ಅವಿಭಜಿತ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿ

| Published : Jun 28 2024, 12:49 AM IST

ಸಾರಾಂಶ

ಪ್ರತಿವರ್ಷ ಕೆಂಪೇಗೌಡರ ಜಯಂತಿ ಆಚರಿಸುವ ಮೂಲಕ ಸಮುದಾಯ ಸಂಘಟಿಸಲು ಚೈತನ್ಯ, ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ಧತೆಗೆ ಪೂರಕವಾಗುವ ದೆಸೆಯಲ್ಲಿ ಆರ್ಥಪೂರ್ಣ ಆಚರಣೆಯಾಗಿದೆ. ಪ್ರತಿಯೊಬ್ಬರು ನಾಡು-ನುಡಿಯ ಅಭಿವೃದ್ದಿಗಾಗಿ ಶ್ರಮಿಸಬೇಕು,

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ-ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗೆ ಜನಪ್ರತಿನಿಧಿಗಳಾದವರೂ ಶಾಶ್ವತ ನೀರಾವರಿ ಯೋಜನೆಯನ್ನು ತರುವಂತಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಜಿಲ್ಲಾ ಶಾಖಾ ಮಠದ ಪೀಠಾಧಿಪತಿ ಶ್ರೀ ಮಂಗಳಾನಂದ ನಾಥ ಸ್ವಾಮೀಜಿ ಕರೆ ನೀಡಿದರು.ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ನಾಡ ಪ್ರಭು ಕೆಂಪೇಗೌಡರ ೧೧೫ನೇ ಜಯಂತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕೆಂಪೇಗೌಡರ ಆದರ್ಶ ಪಾಲಿಸಿ

ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ನಗರಕ್ಕೆ ಒಕ್ಕಲಿಗ ಸಮುದಾಯದ ರೈತರು ತಮ್ಮ ಜಮೀನುಗಳನ್ನು ಅರ್ಪಿಸಿ ಕಟ್ಟಿದ ಬೆಂಗಳೂರು ನಗರ ವಿಶ್ವಕ್ಕೆ ಮಾದರಿಯಾಗಿದೆ. ಬೆಂಗಳೂರು ಇನ್ನಷ್ಟು ಅಭಿವೃದ್ದಿಪಡಿಸಿ ಬೆಳೆಸುವ ಮೂಲಕ ಕೆಂಪೇಗೌಡರ ಕಂಡಿದ್ದ ಕನಸು ನನಸು ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ, ಕೆಂಪೇಗೌಡರ ಆದರ್ಶ ಪ್ರತಿಯೊಬ್ಬರು ಜೀವನದಲ್ಲಿ ಮೈಗೊಡಿಸಿ ಕೊಳ್ಳಬೇಕು ಎಂದರು. ಪ್ರತಿವರ್ಷ ಕೆಂಪೇಗೌಡರ ಜಯಂತಿ ಆಚರಿಸುವ ಮೂಲಕ ಸಮುದಾಯ ಸಂಘಟಿಸಲು ಚೈತನ್ಯ, ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ಧತೆಗೆ ಪೂರಕವಾಗುವ ದೆಸೆಯಲ್ಲಿ ಆರ್ಥಪೂರ್ಣ ಆಚರಣೆಯಾಗಿದೆ. ಪ್ರತಿಯೊಬ್ಬರು ನಾಡು-ನುಡಿಯ ಅಭಿವೃದ್ದಿಗಾಗಿ ಶ್ರಮಿಸಬೇಕು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಶಾಂತಿ ಕಾಪಾಡುವ ಮೂಲಕ ಗೌರವಿಸಬೇಕು ಎಂದು ತಿಳಿಸಿದರು.ದೇವೇಗೌಡ ಶ್ರೇಷ್ಠ ನಾಯಕ

ರಾಷ್ಟ್ರ ಮಟ್ಟದ ಒಕ್ಕಲಿಗ ಸಮುದಾಯದ ಸರ್ವಶ್ರೇಷ್ಠ ನಾಯಕ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರದ ಕೃಷಿ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಎಸ್.ಎಂ.ಕೃಷ್ಣ, ದಿ.ಕೆ.ಸಿ.ರೆಡ್ಡಿ ಮುಂತಾದವರ ಕೊಡುಗೆ ಅಪಾರ ಎಂದರು.ಶಿಕ್ಷಣ ಇಲಾಖೆಯ ಅಧಿಕಾರಿ ಅಶೋಕ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಮುಖಂಡರಾದ ಬಿಸಪ್ಪಗೌಡ, ಸಿ.ಎಂ.ಆರ್. ಶ್ರೀನಾಥ್, ಶಿವಕುಮಾರ್, ಡಿ.ಕೃಷ್ಣಪ್ಪ, ನಾಗನಾಳ ಸೋಮಣ್ಣ, ಡಾ.ರಮೇಶ್, ವಕ್ಕಲೇರಿ ರಾಮು, ಗೋವಿಂದಪ್ಪ, ಸಿ.ಎಂ.ಆರ್ ಹರೀಶ್, ಮುನಿರಾಜು, ಸೀಸಂದ್ರ ಗೋಪಾಲ್, ವೈ.ಶಿವಕುಮಾರ್, ಜನಪ್ಪನಹಳ್ಳಿ ನವೀನ್‌ಕುಮಾರ್, ಮೈಲಾಂಡ್ಲಹಳ್ಳಿ ಮುರಳಿ, ಮುರಳಿಗೌಡ, ರಾಕೇಶ್, ಡೆಕನ್ ರಾಮಕೃಷ್ಣ, ವಡಗೂರು ಹರೀಶ್, ಪವನ್ ನಾರಾಯಣಸ್ವಾಮಿ, ಸೊಣ್ಣೇಗೌಡ, ಚಂಜಿಮಲೆ ರಮೇಶ್, ನಾಗರಾಜಗೌಡ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು. ಸಮಾರಂಭದಲ್ಲಿ ಗುತ್ತಿಗೆದಾರ ಕೃಷ್ಣಾರೆಡ್ಡಿ ಸ್ವಾಗತಿಸಿ, ವಕೀಲ ಮಾಗೇರಿ ನಾರಾಯಣಸ್ವಾಮಿ ಪ್ರಾರ್ಥಿಸಿದರು.