ಚಿಕ್ಕಮಗಳೂರುಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ 2031ರ ವರದಿ ಸಿದ್ಧಪಡಿಸುವುದಕ್ಕೆ ನಿಖರವಾದ ಅಂಕಿ ಅಂಶ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ 2031ರ ವರದಿ ಸಿದ್ಧಪಡಿಸುವುದಕ್ಕೆ ನಿಖರವಾದ ಅಂಕಿ ಅಂಶ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಿಲ್ಲಾ ಮಾನವ ಅಭಿವೃದ್ಧಿ 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ 2031 ಯೋಜನೆ ಸಿದ್ದಪಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ
ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸುತ್ತೀರಿ ಆದರೆ, ಈ ರೀತಿಯ ವರದಿ ಸಿದ್ದ ಪಡಿಸುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡದಿದ್ದರೆ, ಜಿಲ್ಲೆಗೆ ದೊರೆಯಬೇಕಾದ ಸೌಲಭ್ಯ ದೊರೆಯುವುದಿಲ್ಲ. ಹೀಗಾಗಿ, ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ ಮಾತನಾಡಿ, ಯಾವುದೇ ಯೋಜನೆ ಸಿದ್ಧಪಡಿಸುವಾಗ ಇಲಾಖೆವಾರು ನೀಡಿರುವ ಮಾಹಿತಿ ತುಂಬಾ ಮುಖ್ಯ. 2016ರಲ್ಲಿ ಮಾನವ ಅಭಿವೃದ್ಧಿ ವರದಿ ತಯಾರಿಸಲಾಗಿತ್ತು. ಇದೀಗ 10 ವರ್ಷದ ಬಳಿಕ ಮಾನವ ಅಭಿವೃದ್ಧಿ ವರದಿ ತಯಾರಿಸಲಾಗುತ್ತಿದೆ. ಈ ವರದಿ ಆಧಾರವಾಗಿ ಸರ್ಕಾರ ಅನುದಾನ ಹಂಚಿಕೆ ತೀರ್ಮಾನಗಳನ್ನು ಮಾಡಲಾಗುತ್ತದೆ. ಹಾಗಾಗಿ, ನಿಖರ ಮಾಹಿತಿ ಕಳುಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಗತ್ಯ ಕಂಡು ಬಂದರೆ ತಾಲೂಕು ಮಟ್ಟದಲ್ಲಿ ಆನ್‌ಲೈನ್ ಕಾರ್ಯಾಗಾರ ನಡೆಸಲಾಗುವುದು. ಈ ವರದಿ ತಯಾರಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಾತ್ರ ದೊಡ್ಡಾಗಿದೆ ಎಂದು ಹೇಳಿದರು.- ಬಾಕ್ಸ್--ಎಲ್ಲಾ ಕಚೇರಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ ಹಾಕಿಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳ ಏನು ಎಂಬ ಅಂಶ ಅಳವಡಿಕೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗರಾಜ್ ನಿರ್ದೇಶಿಸಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ತಮ್ಮ ಇಲಾಖೆಯ ಯಾವುದು ಅನ್ವಯವಾಗಲಿದೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳು ದಾರಿ ದೀಪದಂತೆ. ಅದನ್ನು ಜಿಲ್ಲೆ ಮಟ್ಟಕ್ಕೆ ಅನ್ವಯ ಮಾಡಿಕೊಂಡರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ಆಗಲಿದೆ.- ಫೋಟೋ
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಿಲ್ಲಾ ಮಾನವ ಅಭಿವೃದ್ಧಿ 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ 2031 ಯೋಜನೆ ಸಿದ್ದಪಡಿಸುವ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ನಾಗರಾಜು, ಜಿಪಂ ಸಿಇಓ ಕೀರ್ತನಾ ಸೇರಿದಂತೆ ಮೊದಲಾದವರಿದ್ದರು.