ರಾಜಕೀಯ ಮಾಡದೆ ಅರ್ಹರಿಗೆ ಸೌಲಭ್ಯ ಕಲ್ಪಿಸಿ

| Published : Mar 03 2024, 01:30 AM IST

ಸಾರಾಂಶ

ಮಾಗಡಿ: ಗ್ರಾಮ ಪಂಚಾಯಿತಿಯಲ್ಲಿ ರಾಜಕೀಯ ಬೆರೆಸದೆ ನಿಜವಾದ ಅರ್ಹರಿಗೆ ಪ್ರಾಮಾಣಿಕವಾಗಿ ಸೌಲಭ್ಯಗಳು ತಲುಪಿಸಬೇಕಿದೆ ಎಂದು ಗ್ರಾಮ ಸಭೆಯ ನಿಯೋಜಿತ ಅಧಿಕಾರಿ ಮಂಜುನಾಥ್ ಹೇಳಿದರು.

ಮಾಗಡಿ: ಗ್ರಾಮ ಪಂಚಾಯಿತಿಯಲ್ಲಿ ರಾಜಕೀಯ ಬೆರೆಸದೆ ನಿಜವಾದ ಅರ್ಹರಿಗೆ ಪ್ರಾಮಾಣಿಕವಾಗಿ ಸೌಲಭ್ಯಗಳು ತಲುಪಿಸಬೇಕಿದೆ ಎಂದು ಗ್ರಾಮ ಸಭೆಯ ನಿಯೋಜಿತ ಅಧಿಕಾರಿ ಮಂಜುನಾಥ್ ಹೇಳಿದರು.

ತಾಲೂಕಿನ ನೇತೇನಹಳ್ಳಿ ಗ್ರಾಪಂ ವತಿಯಿಂದ 2023- 24ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸದಸ್ಯರ ಗಮನಕ್ಕೆ ತಂದು ವಾರ್ಡ್‌ಗಳಲ್ಲಿ ಸಭೆ ಮಾಡಿ ಅರ್ಹರಿಂದ ಅರ್ಜಿ ಸ್ವೀಕರಿಸಿ ಗ್ರಾಮಸಭೆಯ ಅನುಮೋದನೆ ಪಡೆದು ಮಾಹಿತಿ ಕೊಟ್ಟ ನಂತರವಷ್ಟೇ ಅವರಿಗೆ ಕೆಲಸ ಕೊಡಬೇಕು ಎಂದು ಹೇಳಿದರು.

ನರೇಗಾ ಯೋಜನೆಯಡಿ ಒಂದು ಕುಟುಂಬಕ್ಕೆ ನೂರು ದಿನ ಇರುವುದರಿಂದ ನೂರು ದಿನಕ್ಕೆ ಎಷ್ಟು ಹಣ ಬರುತ್ತದೆ ಎಂಬುದರ ಮೇಲೆ ಅವರಿಗೆ ವೈಯಕ್ತಿಕ ಕೆಲಸ ನೀಡಬೇಕು. ಹೆಚ್ಚುವರಿ ಹಣವಿದ್ದರೆ ಬೇರೆಯವರ ಮಾನವ ದಿನವನ್ನು ಬಳಸಿಕೊಳ್ಳಬೇಕು. ಇಲ್ಲಿ ಸದಸ್ಯರು ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡಬೇಕು ರಾಜಕೀಯ ಮಾಡಿದರೆ ಸರ್ಕಾರದ ಯೋಜನೆ ವಾಪಸ್ ಹೋಗುತ್ತದೆ. ಎಲ್ಲರ ಸಹಕಾರ ಪಡೆದು ಅಭಿವೃದ್ಧಿಗೆ ಒತ್ತು ಕೊಡಬೇಕು. ಪ್ರತಿ ಮಂಗಳವಾರ ಮಧ್ಯಾಹ್ನ ಪಂಚಾಯಿತಿಗೆ ಭೇಟಿ ನೀಡಲಿದ್ದು ಯಾವುದೇ ಸಮಸ್ಯೆ ಇದ್ದರೂ ಸಕಾಲದ ಮೂಲಕ ಅರ್ಜಿ ನೀಡಿದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆಂದು ತಿಳಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪುರುಷೋತ್ತಮ್ ಮಾತನಾಡಿ, ವಾರ್ಡ್‌ ಸಭೆ ಮಾಡದೆ ವಿಶೇಷ ಗ್ರಾಮ ಸಭೆ ಕರೆದರೆ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಹೇಗೆ? ಪ್ರತಿ ಗ್ರಾಮದಲ್ಲೂ ಸಭೆ ಮಾಡಿ ಫಲಾನುಭವಿಗಳಿಗೆ ಮಾಹಿತಿ ನೀಡಿದಾಗ ಮಾತ್ರ ಗ್ರಾಮಸಭೆಗೆ ಹೆಚ್ಚಿನ ಫಲಾನುಭವಿಗಳು ಬರುತ್ತದೆ. ಈ ಬಾರಿ ಪಂಚಾಯಿತಿಗೆ ವಸತಿ ಯೋಜನೆಯಡಿ ಮನೆ ಬಂದಿರುವುದರಿಂದ ಎಲ್ಲರಿಂದಲೂ ಅಜ್ಜಿಗಳನ್ನು ಪಡೆದು ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಸಿಕೊಳ್ಳಲು ಅಧಿಕಾರಿಗಳು ಸಹಕಾರ ನೀಡಬೇಕು. ಇನ್ನು 10 ದಿನ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು. ಈ ಹಿಂದೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಬೇಕು. ಇನ್ನು ಮುಂದೆ ಗ್ರಾಮಸಭೆ ಮಾಡುವ ಮುನ್ನ ವಾರ್ಡ್‌ ಸಭೆ ಕಡ್ಡಾಯವಾಗಿ ಮಾಡಬೇಕು. ಸಭೆಯಲ್ಲಿ ಅಧಿಕಾರಿಗಳು ಇಂಜಿನಿಯರ್‌ಗಳು ಹಾಜರಿದ್ದಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ತಿಳಿಸಿದರು.ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವುದು ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮಾಡಲು ಅರ್ಜಿ ಸ್ವೀಕರಿಸಲಾಯಿತು. ಸಭೆಯಲ್ಲಿ ಪಿಡಿಒ ರಾಕೇಶ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ವರಲಕ್ಷ್ಮಮ್ಮ, ಸದಸ್ಯರಾದ ಶಿವಕುಮಾರ್, ಸುರೇಶ್, ಲಕ್ಷ್ಮಮ್ಮ, ಕಾರ್ಯದರ್ಶಿ ಹನುಮಂತರಾಜು ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪೋಟೋ 1ಮಾಗಡಿ3: ಮಾಗಡಿ ತಾಲೂಕಿನ ನೇತೇನಹಳ್ಳಿ ಗ್ರಾಪಂ ಮೊದಲನೇ ಸುತ್ತಿನ ಗ್ರಾಮ ಸಭೆಯನ್ನು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಉದ್ಘಾಟಿಸಿದರು.