ಲಿಂಗ ಭೇದ ಮಾಡದೇ ಸಮಾನ ಶಿಕ್ಷಣ ನೀಡಿ: ವರಸದ್ಯೋಜಾತ ಸ್ವಾಮೀಜಿ

| Published : Jul 19 2025, 02:00 AM IST

ಲಿಂಗ ಭೇದ ಮಾಡದೇ ಸಮಾನ ಶಿಕ್ಷಣ ನೀಡಿ: ವರಸದ್ಯೋಜಾತ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ಪಟ್ಟಣದ ತೆಗ್ಗಿನಮಠದ ಸಭಾಂಗಣದಲ್ಲಿ ಬೇಡ ಜಂಗಮ ಸಮಾಜದ ತಾಲೂಕು ಘಟಕದ ವತಿಯಿಂದ ಲಿ.ಚಿರಸ್ಥಹಳ್ಳಿಯ ಡಾ. ಕೆ.ಎಂ. ಮುರಿಗಯ್ಯನವರ ಜ್ಞಾಪಕಾರ್ಥವಾಗಿ 2024-25ನೇ ಸಾಲಿನಲ್ಲಿ ದ್ವಿತೀಯ ಪಿಯು ಸಿಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಹರಪನಹಳ್ಳಿ: ಲಿಂಗ ಭೇದ ಮಾಡದೇ ಸಮಾನ ಶಿಕ್ಷಣ ನೀಡಬೇಕು ಎಂದು ಇಲ್ಲಿಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದ್ದಾರೆ.

ಅವರು ಪಟ್ಟಣದ ತೆಗ್ಗಿನಮಠದ ಸಭಾಂಗಣದಲ್ಲಿ ಬೇಡ ಜಂಗಮ ಸಮಾಜದ ತಾಲೂಕು ಘಟಕದ ವತಿಯಿಂದ ಲಿ.ಚಿರಸ್ಥಹಳ್ಳಿಯ ಡಾ. ಕೆ.ಎಂ. ಮುರಿಗಯ್ಯನವರ ಜ್ಞಾಪಕಾರ್ಥವಾಗಿ 2024-25ನೇ ಸಾಲಿನಲ್ಲಿ ದ್ವಿತೀಯ ಪಿಯು ಸಿಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬೇಡ ಜಂಗಮ ಸಮಾಜದ ಸಂಸ್ಕಾರವಾದ ಅಯ್ಯಾಚಾರ, ದೀಕ್ಷೆ, ಲಿಂಗಪೂಜೆ, ಆಚಾರ-ವಿಚಾರಗಳನ್ನು ಮುಂದುವರಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಹಿರಿಯರಿಗೆ ಸಲಹೆ ನೀಡಿದರು.

ಸಮಾಜದ ಏಳಿಗೆಗಾಗಿ ಬಡ ವಿದ್ಯಾರ್ಥಿಗಳಿಗೆ ತೆಗ್ಗಿನಮಠ ಸಂಸ್ಥಾನವು ಉಚಿತ ಪ್ರಸಾದ ವಸತಿ ವ್ಯವಸ್ಥೆ ಮಾಡುತ್ತದೆ ಎಂದು ಹೇಳಿದರು.

ಮಕ್ಕಳು ಸಮಾಜದ ಏಳಿಗೆಗೆ ಶ್ರಮಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ, ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಚಿರಸ್ಥಹಳ್ಳಿ ಮಲ್ಲಿಕಾರ್ಜುನ ಕಲ್ಮಠ, ಎಸ್.ಎಂ. ವೀರಭದ್ರಯ್ಯ, ಕೆ.ಎಂ. ಗುರುಸಿದ್ದಯ್ಯ, ಟಿ.ಎಚ್.ಎಂ. ಮಲ್ಲಿಕಾರ್ಜುನಯ್ಯ, ಕೆ.ಎಂ. ಚೆನ್ನಮಲ್ಲಿಕಾರ್ಜುನ, ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಎಂ. ಜಗದೀಶ, ಮುಖ್ಯ ಶಿಕ್ಷಕ ಎ.ಎಸ್.ಎಂ. ಗುರುಪ್ರಸಾದ್, ಎಚ್.ಎಂ. ಬಸವರಾಜಯ್ಯ ಇತರರು ಪಾಲ್ಗೊಂಡಿದ್ದರು.