ತಾಲೂಕಿನ ಮರೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗಿದ್ದು ಅಲ್ಲಿರುವ ಸಮಸ್ಯೆ ಪರಿಹರಿಸಿ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಲ್ಲಿ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಮರೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗಿದ್ದು ಅಲ್ಲಿರುವ ಸಮಸ್ಯೆ ಪರಿಹರಿಸಿ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಲ್ಲಿ ಒತ್ತಾಯಿಸಿದ್ದಾರೆ.ಈ ಸಂಬಂಧ ಸೋಮವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 1997ರಿಂದ ತಾಲೂಕಿನ ಮರೂರು ಸರ್ವೆ ನಂ.7.8ರ 32ಎಕರೆ ಜಮೀನಿನಲ್ಲಿ ತಲಾ 1ಎಕರೆಯಂತೆ ಗ್ರಾಮದ 32ಮಂದಿ ಫಲಾನುಭವಿಗಳು ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈ ಸಂಬಂಧ ಅಂದಿನ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಿಯಮಾನುಸಾರ 2006ರಲ್ಲಿ ಕಂದಾಯ ಇಲಾಖೆಯಿಂದ ಈ ಎರಡು ಸರ್ವೆ ನಂಬರುಗಳ 32ಮಂದಿ ಫಲಾನುಭವಿಗಳಿಗೆ ತಲಾ 1ಎಕರೆಯಂತೆ ಸಾಗುವಳಿ ಮಂಜೂರಾತಿ ಪತ್ರ ನೀಡಲಾಗಿದೆ. ಆದರೆ ಕೆಲವರು ರೈತರಿಗೆ ದಾರಿ ಬಿಡಲು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಬಾರಿ ತೊಂದರೆ ಅಗುತ್ತಿದೆ. ಪರಿಶೀಲನೆ ನಡೆಸಿ, ಕೂಡಲೇ ಜಮೀನು ಹಾಗೂ ನಕಾಶೆಯ ದಾರಿ ಒತ್ತುವರಿ ತೆರವುಗೊಳಿಸಿ ಬಡ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವಂತೆ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ವೈ.ರವಿ, ಕಂದಾಯ ಇಲಾಖೆಯ ವಿಎ ಹಾಗೂ ಆರ್‌ಐಗೆ ಆದೇಶಿಸಿದ್ದು ಇನ್ನೂ ಮೂರು ನಾಲ್ಕು ದಿನದಲ್ಲಿ ಮರೂರು ಗ್ರಾಮದ ಸರ್ವೆ ನಂಬರ್ 42.43ರ ಜಮೀನುಗಳಿಗೆ ಓಡಾಡಲು ಒತ್ತುವರಿ ತೆರವುಗೊಳಿಸಿ ನಕಾಶೆ ರಸ್ತೆ ಬಿಡಿಕೂಡುವ ಭರವಸೆ ವ್ಯಕ್ತಪಡಿಸಿದರು.ಇದೇ ವೇಳೆ ಸಂತ್ರಸ್ತರಾದ ಮೊರೂರು ಮಹದೇವಪ್ಪ, ರಾಮಲಿಂಗಪ್ಪ, ಕೃಷ್ಣಮೂರ್ತಿ, ಹನುಮಂತರಾಯಪ್ಪ ಸೋರಣ್ಣ, ಶಂವಗಂಗಮ್ಮ, ಶಿವಮ್ಮ ಹನುಮಕ್ಕ, ರತ್ಮಮ್ಮ ತಿಪ್ಪಮ್ಮ, ಪ್ರಕಾಶ್ ನೀಲಕಂಠಪ್ಪ, ಮಹಲಿಂಗಪ್ಪ ಶಾಂತರಾಜ್ ಇತರೆ ಅನೇಕ ಮಂದಿ ದಲಿತ ಫಲಾನುಭವಿಗಳಿದ್ದರು.