಾತರ ಜಮೀನನ್ನು ಉದ್ಯಮಿಗಳಿಗೆ ನೀಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದು ನಮ್ಮ ಹಕ್ಕು. ಒಂದು ವೇಳೆ ಕೇಂದ್ರ ಸರ್ಕಾರ ಈ ಕರಾಳ ಕಾನೂನನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಅನಿವಾಸಿಗಳು ಇನ್ನಿತರ ಸಮುದಾಯ ಸೇರಿಕೊಂಡು ರಾಜ್ಯವ್ಯಾಪ್ತಿ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನೆಕಾರರು ಎಚ್ಚರಿಸಿದರು.
ರಾಷ್ಟ್ರೀಯ ಅಹಿಂದ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಬಾಬಾಜಾನ ಮುಧೋಳ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಈ ವೇಳೆ ಮುತ್ತಣ್ಣ ಶಿವಳ್ಳಿ, ಪೀರಸಾಬ ನದಾಫ, ಬಿ.ಎ. ಮುಧೋಳ, ಅಬ್ದುಲ್ ಖಾದರ್ ಬೆಟಗೇರಿ, ಮೊಕ್ತಿಯಾರ ಮನಿಯಾರ, ಕರೀಮ್ ಲಕ್ಕುಂಡಿ, ಯೂಸೂಫ ಬಳ್ಳಾರಿ, ಶಮ್‌ಸೀದ್ ಗಾಂಜೇವಾಲೆ, ಇಮ್ತಿಯಾಜ್ ಬಿಳೆಪಸಾರ, ಝಾಕೀರ ಪಠಾಣ, ಇಕ್ಬಾಲ್ ಚಿತ್ತೆವಾಲೆ, ನಗಿನಾ ಮುಲ್ಲಾ, ಸೆಹನಾಜ್ ಅಮರಗೋಳ, ರಮೇಶ ಭೊಸ್ಲೆ, ಶಾಜಿದ ಹಾಲಭಾವಿ, ಫಾತಿಮಾ ತಡಕೋಡ, ರೆಹಮಾನಸಾಬ ಮಕಾನದಾರ, ಆಸೀಶ ಜುಂಗೂರು ಸೇರಿದಂತೆ ಹಲವರಿದ್ದರು. ವಕ್ಫ್ ಮಸೂದೆ, ಯತ್ನಾಳ್ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆನವಲಗುಂದ: ವಕ್ಫ್ ಮಸೂದೆ ವಿರೋಧಿಸಿ ಹಾಗೂ ಶಾಸಕ ಬಸವರಾಜ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ಅಂಜುಮನ್ ಸಂಸ್ಥೆ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಅಂಜುಮನ್ ಶಾದಿ ಮಹಲ್‌ನಿಂದ ತಹಸೀಲ್ದಾರ್ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡುವ ಅಂಶಗಳಿವೆ. ಈ ಮಸೂದೆಯಲ್ಲಿ ರೂಪಿಸಿರುವ ಬದಲಾವಣೆಗಳು ಸಂವಿಧಾನದ ಆರ್ಟಿಕಲ್ 25ರಿಂದ 30ರ ಅಡಿ ನೀಡಿರುವ ಹಕ್ಕುಗಳಿಗೆ ವಿರುದ್ಧವಾಗಿವೆ. ಈ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸಿದರೆ ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ತಕ್ಷಣವೇ ಈ ಮಸೂದೆಯನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರ ಮಸೂದೆಯನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ತಹಸೀಲ್ದಾರ್ ಸುಧೀರ ಸಾಹುಕಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಅಂಜುಮನ್ ಅಧ್ಯಕ್ಷ ಸಯ್ಯದ್ ಅಮಾನುಲ್ಲಾ ಖಾಜಿ, ಅಲ್ಲಾಸಾಬ್ ಕಲ್ಕುಟ್ರಿ, ಸಿರಾಜುದ್ದೀನ್ ಧಾರವಾಡ, ಅಷ್ಪಾಕ್ ಹುಸೇನ್, ಉಸ್ಮಾನ ಬಬರ್ಚಿ, ದಾವಲಸಾಬ ಮಸೂತಿ, ಸುಲೇಮಾನ್ ನಾಶಿಪುಡಿ, ಜಾವಿದ್ ಗುತ್ತಲ, ಮುನ್ನಾ ರಾಮದುರ್ಗ, ಆರ್.ಎಸ್. ಪೀರಜಾದೆ, ಕಾಶಿಮಸಾಬ ಅಲ್ಲಿಬಾಯಿ, ಎಂ.ಎಂ. ಗದಗ, ಅನ್ವರ್ ಮೂಲಿಮನಿ, ಮೈನುದ್ದೀನ್ ಧಾರವಾಡ, ಕಾಶಿಮಸಾಬ ಅಲ್ಲಿಬಾಯಿ, ಶಬ್ಬೀರ್ ಧಾರವಾಡ, ಅಬ್ದುಲ್ ಕುನ್ನಿಬಾಯಿ, ಸುಭಾನ್ ಬೇಪಾರಿ, ಬಾಬರ ದಫೇದಾರ್, ಹುಸೇನ್ ದೋಣಿಭಾಯಿ, ಸೈಯ್ಯದ್ ಹುಗ್ಗಿ, ಎಂ.ಎಂ. ಮುಲ್ಲಾ, ಎ.ಎಂ. ನದಾಫ್, ಇಮ್ತಿಯಾಜ್ ಜಮಖಾನ್, ಮಮ್ಮದ್ ಮಟಿಗಾರ್, ಸಿಕಂದರ್ ಶಿರಗುಪ್ಪಿ, ಹಲೇಸಾಬ ರಾಮದುರ್ಗ ಸೇರಿದಂತೆ ಸಾವಿರಾರು ಮುಸ್ಲಿಂ ಭಾಂದವರು ಪ್ರತಿಭಟನೆಯಲ್ಲಿದ್ದರು.