ಸಾರಾಂಶ
ಗದಗ: ಸ್ಲಂ ಜನರ ವಿವಿಧ ಬೇಡಿಕೆಗೆ ಆಗ್ರಹಿಸಿ ಆ. 11ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಸ್ಲಂ ಜನಾಂದೋಲನ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸ್ಲಂ ಜನರ ಮೇಲೆ ಭೂ ಮಾಫಿಯಾ ನಡೆಯುತ್ತಿದೆ. ರೆಹಮತ್ ನಗರದಲ್ಲಿ ರಿ. ಸೆ. ನಂ 594 ರಲ್ಲಿ 2000ರಲ್ಲಿ ಮಾಲಿಕ ದತ್ತಾತ್ರೆಯ ಭಾಂಡಗೆ 80 ಕುಟುಂಬಗಳಿಗೆ ಖರೀದಿ ನೀಡಿದ್ದರು. ಈಗ ಆ ಭೂಮಿ ಈಗ ಕೋಟ್ಯಾಂತರ ರುಪಾಯಿ ಬೆಲೆ ಬಾಳುತ್ತದೆ. ಮಾಲಿಕ ಬೇರೆಯವರ ಮೂಲಕ ಅಲ್ಲಿನ ಜನರಿಗೆ ದಬ್ಬಾಳಿಕೆ ಮೂಲಕ ಭೂಮಿ ಪಡೆಯಲು ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಕುತಂತ್ರಿ ಭೂ ಮಾಲಿಕನನ್ನು ಬಂಧಿಸಬೇಕು. ಎಸ್ಪಿ ಮಧ್ಯ ಪ್ರವೇಶಿಸಿ ಸ್ಲಂ ಜನರಿಗೆ ರಕ್ಷಣೆ ಕೊಡಬೇಕು ಎಂದರು.ಸ್ಲಂ ಜನರು ತಮ್ಮ ಸ್ವಂತ ಖರ್ಚಿನಿಂದ ಜಾಗೆಯನ್ನು ಖರೀದಿಸಿದ್ದಾರೆ. ಅಂದಿನ ಬೆಲೆಯಲ್ಲಿ ಭೂಮಿ ಖರೀದಿಸಿದ್ದಾರೆ. ಭೂ ಮಾಲಿಕ ಮತ್ತೆ ಅದೇ ಭೂಮಿ ಮಾರಲು ಕುತಂತ್ರ ಮಾಡುತ್ತಿದ್ದಾನೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಶಿಕ್ಷಣ, ವಸತಿ ನೀಡಬೇಕು ಅಂತ ಸಂವಿಧಾನದಲ್ಲಿ ಹೇಳಲಾಗಿದೆ. ಇದರ ಅಡಿಯಲ್ಲಿ ಸ್ಲಂ ಜನರಿಗೆ ನ್ಯಾಯ ಸಿಗಬೇಕು. ಗೋಸಾವಿ ಸಮುದಾಯದ ಜನರು 70 ವರ್ಷದಿಂದ ರೈಲ್ವೆ ಸ್ಟೆಷನ್ ಹತ್ತಿರ ವಾಸ ಮಾಡುತ್ತಿದ್ದಾರೆ. 70 ವರ್ಷ ಗತಿಸಿದರೂ ಅವರ ಮನೆಗಳಿಗೆ ವಿದ್ಯುತ್, ನೀರು ಇಲ್ಲದಾಗಿದೆ. 28 ಕುಟುಂಬಗಳು ತೊದರೆಯಲ್ಲೇ ಬದುಕುತ್ತಿದ್ದಾರೆ. ಆ ಪ್ರದೇಶವನ್ನು ಸ್ಲಂ ಅಂತ ಘೋಷಣೆ ಮಾಡಿ ಅವರಿಗೆ ಪುನರ್ ವಸತಿ ಕಲ್ಪಿಸಬೇಕು ಅಂತ ಮನವಿ ಮಾಡಿದರು.
ಇಲ್ಲಿನ ಪ್ರಭಾವಿ ಜನರು ಉದ್ದೇಶಪೂರ್ವಕವಾಗಿ ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ನಗರಸಭೆಯಿಂದ ಜಾಗ ತೆರವುಗೋಳಿಸುವಂತೆ ನೋಟಿಸ್ ನೀಡಲಾಗುತ್ತಿದೆ. ಬಡ ಜನರಿಗೆ ಸಂವಿಧಾನ ಹಕ್ಕು ಪಡೆದುಕೊಳ್ಳಲು ಕಷ್ಟಪಡುವ ವ್ಯವಸ್ಥೆ ನಡೆಯುತ್ತಿದೆ. ಸಂವಿಧಾನದ ಕಾಯ್ದೆ 226, 227 ರ ಮಾನವ ಹಕ್ಕುಗಳ ರಕ್ಷಣೆಗಾಗಿ ಹೈಕೋರ್ಟ್ ಮೊರೆ ಹೊಗಿದ್ದೇವು. ಸದ್ಯ ಕೋರ್ಟ್ ತಾತ್ಕಾಲಿಕ ತಡೆ ಹಿಡಿದಿದೆ ಎಂದು ಹೇಳಿದರು.ಈ ವೇಳೆ ಇಬ್ರಾಹಿಂ ಮುಲ್ಲಾ, ಮೌಲಾಸಾಬ್ ಗಚ್ಚಿ, ಅಶೋಕ ಕುಸಬಿ, ಫರವಿನಬಾನು ಹವಾಲ್ದಾರ, ಸಾಕ್ರುಬಾಯಿ ಗೋಸಾವಿ, ವೆಂಕಟೇಶ ಬಿಂಕದಕಟ್ಟಿ, ರವಿ ಗೋಸಾವಿ, ಯುವರಾಜ ಗೋಸಾವಿ, ಭಾರತಿ ಗೋಸಾವಿ, ಖಾಜಾಸಾಬ್ ಇಸ್ಮಾಯಿಲನವರ, ಸಲೀಂ ಹರಿಹರ, ಬಸವರಾಜ ಕಳಸದ, ಮೆಹಬೂಬಸಾಬ್ ಬಳ್ಳಾರಿ, ಮುಕ್ಕುಂಸಾಬ್, ಅಶೋಕ ಕುಡತಿನ್ನಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))