ಅಂಬೇಡ್ಕರ್‌ಗೆ ಚಿತ್ರಕ್ಕೆ ಅವಮಾನ: ಪ್ರತಿಭಟನೆ

| Published : Oct 11 2025, 01:00 AM IST

ಸಾರಾಂಶ

ಚಡಚಣ: ಸಾಮಾಜಿಕ ಜಾಲತಾಣದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶೂ ಚಿತ್ರ ತೋರಿಸಿ ಪ್ರತಿಕ್ರಿಯಿಸಿದ್ದ ಅವಮಾನಿಸಿದ ವ್ಯಕ್ತಿಯ ಮನೆ ಮುಂದೆ ಟೈರ್‌ಗೆ ಬೆಂಕಿ ಹಚ್ಚಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಗುರುವಾರ ನಡೆಯಿತು.

ಗುರುವಾರ ವಾಟ್ಸಪ್ ಗ್ರೂಪ್‌ವೊಂದರಲ್ಲಿ ಅಂಬೇಡ್ಕರ್‌ ಭಾವಚಿತ್ರ ಬಿತ್ತರಿಸಲಾಗಿತ್ತು. ಅದಕ್ಕೆ ಜಿಗಜೇವಣಿ ಗ್ರಾಮದ ಸಿದ್ದಪ್ಪ ಕುಂಬಾರ ಎಂಬ ಯುವಕನೋರ್ವ ಶೂ ಚಿತ್ರ ತೋರಿಸಿ ಪ್ರತಿಕ್ರಿಯೆ ನೀಡಿದ್ದ. ಈ ಹಿನ್ನಲೆಯಲ್ಲಿ ಜಿಗಜೇವಣಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ದಲಿತ ಸಂಘಟನೆಗಳ ಕಾರ್ಯಕರ್ತರಿ ಅವಮಾನಿಸಿದ್ದ ವ್ಯಕ್ತಿಯ ಮನೆ ಮುಂದೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಜಿಗಜೇವಣಿ ಗ್ರಾಮದ ಸಿದ್ದಪ್ಪ ಕುಂಬಾರ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.