ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವಿರೋಧಿ

| Published : May 24 2025, 12:12 AM IST

ಸಾರಾಂಶ

ಗೃಹ ಸಚಿವ ಜಿ.ಪರಮೇಶ್ವರ್ ರವರಿಗೆ ಸಂಬಂಧಿಸಿದ ವಿದ್ಯಾ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದರಲ್ಲಿ ದಲಿತ ಎಂಬ ಟೈಟಲ್ ಏಕೆ ಕಾಂಗ್ರೆಸ್ ನಾಯಕರು ಮುಂದಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾ ಸೈಟ್‌ಗಳನ್ನು ಪಡೆದು ವಾಪಸ್‌ ಮಾಡಿರುವುದರಿಂದ ಅವರು ತಪ್ಪು ಮಾಡಿದ್ದಾರೆಂದೇ ಅರ್ಥ

ಕನ್ನಡಪ್ರಭ ವಾರ್ತೆ ಕೆಜಿಎಫ್ನಮ್ಮ ದೇಶದ ವೀರ ಯೋಧರ ಸಾಧನೆಯನ್ನು ಇಡೀ ಭಾರತ ದೇಶದ ೧೪೦ ಕೋಟಿ ಜನರು ಪ್ರಶಂಸಿಸುತ್ತಿದ್ದರೆ ಕಾಂಗ್ರೆಸ್‌ನ ಕೆಲವು ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ಸರಿಯಲ್ಲ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.ಕೆಜಿಎಫ್ ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಶ್ಮೀರದ ಪಹಲ್ಗಾಂನಲ್ಲಿ ೨೬ ಮಂದಿ ಮಹಿಳೆಯರ ಕುಂಕುಮ ಅಳಿಸಿದ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟುವ ಮೂಲಕ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದ ಸೈನಿಕರ ಶಕ್ತಿ ಎಂತಹುದು ಎಂಬುದನ್ನು ವಿಶ್ವಕ್ಕೆ ತೋರಿಸಿದ್ದಾರೆ ಎಂದು ನುಡಿದರು. ಸಿಎಂ ಅಹಿಂದ ವಿರೋಧಿ

ಕಾಂಗ್ರೆಸ್ ಅಂಬೇಡ್ಕರ್‌ರವರನ್ನು ಚುನಾವಣೆಯಲ್ಲಿ ಸೋಲಿಸಿ ಅವಮಾನ ಮಾಡಿದ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಅವಮಾನ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲಾಯಕ್ ಸಿದ್ದರಾಮಯ್ಯ ಆಗಿದ್ದಾರೆ. ಅವರನ್ನು ಅಹಿಂದ ನಾಯಕರು ಎಂದು ತಿಳಿದುಕೊಂಡಿದ್ದೆವು ಆದರೆ ಅವರು ಅಹಿಂದ ವಿರೋಧಿಗಳಾಗಿದ್ದಾರೆ. ದಲಿತ ಎಂಬ ಟೈಟಲ್ ಏಕೆ

ಗೃಹ ಸಚಿವ ಜಿ.ಪರಮೇಶ್ವರ್ ರವರಿಗೆ ಸಂಬಂಧಿಸಿದ ವಿದ್ಯಾ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದರಲ್ಲಿ ದಲಿತ ಎಂಬ ಟೈಟಲ್ ಏಕೆ ಕಾಂಗ್ರೆಸ್ ನಾಯಕರು ಮುಂದಿಡಬೇಕು ಎಂದು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾ ಸೈಟ್‌ಗಳನ್ನು ಪಡೆದು ವಾಪಸ್‌ ಮಾಡಿರುವುದರಿಂದ ಅವರು ತಪ್ಪು ಮಾಡಿದ್ದಾರೆಂದೇ ಅರ್ಥ. ಹಗರಣದ ನೈತಿಕತೆ ಹೊತ್ತು ಮೊದಲು ರಾಜೀನಾಮೆ ನೀಡಬೇಕಿತ್ತು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಸೊಸೈಟಿಗಳನ್ನು ಸ್ಥಾಪನೆ ಮಾಡಿ ಸುಮಾರು ೪೦೦ ಕೋಟಿ ಹಣವನ್ನು ಗುಳುಂ ಮಾಡಿದ್ದಾರೆ. ಅವ್ಯವಹಾರ ನಡೆಸಿರುವವರ ವಿರುದ್ದ ತನಿಖೆ ನಡೆಯುತ್ತಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರಲಿದೆ

ಬಿಜಿಎಂಎಲ್ ಕಾರ್ಮಿಕರಿಗೆ ಈ ಹಿಂದೆ ತಾವು ಎಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ದಾಖಲೆ ಸಹ ಇರಲಿಲ್ಲ. ಆದರೆ ತಾವು ಸಂಸದರಾದ ಬಳಿಕ ಗಣಿ ಸಚಿವ ಪ್ರಹ್ಲಾದ್ ಜೋಷಿಯವರನ್ನು ಗಣಿ ಕಾರ್ಮಿಕರು ವಾಸ ಮಾಡುವ ಸ್ಥಳಕ್ಕೇ ಕರೆಯಿಸಿ ಅವರ ಅಮೃತ ಹಸ್ತದಿಂದ ಕಾರ್ಮಿಕರಿಗೆ ವಾಸ ಸ್ಥಳದ ದೃಢೀಕರಣ ಪ್ರಮಾಣ ಪತ್ರವನ್ನು ಕೊಡುವಂತಹ ಕೆಲಸವನ್ನು ಮಾಡಿದ್ದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ನಮ್ಮ ಯೋಧರಿಗೆ ನೈತಿಕವಾಗಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿರುವುದು ಅವಶ್ಯಕ. ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಂದೇ. ಈ ದೇಶದಲ್ಲಿ ನಾವು ಬದುಕುತ್ತಿದ್ದೇವೆ ಆದ್ದರಿಂದ ಎಲ್ಲರು ಇಂತಹ ಘಟನೆಗಳು ನಡೆದಾಗ ಒಂದಾಗಬೇಕು ಎಂದರು. ಒಂದು ಕಿಮೀ ಉದ್ದದ ಧ್ವಜ

ಕೆಜಿಎಫ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ೧ ಕಿಲೋಮೀಟರ್ ಉದ್ದದ ಧ್ವಜ ಮೆರವಣಿಗೆ ಮಾಡಲಾಯಿತು. ನಗರದ ವಿವಿದ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ನಗರ ಬಿಜೆಪಿ ಅಧ್ಯಕ್ಷ ಸುರೇಶ್‌ಬಾಬು, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ನಗರ ಘಟಕದ ಮಾಜಿ ಅಧ್ಯಕ್ಷ ಕಮಲನಾಥನ್, ಗ್ರಾಮಾಂತರ ಅಧ್ಯಕ್ಷ ಬುಜ್ಜಿ ನಾಯ್ಡು, ಕೋಲಾರ ಜಿಲ್ಲಾ ಬಿಜೆಪಿ ವಕ್ತಾರ ಸುರೇಶ್ ನಾರಾಯಣ ಕುಟ್ಟಿ, ಬಾಲಕೃಷ್ಣ, ವೆಂಕಟರೆಡ್ಡಿ, ಕಣ್ಣೂರು ವಿಜಿ, ಮತ್ತಿತರರು ಇದ್ದರು. ,,,,,,,,,,,,,