ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಲ್ಲಿ ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಹೊರತುಪಡಿಸಿ, ಶಿಥಿಲ ಅಥವಾ 25 ವರ್ಷದ ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿಯನ್ನು ಅಧಿಕಾರಿಗಳು ಮಾಡಿಕೊಡಬೇಕು. ಅವುಗಳ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಸೂಚಿಸಿದ್ದಾರೆ.
- ಬೆನಕನಹಳ್ಳಿಯಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ಉದ್ಘಾಟನೆ
- - -ಹೊನ್ನಾಳಿ: ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಲ್ಲಿ ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಹೊರತುಪಡಿಸಿ, ಶಿಥಿಲ ಅಥವಾ 25 ವರ್ಷದ ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿಯನ್ನು ಅಧಿಕಾರಿಗಳು ಮಾಡಿಕೊಡಬೇಕು. ಅವುಗಳ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಸೂಚಿಸಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆರ್‌ಐಡಿಎಫ್ ಟ್ರಾಂಚ್-20 ಯೋಜನೆಯಡಿ ₹49 ಲಕ್ಷ ವೆಚ್ಚದ ನೂತನ ಪಶು ಚಿಕಿತ್ಸಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಾಧಿಕಾರಿಗಳ ಕೊರತೆ ಆಗದು. ಆದರೆ, ಪಶು ವೈಧ್ಯಕೀಯ ಸಹಾಯಕರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಈ ಬಗ್ಗೆಯೂ ನಾನು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.ಸಾರ್ವಜನಿಕ ಆಸ್ಪತ್ರೆಯಲ್ಲಿ 108 ಆಂಬ್ಯುಲೆನ್ಸ್ ವಾಹನ ಸೇವೆ ಇದೆ. ಅದೇ ರೀತಿಯಲ್ಲಿ ರಾತ್ರಿ ಅಥವಾ ಬೇರೆ ರೀತಿಯಲ್ಲಿ ಕಾಯಿಲಿಗೆ ಬೀಳುವ ಪ್ರಾಣಿಗಳನ್ನು ಚಿಕಿತ್ಸೆಗೆ ಕರೆತರಲು ಹೊನ್ನಾಳಿ ತಾಲೂಕಿಗೂ ಒಂದು ಆಂಬ್ಯುಲೆನ್ಸ್ ಇದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಬಯಲುಸೀಮೆ ಪ್ರದೇಶ ಅಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ತಾಲೂಕಿನಲ್ಲಿ 2021 ಜಾನುವಾರುಗಳು ಹಾಗೂ 2200 ಕುರಿ-ಮೇಕೆಗಳಿವೆ. ಸಧ್ಯ ಯಾವುದೇ ಕಾಯಿಲೆಗಳು ಇಲ್ಲ. ನಮ್ಮ ಸರ್ಕಾರ ರೈತರಿಗೆ ಹೈನುಗಾರಿಕೆಗೆ ಸಾಕಷ್ಟು ಸಾಲ ನೀಡುತ್ತಿದೆ. ಅಲ್ಲದೇ ರೈತರಿಗೆ ಹಸು, ಎಮ್ಮೆ, ಕುರಿಗಳನ್ನು ಕೊಳ್ಳಲು ರಿಯಾಯತಿ ಸಹ ನೀಡುತ್ತಿದೆ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಮಹೇಶ್ ಮಾತನಾಡಿ, ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ನೀಡುವ ಎಲ್ಲ ಚುಚ್ಚುಮದ್ದುಗಳನ್ನು ನೀಡಲಾಗಿದೆ. ಸದ್ಯ ಯಾವುದೇ ಚುಚ್ಚುಮದ್ದು ಬಾಕಿ ಇಲ್ಲ. ಅವಳಿ ತಾಲೂಕಿನಲ್ಲಿ ಸಧ್ಯ 20 ವಾರಕ್ಕೆ ಆಗುವಷ್ಟು ಮೇವು ರೈತರಲ್ಲಿ ಸಂಗ್ರಹ ಇದೆ. ಅದನ್ನೂ ಮೀರಿ ಜಾನುವಾರುಗಳಿಗೆ ಇನ್ನೂ ಮೇವು ಬೇಕು ಎನ್ನುವ ರೈತರಗೆ ಮೇವುಬೀಜಗಳ ನೀಡುತ್ತೇವೆ. ಮೇವು ಬೀಜ ಬಿತ್ತನೆ ಮಾಡಿ, ಮೇವು ಬೆಳೆದು ಜಾನುವಾರುಗಳಿಗೆ ಕೊಡಬಹುದು ಎಂದರು.
ಈಗಾಗಲೇ ಗೋವಿನಕೋವಿ ಗ್ರಾಮದಲ್ಲೂ ನೂತನ ಪಶು ವೈದ್ಯಕೀಯ ಆಸ್ಪತ್ರೆಯನ್ನು ಶಾಸಕರು ಉದ್ಘಾಟಿಸಿದ್ದಾರೆ. ಯಾವ ಪಶು ಚಿಕಿತ್ಸಾಲಯ ಕಟ್ಟಡ ಶಿಥಿಲವಾಗಿವೆಯೋ ಅಂತಹ ಆಸ್ಪತ್ರೆಗಳ ಪಟ್ಟಿ ನೀಡಿ ಎಂದು ತಿಳಿಸಿದ್ದಾರೆ. ಆ ಪಟ್ಟಿಯನ್ನೂ ಸಹ ಶೀಘ್ರ ನೀಡುತ್ತೇವೆ ಎಂದು ಭರವಸೆ ನೀಡಿದರು.ಹೊನ್ನಾಳಿ ತಾಲೂಕು ಪಶು ವೈದ್ಯಕೀಯ ಮುಖ್ಯ ಆಡಳಿತಾಧಿಕಾರಿ ಡಾ.ರಾಜೇಶ್, ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎಂ.ಚಂದ್ರಶೇಖರ್, ಡಾ.ದಿನೇಶ್, ಡಾ.ಸುರೇಶ್, ಗುತ್ತಿಗೆದಾರ ಅಶೋಕ್, ಜಿ.ಪಂ. ಎಇಇ ಅಶೋಕ್, ಶಿವ ಬ್ಯಾಂಕ್ ಅಧ್ಯಕ್ಷ ರುದ್ರೇಶಪ್ಪ, ಗ್ರಾಮದ ಮುಖಂಡ ಗಣೇಶ್ ಇತರರು ಇದ್ದರು.
- - --6ಎಚ್.ಎಲ್.ಐ2: