ಸಾರಾಂಶ
ರೈತರಿಗೆ ಸಮರ್ಪಕ ರಸಗೊಬ್ಬರ, ಯೂರಿಯಾ ಒದಗಿಸುವಂತೆ ಒತ್ತಾಯಿಸಿ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿ ಮುಂಭಾಗ ಗುರುವಾರ ರಾತ್ರಿ 8 ಗಂಟೆಯವರೆಗೂ ಮಳೆ ನಡುವೆಯೂ ಸರ್ಕಾರದ ವಿರುದ್ಧ ಘೋಷಣೆ ಹಾಕಿ ನಡೆಸುತ್ತಿದ್ದ ಪ್ರತಿಭಟನೆ ಶುಕ್ರುವಾರ ಸಹ ಮುಂದುವರಿಯಿತು.
ಕನ್ನಡಪ್ರಭ ವಾರ್ತೆ ಜಗಳೂರು
ರೈತರಿಗೆ ಸಮರ್ಪಕ ರಸಗೊಬ್ಬರ, ಯೂರಿಯಾ ಒದಗಿಸುವಂತೆ ಒತ್ತಾಯಿಸಿ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರಾಜ್ಯ ರೈತ ಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿ ಮುಂಭಾಗ ಗುರುವಾರ ರಾತ್ರಿ 8 ಗಂಟೆಯವರೆಗೂ ಮಳೆ ನಡುವೆಯೂ ಸರ್ಕಾರದ ವಿರುದ್ಧ ಘೋಷಣೆ ಹಾಕಿ ನಡೆಸುತ್ತಿದ್ದ ಪ್ರತಿಭಟನೆ ಶುಕ್ರುವಾರ ಸಹ ಮುಂದುವರಿಯಿತು.ತಾಲೂಕು ಅಧ್ಯಕ್ಷ ಚಿರಂಜೀವಿ ಮಾತನಾಡಿ, ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಅಧಿಕ ಪ್ರದೇಶಗಳಗಿ ಬೆಳೆಯಲಾಗಿದೆ. ಆದರೆ, ರೈತರು ಉತ್ತಮ ಮಳೆಯಾಗುತ್ತಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಪರದಾಡುತ್ತಿದ್ದಾರೆ. ಇತ್ತ ಅಂಗಡಿಯವರು ದುಬಾರಿ ಬೆಲೆಗೆ ಮಾರಾಟ ಮಾಡುತ್ತ, ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಸಯೀದ್ ಕಲೀಂ ಉಲ್ಲಾ ಮಾತನಾಡಿ, ಗೊಬ್ಬರದ ಅಂಗಡಿ ಮಾಲೀಕರು ಏನಾದರೂ ಗೋಡೌನ್‌ನಲ್ಲಿ ಸ್ಟಾಕ್ ಇಟ್ಟಿದ್ದರೆ ತಿಳಿಸಬಹುದು. ದೂರು ಆಧರಿಸಿ ತಕ್ಷಣವೇ ಅಂತಹ ಗೋಡೌನ್‌ಗಳಿಗೆ ದಾಳಿ ನಡೆಸಿ, ಕ್ರಮ ಕೈಗೊಳ್ಳುತ್ತೇವೆ. ರೈತರು ಯಾವುದೇ ಆತಂಕ ಪಡಬೇಡಿ ಎಂದು ಮನವಿ ಮಾಡಿದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಶ್ವೇತಾ ಮಾತನಾಡಿ, ಯೂರಿಯಾ ಗೊಬ್ಬರ ಬೇಡಿಕೆಗೆ ಅನುಗುಣವಾಗಿ ತರಿಸಲಾಗಿತ್ತು. ಹೆಚ್ಚಿನ ಬೇಡಿಕೆ ಬಂದಿದ್ದು, ಜಗಳೂರು ಪಟ್ಟಣ ಸೇರಿದಂತೆ ಸೊಕ್ಕೆ , ಬಿಳಿಚೋಡು, ಗಡಿಮಾಕುಂಟೆ, ಪಲ್ಲಾಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಯೂರಿಯಾ ತರಿಸಲಾಗಿದೆ. ನಾಳೆಯು ಸಹ ಉಳಿದ ಸೊಸೈಟಿಗಳಿಗೂ ಯೂರಿಯಾ ತರಿಸಲಾಗುತ್ತದೆ. ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ನಾಗರಾಜ್, ಗಂಗಾಧರಪ್ಪ, ಬಸಣ್ಣ, ತಿಪ್ಪಣ್ಣ, ಪರುಶಪ್ಪ, ಹುಸೇನ್ ಸಾಬ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.- - -
-25ಜೆ.ಜಿ.ಎಲ್.4.ಜೆಪಿಜಿ: ಜಗಳೂರು ರೈತರಿಗೆ ಸಮರ್ಪಕ ರಸಗೊಬ್ಬರ, ಯೂರಿಯಾ ವಿತರಣೆಗೆ ಒತ್ತಾಯಿಸಿ ರೈತ ಸಂಘದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.