ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವುದನ್ನು ಖಂಡಿಸಿ ತಾಳಿಕೋಟೆ ನಗರದಲ್ಲಿ ಏ.೨ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕಾಶಿನಾಥ ಮುರಾಳ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವುದನ್ನು ಖಂಡಿಸಿ ತಾಳಿಕೋಟೆ ನಗರದಲ್ಲಿ ಏ.೨ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕಾಶಿನಾಥ ಮುರಾಳ ತಿಳಿಸಿದರು.ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ನಡೆದ ಹಿಂದುಪರ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದು ಫೈರ್ ಬ್ರ್ಯಾಂಡ್ ಯತ್ನಾಳ ಅವರನ್ನು ಬಿಜೆಪಿ ಉಚ್ಚಾಟಿಸಿರುವದು ಸರಿಯಲ್ಲ. ಇದರಿಂದ ಬಿಜೆಪಿ ಪಕ್ಷಕ್ಕೆ ತುಂಬಾ ನಷ್ಟ ಉಂಟಾಗಲಿದೆ. ಯತ್ನಾಳರನ್ನು ಉಚ್ಚಾಟಿಸಿದ ಕೇವಲ ೫ ದಿನಗಳಲ್ಲಿ ೩೦ ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಪ್ರಾಥಮಿಕ ಸದಸ್ಯತ್ವದಿಂದ ಹೊರಬಂದಿದ್ದಾರೆ. ಮುಂದೆ ಹೀಗೆ ಬಿಟ್ಟರೆ ಬಿಜೆಪಿಗೆ ದೊಡ್ಡ ನಷ್ಠ ಉಂಟಾಗಲಿದೆ ಎಂದ ಎಂದು ವರಿಷ್ಠರು ತಿಳಿದುಕೊಳ್ಳಬೇಕು ಎಂದರು.
ಏ.೨ರಂದು ತಾಳಿಕೋಟೆ ನಗರದಲ್ಲಿ ಹಿಂದುಪರ ಸಂಘಟನೆಯ ಕಾರ್ಯಕರ್ತರು, ವಿವಿಧ ಎಲ್ಲ ಸಮಾಜ ಬಾಂಧವರು ಅಲ್ಲದೇ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರಗಳ ಹಿಂದು ಸಮಾಜ ಬಾಂಧವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಗೆ ರಾಜವಾಡೆಯಿಂದ ಪ್ರತಿಭಟನೆ ಪ್ರಾರಂಭಗೊಂಡು ಕತ್ರಿ ಬಜಾರ ಮಾರ್ಗವಾಗಿ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಲಾಗುವುದು. ಯತ್ನಾಳ ಅಭಿಮಾನಿಗಳು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಸಮಾಜ ಬಾಂಧವರು ಪಾಲ್ಗೊಂಡು ಪ್ರತಿಭಟನಾ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಪ್ರಭು ಬಿಳೇಭಾವಿ, ಮುದಕಣ್ಣ ಬಡಿಗೇರ, ಡಿ.ವ್ಹಿ.ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನಾಗಪ್ಪ ಚಿನಗುಡಿ, ಈಶ್ವರ ಹೂಗಾರ, ಮಂಜುನಾಥ ಶೆಟ್ಟಿ, ರಾಘವೇಂದ್ರ ಮಾನೆ, ರತನಸಿಂಗ್ ಕೊಕಟನೂರ, ವಿರೇಶ ಬಾಗೇವಾಡಿ, ರಾಮನಗೌಡ ಬಾಗೇವಾಡಿ, ಸಂತೋಷ ಹಜೇರಿ, ವಿಠ್ಠಲ ಮೋಹಿತೆ, ರವಿ ಕಟ್ಟಿಮನಿ, ರಾಮಚಂದ್ರ ಸುಬೇದಾರ, ಮಯೂರ ಪಾಟೀಲ, ಬಸು ಮಾಲಿಪಾಟೀಲ, ನಾಗರಾಜ ಬಳಿಗಾರ, ಪ್ರಕಾಶ ಸಾಸಾಬಾಳ, ಮುತ್ತು ಕಶೆಟ್ಟಿ, ಲಂಕೇಶ ಪಾಟೀಲ, ಬಸನಗೌಡ ಪಾಟೀಲ, ಶಂಕ್ರಗೌಡ ಪಾಟೀಲ, ಅಣ್ಣಾಜಿ ಜಗತಾಪ, ಪ್ರಕಾಶ ಹಜೇರಿ, ಅಶೋಕ ಜಾಲವಾದಿ, ಚಂದ್ರು ಗೆಜ್ಜಿ, ನಿಂಗು ಕುಂಟೋಜಿ, ಸಂಗು ಹಾರಿವಾಳ ಹಲವರು ಇದ್ದರು.