ಹಿಂದೂ ದೇಗುಲಗಳನ್ನು ರಕ್ಷಿಸಿ, ಶುಚಿತ್ವ ಕಾಪಾಡುವಂತೆ ಪ್ರತಿಭಟನೆ

| Published : May 02 2024, 12:17 AM IST

ಹಿಂದೂ ದೇಗುಲಗಳನ್ನು ರಕ್ಷಿಸಿ, ಶುಚಿತ್ವ ಕಾಪಾಡುವಂತೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ-ಗಂಜಾಂನ ಕಾವೇರಿ ನದಿ ಹತ್ತಿರವಿರುವ ಗದ್ದೆ ರಂಗನಾಥಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ಹಾಗೂ ಮತಾಂಧರು, ಮೋಜು ಮಸ್ತಿ ಮಾಡಿ ಬಿರಿಯಾನಿ, ಮಾಂಸದ ಅಡುಗೆ, ಮದ್ಯ ಕುಡಿತ, ಜೂಜಾಟಗಳನ್ನು ನಡೆಸುತ್ತಾ ಅನೈತಿಕ ಸ್ಥಳವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪುರಾತನ ಹಿಂದೂ ದೇವಾಲಯಗಳನ್ನು ರಕ್ಷಣೆ ಮಾಡುವ ಜೊತೆಗೆ ಶುಚಿತ್ವ ಕಾಪಾಡುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ ವೇದಿಕೆ ಕಾರ್ಯಕರ್ತರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಪುರಾತನ ದೇವಸ್ಥಾನವಾದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗದ ಅವರಣದಲ್ಲಿರುವ ಕಲ್ಯಾಣಿ ಶುಚಿತ್ವ ಕಾಪಾಡಿ ಭಕ್ತಾದಿಗಳಿಗೆ ಅನೂಕೂಲ ಮಾಡಬೇಕು ಎಂದು ಆಗ್ರಹಿಸಿದರು.

ಗಂಜಾಂನ ಗಿಡಂಗಿಹೊಳೆ ಹತ್ತಿರದ ಹಳೆಯ ಕಾಲದ ಶಿವನ ದೇವಸ್ಥಾನದಲ್ಲಿದ್ದ ಗಣಪತಿ, ಬಸವನ ವಿಗ್ರಹವನ್ನು ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಹೊಡೆದು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀರಂಗಪಟ್ಟಣ-ಗಂಜಾಂನ ಕಾವೇರಿ ನದಿ ಹತ್ತಿರವಿರುವ ಗದ್ದೆ ರಂಗನಾಥಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ಹಾಗೂ ಮತಾಂಧರು, ಮೋಜು ಮಸ್ತಿ ಮಾಡಿ ಬಿರಿಯಾನಿ, ಮಾಂಸದ ಅಡುಗೆ, ಮದ್ಯ ಕುಡಿತ, ಜೂಜಾಟಗಳನ್ನು ನಡೆಸುತ್ತಾ ಅನೈತಿಕ ಸ್ಥಳವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇವಸ್ಥಾನದ ಅವರಣದಲ್ಲಿ ಅಪವಿತ್ರ ಉಂಟಾಗುತ್ತಿದೆ. ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಚಾಲಕ ಚಂದನ್, ನಗರ ಸಂಚಾಲಕ ಮದನ್ ಗೌಡ, ಶಿವನಾಯಕ್, ವಕೀಲರಾದ ಬಾಲರಾಜು, ಚಂದ್ರೇಗೌಡ, ಬಿಜೆಪಿ ಹೇಮಂತ್ ಕುಮಾರ್, ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಾಲ್ ಶಂಕರ್, ಕಾಳೇನಹಲ್ಲಿ ಮಹೇಶ್, ಗಂಜಾಂ ಅಭಿಷೇಕ್, ಶ್ರೀನಿವಾಸ್, ಚೇತನ್, ಗಣೇಶ್ ಶ್ರೀನಿವಾಸ್, ಗುಂಡ ಸೇರಿದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.