ಅಮಿತ್ ಶಾ ವಜಾಕ್ಕೆ ಆಗ್ರಹ

| Published : Jan 17 2025, 01:45 AM IST

ಸಾರಾಂಶ

ಕಾನೂನನ್ನು ಗೌರವಿಸಬೇಕಾದವರೇ ಈ ರೀತಿ ಮಾತನಾಡುತ್ತಾರೆ ಎಂದರೇ ಅವರ ಮನಸ್ಥಿತಿ ಹೇಗಿದೆ? ಎಂಬುದು ಅರ್ಥವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ದ್ರಾವಿಡ ಮಹಾಸಭಾ ಕಾರ್ಯಕರ್ತರು ಗುರುವಾರ ಪುರಭವನ ಬಳಿ ಪ್ರತಿಭಟಿಸಿದರು.ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅವರು ಪ್ರತಿಭಟನೆ ಆರಂಭಿಸಿದರು.ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಅಶೋಕಪುರಂ ಶ್ರೀನಿವಾಸ್ ಆಗ್ರಹಿಸಿದರು.ಕಾನೂನನ್ನು ಗೌರವಿಸಬೇಕಾದವರೇ ಈ ರೀತಿ ಮಾತನಾಡುತ್ತಾರೆ ಎಂದರೇ ಅವರ ಮನಸ್ಥಿತಿ ಹೇಗಿದೆ? ಎಂಬುದು ಅರ್ಥವಾಗುತ್ತದೆ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದಲೇ ಇವತ್ತು ಸಾಮಾನ್ಯ ಪ್ರಜೆ ಕೂಡ ಪ್ರಧಾನಿ, ರಾಷ್ಟ್ರಪತಿ ಆಗಲು ಸಾಧ್ಯವಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಅವರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಮೇಲೆ ಗೌರವವಿದ್ದಲ್ಲಿ ಕೂಡಲೇ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.ನಂತರ ಜಿಲ್ಲಾಧಿಕಾರಿ ಮೂಲಕ ಮನವಿಪತ್ರ ಕಳುಹಿಸಿಕೊಟ್ಟರು. ರಾಜ್ಯ ಕಾರ್ಯದರ್ಶಿ ಶಾಂತಮ್ಮ ಮೊದಲಾದವರು ಇದ್ದರು.