ಮೆಗಾ ಮಾರ್ಕೆಟ್‌ನಲ್ಲಿ ಸೌಲಭ್ಯ ಕಲ್ಪಿಸಿ

| Published : Jul 24 2024, 12:17 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯಲ್ಲಿ ಅಂಗಡಿ ಬಾಡಿಗೆ ಪಡೆದ ಮಾಲೀಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯಲ್ಲಿ ಅಂಗಡಿ ಬಾಡಿಗೆ ಪಡೆದ ಮಾಲೀಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಧ್ಯದಲ್ಲಿ ನಿರ್ಮಿಸಿರುವ ಮೆಗಾ ಮಾರುಕಟ್ಟೆಯಲ್ಲಿ ಲೀಲಾವಿನಲ್ಲಿ ಅಂಗಡಿಗಳನ್ನು ಬಾಡಿಗೆ ಪಡೆದಿದ್ದು, ಆದರೆ ಹನುಮಾನ ಮಂದಿರದಿಂದ ನಾಗೂರ ರಸ್ತೆ ಕೂಡುವವರೆಗೆ ಮೆಗಾ ಮಾರುಕಟ್ಟೆಯ ಕಾಂಪೌಂಡ್‌ ಗೋಡೆಯನ್ನು ತೆಗೆಸುವುದು. ಅಂಗಡಿಗಳಿಂದ ರಸ್ತೆಯವರೆಗೆ ಪಾವಟಿಗೆಗಳನ್ನು ಕಟ್ಟಿಸಿ ಕೊಡುವುದು. ಅಂಗಡಿಗಳಿಗೆ ಇರುವ ಶಟರ್‌ಗಳನ್ನು ಸರಳವಾಗಿ ಏರಿಸಿ ಇಳಿಸಲು ಬರುವ ಹಾಗೆ ವ್ಯವಸ್ಥೆ ಮಾಡಬೇಕು. ಈ ಮೂಲಕ ವ್ಯಾಪಾರಕ್ಕೆ ಅನುಕೂಲವಾಗುವ ಕೆಲಸಗಳನ್ನು ಮಾಡಿಕೊಡುವುದಾಗಿ ತಿಳಿಸಿದ್ದೀರಿ. ಆದರೆ ಯಾವ ಕೆಲಸಗಳು ಇದುವರೆಗೂ ಮಾಡಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಾಡಿಗೆ ಅಂಗಡಿಗಳ ಮಾಲೀಕರಾದ ಮಂಜುನಾಥ ಬಡಿಗೇರ, ಬಸವರಾಜ ಸೊನ್ನದ, ಈರಣ್ಣ ಪತ್ತಾರ, ಸಿದ್ದಣ್ಣ ಪತ್ತಾರ, ಜಗದೀಶ ನಾಗಠಾಣ, ಚಾಂದಭಾಷಾ ಕೊರಬು, ಪ್ರಕಾಶ ಪತ್ತಾರ ಇತರರು ಇದ್ದರು.ಈ ವೇಳೆ ಮಂಜುನಾಥ ಬಡಿಗೇರ ಮಾತನಾಡಿ, ನಾವು ನಿಗದಿ ಪಡಿಸಿದ ಬಾಡಿಗೆ ಕಟ್ಟುತ್ತಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ನಮ್ಮ ವ್ಯಾಪಾರ ಚೆನ್ನಾಗಿ ನಡೆಯಲು ಸಾಧ್ಯ. ಈಗ ನಾವು ಹಾಕಿರುವ ಬಂಡವಾಳಕ್ಕೂ ತೊಂದರೆ ಅನುಭವಿಸುತ್ತಿದ್ದೇವೆ, ನಮ್ಮ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳಿಗೂ, ಮತಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರಿಗೂ ಮನವಿ ಸಲ್ಲಿಸಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಪುರಸಭೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು.