ಸಾರಾಂಶ
ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಕಾರಡಾರ್ ರಸ್ತೆಯಲ್ಲಿ ಕೋಲಾರ-ಮಾಲೂರು ವ್ಯಾಪ್ತಿಯ ಪ್ರದೇಶದ ವಾಹನಗಳು ಸಂಪರ್ಕಿಸಲು ಲಿಂಕ್ ರಸ್ತೆಯನ್ನು ಕೋಲಾರ ರಸ್ತೆಯಲ್ಲಿ 8 ಕಿ.ಮೀ.ದೂರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ಮಾಲೂರು-ಹೊಸೂರು ಪ್ರದೇಶದವರಿಗೆ ಯಾವುದೇ ಉಪಯೋಗವಾಗುತ್ತಿಲ್ಲ
ಕನ್ನಡಪ್ರಭ ವಾರ್ತೆ ಮಾಲೂರು
ಮಾಲೂರು ತಾಲೂಕಿನಲ್ಲಿ ಹಾದುಹೋಗುವ ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಗೆ ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿ ಹೂರ-ಒಳ ಹೋಗುವ ಸಂಪರ್ಕ ರಸ್ತೆಯ ವ್ಯವಸ್ಥೆ ಮಾಡಿಕೊಡಬೇಕೆಂದು ಜಯ ಕರ್ನಾಟಕ ಹಾಗೂ ಜೆಡಿಎಸ್ ಮುಖಂಡರು ಸಂಸದ ಮಲ್ಲೇಶ್ ಬಾಬು ಅವರಿಗಂ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕದ ಅಧ್ಯಕ್ಷ ದಿನೇಶ್ ಗೌಡ, ಹಾಲಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಕಾರಡಾರ್ ರಸ್ತೆಯಲ್ಲಿ ಕೋಲಾರ-ಮಾಲೂರು ವ್ಯಾಪ್ತಿಯ ಪ್ರದೇಶದ ವಾಹನಗಳು ಸಂಪರ್ಕಿಸಲು ಲಿಂಕ್ ರಸ್ತೆಯನ್ನು ಕೋಲಾರ ರಸ್ತೆಯಲ್ಲಿ 8 ಕಿ.ಮೀ.ದೂರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ಮಾಲೂರು-ಹೊಸೂರು ಪ್ರದೇಶದವರಿಗೆ ಯಾವುದೇ ಉಪಯೋಗವಾಗುತ್ತಿಲ್ಲ ಎಂದರು.ಏರ್‌ಪೋರ್ಟ್‌ಗೆ 8 ಕಿ.ಮೀ
ಬೆಂಗಳೂರು ಅಥವಾ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗಲು 8 ಕಿ.ಮೀ.ಹೆಚ್ಚಾಗಿ ಕ್ರಮಿಸುವ ಜತೆಯಲ್ಲಿ ಸಮಯ ಸಹ ವ್ಯರ್ಥವಾಗುತ್ತಿದೆ. .ಇದರಿಂದ ಇಲ್ಲಿನ ಬೃಹತ್ ಕೈಗಾರಿಕಾ ಪ್ರದೇಶದಿಂದ ಬೆಂಗಳೂರು-ಡಾಬಸ್ ಪೇಟೆಗೆ ಹೋಗುವ ಲಾರಿಗಳು ಸಂಚಾರ ಪಟ್ಟಣದ ಮೂಲಕ ಸಂಚಾರಿಸಬೇಕಾಗಿ ಬರುತ್ತಿದ್ದು, ಪಟ್ಟಣದಲ್ಲಿ ವಾಹನ ಸಂಚಾರದ ಒತ್ತಡ ಇನ್ನಷ್ಟು ಹೆಚ್ಚಾಗಲಿದೆ ಎಂದರು.ಸಾರಿಗೆ ಸಚಿವರ ಮನವೊಲಿಸಿ
ಈ ನಿಟ್ಟಿನಲ್ಲಿ ತಾಲೂಕಿನ ಜನತೆಗೆ ಸಹಕಾರ ನೀಡಬೇಕಾದರೆ ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿ ಹಾದು ಹೋಗುತ್ತಿರುವ ಚೆನ್ನೈ ಕಾರಿಡಾರ್ ರಸ್ತೆಗೆ ಸಂಪರ್ಕಿಸುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದ ಅವರು, ಕ್ಷೇತ್ರದ ಜನರ ಪರವಾಗಿ ತಾವು ಕೇಂದ್ರ ಸಾರಿಗೆ ಮಂತ್ರಿ ಗಡ್ಕರಿಯನ್ನು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿಯ ಮಾಹಿತಿ ನೀಡಿ ಮನವೂಲಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಜಿ.ಇ.ರಾಮೇಗೌಡ,ಜೆಡಿಎಸ್ ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ,ಗ್ಯಾಸ್ ರಾಮೇಗೌಡ,ಕೆ.ರಾಘವೇಂದ್ರ ,ಪ್ರಶಾಂತ್ ,ಸುರೇಶ್ ,ಜಿ.ಆಶೋಕ್ ಇನ್ನಿತರರು ಇದ್ದರು.