ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಶರಣ ಸಾಹಿತ್ಯ ಗೋಷ್ಠಿಗಳು ಜರಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಗುರು ಮರುಳಾರಾಧ್ಯ ಹಿರೇಮಠ ಸಂಸ್ಥಾನದ ಸಿದ್ಧರಾಮ ಶಿವಾಚಾರ್ಯರು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಕಡಣಿ ಸಾಹಿತ್ಯ ಸಮ್ಮೇಳನದ ದತ್ತಿ, ಎ.ಕೆ.ನಂದಿ ಗೆಳೆಯರ ಬಳಗ ದತ್ತಿ ಆಲಮೇಲ, ಕಡಣಿ ಗುರು ವಂದನಾ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಮತಾ ಮುಳಸಾವಳಗಿ (ಗುಮಶೆಟ್ಟಿ) ಅವರ ಮಮತೆಯ ಮರುಳಾರಾಧ್ಯ ಶತವಚನಗಳು ಕೃತಿಗೆ ಕಡಣಿ ಸಾಹಿತ್ಯ ಸಮ್ಮೇಳನ ದತ್ತಿ ಪ್ರಶಸ್ತಿ ಪಡೆದುಕೊಂಡಿರುವುದು ಸಂತೋಷದ ವಿಚಾರ. ಕಲಬುರಗಿ ಶರಣ ಬಸವೇಶ್ವರಿಗೆ ಗುರು ದಿಕ್ಷೆ ನೀಡಿದ ಕಲಕೇರಿ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದರು. ವಿಶ್ರಾಂತ ಪ್ರಾಚಾರ್ಯ ಡಾ.ವಿ.ಎಂ.ಬಾಗಾಯತ ಸಭೆ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಬೇಕು. ಸಮಾಜ ಸನ್ಮಾಗ೯ಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡೋಣ. ಶಿಕ್ಷಣ ನಮ್ಮೆಲ್ಲರ ಬದುಕಿಗೆ ದಿಕ್ಸೂಚಿಯಾಗಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಡಿ.ಎಂ.ಘೋರ್ಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಲೇಖರು ವಚನ ಸಾಹಿತ್ಯದ ಕಡೆಗೆ ಒಲವು ತೋರಿಸಬೇಕು. ದತ್ತಿ ಪ್ರಶಸ್ತಿ ಪಡೆದ ಮಮತಾ ಮುಳಸಾವಳಗಿ ಹಾಗೂ ಅಶೋಕ ಬಡಿಗೇರ ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.


ಲೇಖಕಿ ಮಮತಾ ಮಳಸಾವಳಗಿ ಅವರು ಮಮತೆಯ ಮರುಳಾರಾಧ್ಯ ಶತವಚನಗಳು ಕೃತಿ ಪರಿಚಯ ಮಾಡಿ, ಗ್ರಂಥಗಳು ಇತಿಹಾಸದ ಪುಟಕ್ಕೆ ಸೇರುತ್ತವೆ. ಸಹನೆ. ಸಹಾನುಭೂತಿ ಮತ್ತು ಸಂಯಮದಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಲು ವಚನ ಸಾಹಿತ್ಯ ಅತ್ಯವಶ್ಯಕ. ಈ ಕೃತಿಯು ನೂರು ವಚನಗಳಲ್ಲಿ ನೂರಾರು ವಿಚಾರ ಧಾರೆಗಳಾದ ಅಧ್ಯಾತ್ಮ, ವಿಜ್ಞಾನ, ತಂತ್ರಜ್ಞಾನ, ಗುರು ಪರಂಪರೆ, ಸಾಮಾಜಿಕ ಸಮಸ್ಯೆಗಳು ಕೌಟುಂಬಿಕ ಚಿಂತನೆ ಬಗ್ಗೆ ಕುರಿತ ಈ ಗ್ರಂಥ ಅತ್ಯಂತ ಉಪಯುಕ್ತವಾಗಿ ಎಂದರು.ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಅವರು ಶೈಕ್ಷಣಿಕ ಸಾಮರ್ಥ್ಯ ಹಾಗೂ ಶಿಕ್ಷಣದ ಕೌಶಲ್ಯ ಕುರಿತು ಉಪನ್ಯಾಸ ನೀಡಿ, ಖಾಸಗಿ ಶಾಲೆಗಳು ಅಹ೯ತೆಯನ್ನೂ ಪರಿಗಣಿಸಿ ಶಿಕ್ಷಕರನ್ನು ನೇಮಕ ಮಾಡುತ್ತಿರುವುದರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಕ ವಗ೯ದ ಕೋಣೆಯಲ್ಲಿ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆ ಗುರುತಿಸಬೇಕು ಎಂದು ತಿಳಿಸಿದರು.ಡಾ.ರಮೇಶ ಕತ್ತಿ, ಬಿ.ಕೆ.ಗೋಟ್ಯಾಳ, ಅಶೋಕ ಕೊಳಾರಿ ಮಾತನಾಡಿದರು. ಕಡಣಿ ಸಾಹಿತ್ಯ ಸಮ್ಮೇಳನ ದತ್ತಿ ಪ್ರಶಸ್ತಿ ಪಡೆದ ಅತ್ಯುತ್ತಮ ಲೇಖಕಿ ಮಮತಾ ಮುಳಸಾವಳಗಿ ಹಾಗೂ ಕಡಣಿ ಗುರುವಂದನಾ ದತ್ತಿ ಪ್ರಶಸ್ತಿ ಪಡೆದ ಅತ್ಯುತ್ತಮ ಶಿಕ್ಷಕ ಅಶೋಕ ಬಡಿಗೇರ ಅವರನ್ನು ಕಲಕೇರಿ ಸಿದ್ದರಾಮ ಶಿವಾಚಾರ್ಯರು ಪ್ರಶಸ್ತಿ ನೀಡಿ ಗೌರವಿಸಿದರು. ದತ್ತಿ ಸಂಚಾಲಕ ಅಜು೯ನ ಶಿರೂರ, ಪದಾಧಿಕಾರಿಗಳಾದ ಕಮಲಾ ಮುರಾಳ, ಜಿ.ಎಸ್.ಬಳ್ಳೂರ, ರಶ್ಮಿ ಬದ್ನೂರ, ಮಹಾದೇವ ಮೋಪಗಾರ, ಶ್ರೀಕಾಂತ ನಾಡಗೌಡ, ಲತಾ ಗುಂಡಿ, ಶಾಂತಾ ವಿಭೂತಿ, ಎಸ್.ಎಲ್.ಇಂಗಳೇಶ್ವರ, ಗುರುಬಸಯ್ಯ ಹಿರೇಮಠ, ಪಕ್ರುದ್ದೀನ್‌ ಹಿರೇಕೊಪ್ಪ, ಗಂಗಮ್ಮ ರಡ್ಡಿ ಉಪಸ್ಥಿತರಿದ್ದರು.ಸುನಂದಾ ಕೋರಿ ಪ್ರಾಥಿ೯ಸಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ಮಾಡಿದರು. ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕ ಮಾತನಾಡಿದರು. ಪರವೀನ ಶೇಖ ಸ್ವಾಗತಿಸಿ, ಗೌರವಿಸಿದರು. ಡಾ.ಶೈಲಾ ಬಳಗಾನೂರ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.