ಹೊಸಪೇಟೆ: ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆ ರೈತರು ಮನೆ, ಜಮೀನು ನೀಡಿದ ರೈತರಿಗೆ ಸರ್ಕಾರ ನೀಡಿರುವ ಪರ್ಯಾಯ ಜಮೀನಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ರೈತರು ಜೂ.25ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.ಇಲ್ಲಿನ ಪತ್ರಿಕಾ ಭವನದ ಸೋಮವಾರ ನಡೆದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಟೆ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಜೂ.25ರಂದು ಮುಖ್ಯಮಂತ್ರಿ ಬರುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆ ರೈತರು ಊರುಬಿಟ್ಟು ಬರುವಾಗ ತಮ್ಮ ಮನೆ, ಹೊಲ ಆಸ್ತಿ ಸೇರಿದಂತೆ ಎಲ್ಲವನ್ನೂ ಬಿಟ್ಟು ಬಂದು, ಮರಿಯಮ್ಮನಹಳ್ಳಿ, ಡಣಾಯಕನಕೆರೆ, ದೇವಲಾಪುರ ಸೇರಿದಂತೆ ಇತರೆ ಊರುಗಳಲ್ಲಿ ನೂರಾರು ರೈತರು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ನೀಡಿದ ಜಮೀನಿನಲ್ಲಿ ವರ್ಷಗಳಿಂದ ಕಳೆದ 70 ವರ್ಷಗಳಿಂದ ಉಳುಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ನೀಡಿರುವ ಜಮೀನುಗಳಿಗೆ ಸರ್ಕಾರ ಇದುವರೆಗೂ ರೈತರಿಗೆ ಪಟ್ಟಾ ನೀಡದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ ಯಾವ ಸೌಲಭ್ಯಗಳು ದೊರೆಯುತ್ತಿಲ್ಲ ಎಂದರು.

ಸರ್ಕಾರದ ಈ ಕ್ರಮವನ್ನು ಗಮನ ಸೆಳೆಯಲು ಟಿ.ಬಿ.ಡ್ಯಾಂನಲ್ಲಿ ಮುಖ್ಯಮಂತ್ರಿ ಬರುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದರು.

ರೈತ ಸಂಘದ ಮುಖಂಡರಾದ ಟಿ. ಹನುಮಂತಪ್ಪ, ಆ‌ರ್. ಹುಚ್ಚುಸಾಹೇಬ್, ಕೆ. ಯಮುನೂರ, ಹುಸೇನ್ ಸಾಹೇಬ್, ನಾಗರಾಜ, ಇಬ್ರಾಹಿಂ, ಅಲ್ಲಾಭಕ್ಷಿ ಇದ್ದರು.

ಹೊಸಪೇಟೆಯ ಪತ್ರಿಕಾ ಭವನದ ನಡೆದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಟೆ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.