ಸಾರಾಂಶ
- ಬಿಜೆಪಿ, ಹಿಂದೂಪರ ಸಂಘಟನೆಗಳ ಹೋರಾಟಕನ್ನಡಪ್ರಭ ವಾರ್ತೆ, ಶೃಂಗೇರಿ
ಕಾಶ್ಮೀರದಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಮಂದಿ ಹಿಂದೂಗಳನ್ನು ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ಖಂಡಿಸಿ ಶೃಂಗೇರಿಯಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳು ಬುಧವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿತು.ಪಟ್ಟಣದ ಕೆವಿಆರ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ದಿವೀರ್ ಮಲ್ನಾಡ್ ಮಾತನಾಡಿ ಇದೊಂದು ಅತ್ಯಂತ ಹೇಯ, ಅಮಾನವೀಯ, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ವಿಕೃತ ಜಿಹಾದಿ ಮನಸ್ಸುಗಳು ದೇಶದಲ್ಲಿ ಅಶಾಂತಿ ಮೂಡಿಸುತ್ತಿರುವ ಜೊತೆಗೆ ಹತ್ಯೆ ದೌರ್ಜನ್ಯ, ಕೆಟ್ಟ ನಡುವಳಿಕೆಗೆ ಕೊನೆಯಿಲ್ಲದಾಗಿದೆ. ಇದನ್ನು ಹಿಂದೂ ಸಮಾಜ ಚಿಂತಿಸಬೇಕಿದೆ ಎಂದರು.
ಹಿಂದೂಗಳ ನರಮೇದ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು,ಬುದ್ದಿಜೀವಿಗಳು ಇಂತಹ ಕೃತ್ಯದ ಬಗ್ಗೆ ಮಾತನಾಡುತ್ತಿಲ್ಲ. ಜಿಹಾದಿಗಳ ಅಟ್ಟಹಾಸಕ್ಕೆ ಕೊನೆಯಾಗಬೇಕು. ಕ್ರೂರ ಕೃತ್ಯ ನಡೆಸುತ್ತಿರುವ ಜಿಹಾದಿಗಳಿಗೆ ಜಾತಿ, ಧರ್ಮವಿಲ್ಲ. ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ವಕ್ಫ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ವಕ್ಫನಿಂದ ಸಾಮಾನ್ಯ ಜನರಿಗೆ ಏನಾದರೂ ಲಾಭವಾಗಿದೆಯೇ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ವಿರುದ್ಧ ರಸ್ತೆಯಲ್ಲಿ ಜಾಥಾ, ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದ ಕಾನೂನನ್ನು ಒಪ್ಪಿಕೊಳ್ಳಲಿ. ಇವರಿಗೆ ಪ್ರತ್ಯೇಕ ಕಾನೂನು ಏಕೆ. ದೇಶದೊಳಗಿನ ದ್ರೋಹಿಗಳು ಅಪಾಯಕಾರಿ. ಹಿಂದೂಗಳು ಒಗ್ಗಟ್ಟಾಗಬೇಕು ಎಂದರು.ಎ.ಎಸ್.ನಯನಾ ಮಾತನಾಡಿ ಇಂತಹ ಘಟನೆಗಳು ಕೊನೆಯಾಗಬೇಕು.ಇಂತಹ ಹತ್ಯೆಗಳು ನಿಲ್ಲಬೇಕು. ಇಸ್ರೇಲ್ ನಮಗೆ ಮಾದರಿಯಾಗಬೇಕಿದೆ. ಮೋದಿ,ಅಮೀತ್ ಶಾ ದಿಟ್ಟ ಕ್ರಮಕೈಗೊಳ್ಳಬೇಕು. ಜಾತಿ, ಮೀಸಲಾತಿ ಹೆಸರಲ್ಲಿ ಹೋರಾಟ ಮಾಡುತ್ತಿದ್ದಾರೆ. ದೇಶದ ಸಂಸತ್ತಿನಲ್ಲಿ ಬಹುಮತದ ಆಧಾರದ ಮೇಲೆ ರೂಪಿಸಿರುವ ಕಾಯ್ದೆ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ. ವಕ್ಫ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದು ಒಳ್ಳೆಯ ಬೆಳವಣಿಗೆ. ಇಡೀ ದೇಶವೇ ಇದರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರೆ ಜಿಹಾದಿ ಮನಸ್ಸು ಇದರ ವಿರುದ್ಧ ಅಪಪ್ರಚಾರ ಮಾಡಿ ಜನರಲ್ಲಿ ತಪ್ಪು ಭಾವನೆ ಹುಟ್ಟಿಸಿ ಪ್ರಚೋದನೆ ನೀಡಿ ಪ್ರತಿಭಟನೆ ಮಾಡಿಸು ದೇಶದ ಶಾಂತಿ ಸಾಮರಸ್ಯ ಹಾಳು ಮಾಡುತ್ತಿವೆ.ಪಶ್ಚಿಮ ಬಂಗಾಳದಲ್ಲಿ ಹಿಂಸೆ ದೌರ್ಜನ್ಯ ನಡೆಯುತ್ತಿವೆ. ಹಿಂದೂಗಳು ಊರು ತೋರೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾಶ್ಮೀರ ದಲ್ಲಿ ನಡೆಸಿರುವ ಇಂತಹ ಅಮಾನವೀಯ ಘಟನೆ ಮತ್ತೆ ಮರುಕಳಿಸದಂತೆ ಮೋದಿಯವರು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದರು.
ಹತ್ಯೆಗೀಡಾದ ಶಿವಮೊಗ್ಗ ಮೂಲದ ಮಂಜುನಾಥರಾವ್ ರವರ ಭಾವಚಿತ್ರದ ಎದುರು ಕ್ಯಾಂಡಲ್ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ವೇಣುಗೋಪಾಲ್, ಜಿ.ಎಂ. ಸತೀಶ್, ನೂತನ್,ಉಮೇಶ್ ತಲಗಾರು,ಕೆ.ಎಸ್.ರಮೇಶ್,ಪರಾಶರ,ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
23 ಶ್ರೀ ಚಿತ್ರ 2-ಶೃಂಗೇರಿ ಪಟ್ಟಣದಲ್ಲಿ ಕಾಶ್ಮಿರ ಹತ್ಯೆ ಘಟನೆ ಖಂಡಿಸಿ ಬಿಜೆಪಿ, ಹಿಂದೂಪರ ಸಂಘಚನೆಗಳು ಪ್ರತಿಭಟನೆ ನಡೆಸಿತು.