ಸಾರಾಂಶ
ಎರಡು ವರ್ಷದಲ್ಲಿ 7 ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದೇವೆ. ₹1350 ಕೋಟಿಯಲ್ಲಿ ಹಾವೇರಿಗೆ ಕುಡಿಯುವ ನೀರು, ₹884 ಕೋಟಿಯಲ್ಲಿ ಜಲಜೀವನ ಮಿಷನ್, ₹643 ಕೋಟಿಯಲ್ಲಿ ಸ್ವಚ್ಛ ಭಾರತ ಯೋಜನೆಗಳನ್ನು ಸಾಕಾರಗೊಳಿಸಿದ್ದೇವೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾಂಗ್ರೆಸ್ ಪಕ್ಷಕ್ಕೆ ಆನೆಬಲವಿದ್ದಂತೆ. ವರೆ ಹಚ್ಚಿದಾಗೆಲ್ಲ ನಮ್ಮ ಜಿಲ್ಲೆಯಲ್ಲಿ ಕಾಂದಿಕಂಸ್ ಗೆಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಭಾನುವಾರ ತಾಲೂಕಿನ ಅಕ್ಕಿಆಲೂರಿನಲ್ಲಿ ₹650 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಅತ್ಯಂತ ಗಂಭೀರ ಸ್ಪರ್ಧೆಯ ನಡುವೆ ಹಾನಗಲ್ಲ ಬೈ ಇಲೆಕ್ಷನ್ ಗೆದ್ದಿದ್ದೇವೆ. ಇತ್ತೀಚೆಗಷ್ಟೆ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಮಣಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೇವೆ. ಯಾವ ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿ ವರೆ ಹಚ್ಚುವ ಪ್ರಸಂಗ ಬಂದಾಗ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಪಕ್ಷಕ್ಕೆ ಬಲ ತಂದು ಕೊಟ್ಟಿದ್ದೇವೆ. ವೈದ್ಯಕೀಯ ಕಾಲೇಜು ಪೂರ್ಣಗೊಳಿಸಿ ಒಂದೇ ವರ್ಷದಲ್ಲಿ ಹೊಸ ಕಟ್ಟಡದಲ್ಲಿ ಆರಂಭಿಸಿದ್ದೇವೆ. ಈಗ ಇಲ್ಲಿ 350 ಹಾಸಿಗೆಯ ಆಸ್ಪತ್ರೆಗೆ ಮುಖ್ಯಮಂತ್ರಿಗಳು ಅನುದಾನ ನೀಡಬೇಕು ಎಂದು ವಿನಂತಿಸಿದರು.ಎರಡು ವರ್ಷದಲ್ಲಿ 7 ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದೇವೆ. ₹1350 ಕೋಟಿಯಲ್ಲಿ ಹಾವೇರಿಗೆ ಕುಡಿಯುವ ನೀರು, ₹884 ಕೋಟಿಯಲ್ಲಿ ಜಲಜೀವನ ಮಿಷನ್, ₹643 ಕೋಟಿಯಲ್ಲಿ ಸ್ವಚ್ಛ ಭಾರತ ಯೋಜನೆಗಳನ್ನು ಸಾಕಾರಗೊಳಿಸಿದ್ದೇವೆ. 150 ಪೌರ ಕಾರ್ಮಿಕರನ್ನು ಕಾಯಂಗೊಳಿಸಿದ್ದೇವೆ. ಈಗ ಕಂಚಾರಗಟ್ಟಿ ಬ್ಯಾರೇಜ್ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು. ಕಳೆದ ಲೋಕಸಭಾ ಚುನಾವಣೆ ನಾವು ಗೆಲ್ಲಬೇಕಾಗಿತ್ತು. ಮುಂದಿನ ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇವೆ ಎಂದರು.ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರ ಕಾರ್ಯವೈಖರಿಯಿಂದ ಮಾದರಿ ತಾಲೂಕಾಗಿದೆ. ರಸ್ತೆಗಳ ಅಭಿವೃದ್ಧಿಗೆ ₹40 ಕೋಟಿ ರೂ ನೀಡಿದ್ದೇನೆ. ತಾಲೂಕಿಗೆ ಬೆಳಗಾವಿ ಜಿಲ್ಲೆಗೂ ನಾ.ಸು. ಹರ್ಡಿಕರ ಮೂಲಕ ಒಳ್ಳೆಯ ಸಂಬಂಧವಿದೆ ಎಂದು ನೆನಪಿಸಿಕೊಂಡ ಸತೀಶ ಜಾರಕಿಹೊಳಿ, ಹಾನಗಲ್ಲ ಪಕ್ಕದಲ್ಲಿ 9 ಕಿಮೀ ಬೈಪಾಸ್ ರಸ್ತೆ ಟೆಂಡರ್ ಹಂತದಲ್ಲಿದ್ದು, ಶೀಘ್ರ ಕಾಮಗಾರಿ ಆರಂಭಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಶಾಸಕ ಶ್ರೀನಿವಾಸ ಮಾನೆ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂಅಹ್ಮದ, ಶಾಸಕರಾದ ಯಾಸೀರಖಾನ ಪಠಾಣ, ಪ್ರಕಾಶ ಕೋಳಿವಾಡ, ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ ಖಾದ್ರಿ ಹಾಗೂ ಸೋಮಣ್ಣ ಬೇವಿನಮರದ, ಆನಂದ ಗಡ್ಡದೇವರಮಠ, ಸಂಜೀವ ನೀರಲಗಿ, ಎಸ್.ಆರ್. ಪಾಟೀಲ, ಕೊಟ್ರೇಶಪ್ಪ ಬಸೇಗಣ್ಣಿ, ವಿಜಯಕುಮಾರ ದೊಡ್ಡಮನಿ, ಮಖಬುಲ್‌ಅಹ್ಮದ ಪಠಾಣ, ನಾಗರಾಜ ಪಾಟೀಲ, ಪಾರ್ವತಿ ಬಡಿಗೇರ, ಪರಶುರಾಮ ಖಂಡೂನವರ, ವೀಣಾ ಗುಡಿ ಮೊದಲಾದವರು ಇದ್ದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸ್ವಾಗತಿಸಿದರು. ತಹಸೀಲ್ದಾರ್ ಎಸ್. ರೇಣುಕಾ ವಂದಿಸಿದರು. ನಾಗರಾಜ ನಡುವಿನಮಠ ಹಾಗೂ ಶಿವಾನಂದ ಕ್ಯಾಲಕೊಂಡ ನಿರೂಪಿಸಿದರು.ಹಾವೇರಿ 350 ಹಾಸಿಗೆಯ ಆಸ್ಪತ್ರೆಗೆ ಅನುದಾನ ನೀಡಿ: ಸಚಿವ ಶಿವಾನಂದ ಪಾಟೀಲProvide funding for a 350 bed hospital in Haveri: Minister Shivanand Patilಹಾನಗಲ್ಲ ಸುದ್ದಿ, ಶಿವಾನಂದ ಪಾಟೀಲ, ಜಿಲ್ಲಾಸ್ಪತ್ರೆ, Hanagal News, Shivananda Patil, District Hospitalಎರಡು ವರ್ಷದಲ್ಲಿ 7 ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದೇವೆ. ₹1350 ಕೋಟಿಯಲ್ಲಿ ಹಾವೇರಿಗೆ ಕುಡಿಯುವ ನೀರು, ₹884 ಕೋಟಿಯಲ್ಲಿ ಜಲಜೀವನ ಮಿಷನ್, ₹643 ಕೋಟಿಯಲ್ಲಿ ಸ್ವಚ್ಛ ಭಾರತ ಯೋಜನೆಗಳನ್ನು ಸಾಕಾರಗೊಳಿಸಿದ್ದೇವೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.