ಚಾಮರಾಜ ಕ್ಷೇತ್ರದಿಂದ ಪ್ರತಿಭಟನೆ

| Published : Aug 23 2025, 02:00 AM IST

ಸಾರಾಂಶ

ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಶಪಡಿಸಿಕೊಂಡಂತೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಧರ್ಮಸ್ಥಳ ಉಳಿವಿಗಾಗಿ, ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಚಾಮರಾಜ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಇದು ರಾಜ್ಯ ಸರ್ಕಾರ ಮಾಡುತ್ತಿರುವ ದೊಡ್ಡ ಷಡ್ಯಂತರ. ಇದೇ ರೀತಿ ಮುಂದುವರೆದಲ್ಲೇ ಸರ್ಕಾರ ಬಿದ್ದುಹೋಗುವುದರಲ್ಲಿ ಎರಡು ಮಾತಿಲ್ಲ. ಕೂಡಲೇ ಎಸ್ಐಟಿ ತನಿಖೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಶಪಡಿಸಿಕೊಂಡಂತೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇಂತಹ ಹಿಂದುಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳವನ್ನು ವಶಪಡಿಸಿಕೊಂಡಲ್ಲಿ ಒಳ್ಳೆಯದಾಗುವುದಿಲ್ಲ. ಇದೇ ರೀತಿ ಮುಂದುವರೆದಲ್ಲೇ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಸುಬ್ಬಯ್ಯ, ರಂಗಸ್ವಾಮಿ, ಸತೀಶ್, ರವೀಂದ್ರ, ವೇದಾವತಿ, ಪ್ರಮೀಳಾ ಭರತ್, ಚಿಕ್ಕ ವೆಂಕಟಪ್ಪ, ಗುರುವಿನಾಯಕ್, ಮುಖಂಡರಾದ ವಾಣಿಶ್ ಕುಮಾರ್, ಶ್ರೀರಾಮ್, ಉಮೇಶ್, ಸೋಮಶೇಖರ್ ರಾಜು, ಪರಮೇಶ್ ಗೌಡ, ಟೆನ್ನಿಸ್ ಗೋಪಿ, ನಂಜಪ್ಪ, ರಾಮೇಗೌಡ, ದಾಸಪ್ರಕಾಶ್, ಜಯಣ್ಣ, ಶ್ರೀನಿವಾಸ್, ಅಶೋಕ್, ಹರೀಶ್, ಸ್ವಪ್ನಾ ಶೇಖರ್, ನಾಗರತ್ನಾ, ಪ್ರೇಮಾ, ಪುಷ್ಪಾ ಮೊದಲಾದವರು ಇದ್ದರು.